ರಾಜ್ಯದಲ್ಲಿ ಮಳೆ ಅಭಾವ, ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ – ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ರಾಜ್ಯದಲ್ಲಿನ ಪ್ರಸ್ತುತ ಮಳೆ ಕೊರತೆಯನ್ನು ನೀಗಿಸಲು ಮತ್ತು ರಾಜ್ಯಾದ್ಯಂತ ತೀವ್ರ ನೀರಿನ ಅಭಾವ ತಡೆಗಟ್ಟಲು ರಾಜ್ಯ ಸರ್ಕಾರ ಮೋಡ ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದೆ.

ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ, ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದಕ್ಕಾಗಿ ಎಲ್ಲಾ ಆಡಳಿತಾತ್ಮಕ ಸಿದ್ಧತೆಗಳು ಪೂರ್ಣಗೊಂಡಿದ್ದು, ಪ್ರಮುಖ ಅನುಷ್ಠಾನ ಸಮಿತಿಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

ಸಿಎಸ್ ಅವರ ಜೊತೆ ಮಾತಾಡಿದ್ದೇನೆ. ಇವತ್ತೇ ಕಮಿಟಿ ರಚನೆ ಆಗುತ್ತದೆ. ಕಮಿಟಿಯಿಂದ ರಿಪೋರ್ಟ್ ಪಡೆದು ಮುಂದಿನ ಪ್ರಕ್ರಿಯೆ ಮಾಡುತ್ತೇವೆ.ಎರಡು ಉನ್ನತ ಮಟ್ಟದ ಸಭೆಗಳು ಈಗಾಗಲೇ ನಡೆದಿವೆ ಮತ್ತು ಇಲಾಖಾ ಕಾರ್ಯದರ್ಶಿಗಳಿಗೆ ನಿರ್ದಿಷ್ಟ ಕಾರ್ಯಾಚರಣೆಯ ನಿರ್ದೇಶನಗಳನ್ನು ನೀಡಲಾಗಿದೆ. ಡೆವಲಪ್ಮೆಂಟ್ ಕಮೀಷನರ್ ನೇತೃತ್ವದಲ್ಲಿ ಮಾನಿಟರ್ ಕಮಿಟಿ ಮತ್ತು ಟೆಕ್ನಿಕಲ್ ಕಮಿಟಿ ಆಗಬೇಕು ಎಂದರು.

ಮೋಡ ಬಿತ್ತನೆ ಯಶಸ್ವಿಯಾಗುವ ಬಗ್ಗೆ ಯೋಚನೆ ಇದೆ. ಶೇ.30 ಆದ್ರು ಆಗಲಿ ಅನ್ನೋದು ನಮ್ಮ ಇಚ್ಛೆ. ಹಿಂದೆ 3 ಬಾರಿ ಮೋಡ ಬಿತ್ತನೆ ಆಗಿದೆ. ಮಳೆ ಕಡಿಮೆ ಆಗಿದೆ. ಇದರಿಂದ ಜನರಿಗೆ ಅನುಕೂಲ ಆಗಬಹುದು ಅಂತ ಮೋಡ ಬಿತ್ತನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಈ ಸಮಿತಿಗಳು ಮುಂದಿನ ಎರಡು ಮೂರು ದಿನಗಳಲ್ಲಿ ಆರಂಭಿಕ ತಾಂತ್ರಿಕ ಪರೀಕ್ಷೆ ನಡೆಸುತ್ತವೆ, ನಂತರ ಮೋಡ ಬಿತ್ತನೆ ಕಾರ್ಯ ಮತ್ತು ಕ್ಷೇತ್ರ ಪರಿಶೀಲನೆ ಕಾರ್ಯ ಅಧಿಕೃತವಾಗಿ ಪ್ರಾರಂಭವಾಗುತ್ತವೆ ಎಂದು ಹೇಳಿದ್ದಾರೆ.

ಪ್ರಸ್ತುತದಲ್ಲಿನ ಮಳೆಯ ಕೊರತೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಮತ್ತು ತೀವ್ರ ನೀರಿನ ಕೊರತೆಯನ್ನು ತಡೆಗಟ್ಟಲು ಆದ್ಯತೆಯ ಮೇಲೆ ಮೋಡ ಬಿತ್ತನೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದೇವೆ. ಈ ಯೋಜನೆಗಾಗಿ ಮೂರು ವಿಶೇಷ ಸಮಿತಿಗಳನ್ನು ಇಂದು ಔಪಚಾರಿಕವಾಗಿ ರಚಿಸಲಾಗುತ್ತಿದೆ ಎಂದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post