ನಾಗೇಂದ್ರರ ರಾಜೀನಾಮೆಗಾಗಿ ಸದನದಲ್ಲಿ ಹೋರಾಟ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡದೇ ಇದ್ದರೆ ಇಡೀ ರಾಜ್ಯಾದ್ಯಂತ ನಮ್ಮ ಪಕ್ಷ ಹೋರಾಟ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಕಟಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಸರ್ಕಾರದಲ್ಲಿ 187 ಕೋಟಿ ಲೂಟಿ ಮಾಡಿದರು ಎಂಬ ಹಿನ್ನೆಲೆಯಲ್ಲಿ ನಾಗೇಂದ್ರ ಅವರನ್ನ ಆ ಕಾಲದಲ್ಲಿ ಚರ್ಚೆಯಾಗಿ ತಪ್ಪಿತಸ್ಥರು ಅಂತ ಗೊತ್ತಾದ ಮೇಲೆ ಅವರನ್ನ ಸಂಪುಟದಿಂದ ವಜಾಗೊಳಿಸಲಾಗಿತ್ತು. ಆದರೆರ, ಈಗ ಡಿ.ಕೆ ಶಿವಕುಮಾರ್ ನೇತೃತ್ವದ ಮಂತ್ರಿಮಂಡಲದಲ್ಲಿ ಯಾವುದೇ ಕೋರ್ಟಿನ ಆದೇಶವಿಲ್ಲದೆ ಕೋರ್ಟಿನಲ್ಲಿ ಈಗಲೂ ಕೂಡ ಮೊಕದ್ದಮೆ ಬಾಕಿ ಇದ್ದರೂ ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ ಎಂದು ಟೀಕಿಸಿದರು.

ಪೆÇಲೀಸ್ ಇಲಾಖೆಯಿಂದ ಈಗಲೂ ಪೂರ್ಣವಾದ ಚಾರ್ಜ್ ಶೀಟ್ ಅನ್ನು ಫೈಲ್ ಮಾಡೇ ಇಲ್ಲ. ಹೀಗಿದ್ದರೂ ಕೂಡ ಅವರು ಈಗಲೂ ಅಪರಾಧಿಯಾಗಿದ್ದಾರೆ. ಆ ಕಾರಣದಿಂದ ಅವರನ್ನು ಸಂಪುಟದಿಂದ ಕೈಬಿಡಬೇಕು ಅಂತ ಹೇಳಿ ಒತ್ತಾಯ ಮಾಡಿ ನಾವು ಹೋರಾಟ ಮಾಡುತ್ತಿದ್ದೇವೆ. ಹೀಗಿದ್ದರೂ ಕೇವಲ ಚರ್ಚೆ ಮಾಡೋಣ ಎನ್ನುತ್ತಾರೆ. ಚರ್ಚೆ ಮಾಡೋದು ಏನಿದೆ? ಈಗಾಗಲೇ ಚರ್ಚೆಯಾಗಿ ಅವರು ವಜಾಗೊಂಡಿದ್ದಾರೆ. ಮತ್ತೆ ನೂರೆಂಬತ್ತೇಳು ಕೋಟಿ ರೂಪಾಯಿ ನುಂಗಲಾಗಿದೆ ಎಂದು ತಿಳಿಸಿದರು. ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನೂರೆಂಬತ್ತೇಳು ಕೋಟಿ ಆಗಿಲ್ಲ, 89 ಕೋಟಿ ಲೂಟಿಯಾಗಿದೆ ಅಂತ ಒಪ್ಪಿಕೊಂಡಿದ್ದಾರೆ ಎಂದು ಗಮನ ಸೆಳೆದರು.

ನಾವು ರಿಕವರಿ ಮಾಡ್ತೀವಿ ಅಂತ ಹೇಳಿದ್ದಾರೆ. ಈಗ ಅಲ್ಪಸ್ವಲ್ಪ ಹಣ ರಿಕವರಿಯೂ ಮಾಡಿದ್ದಾರೆ. ಆದರೆ ರಿಕವರಿ ಆದಮೇಲೆ ಅಲ್ಲಿಗೆ ಅವರು ತಪ್ಪಿತಸ್ಥರು ಅಲ್ವಾ? ಅವರಿಂದ ಅಲ್ಲಿಗೆ ಕೇಸ್ ಕ್ಲೋಸ್ ಕ್ಲೋಸ್ ಆಗುತ್ತಾ? ಈಗ ಯಾರಾದರೂ ಕದ್ದರೆ, ಕದ್ದ ಮಾಲು ವಾಪಸ್ ಕೊಟ್ರೆ ಅವರು ನಿರಾಪರಾಧಿ ಆಗ್ತಾರಾ? ಇದು ಪ್ರಶ್ನೆ ಎಂದರು.

ಇವತ್ತು ನಾಗೇಂದ್ರ ಅವರು ಪ್ರೆಸ್ ಕಾನ್ಫರೆನ್ಸ್ ಮಾಡಿದ್ದಾರೆ. ಆ ಅವರು ಹೇಳಿದ್ದಾರೆ, ನಾನು ವಾಲ್ಮೀಕಿ ಸಮುದಾಯದವನಾದ್ದರಿಂದ ನಾನು ದಲಿತ ನನ್ನ ಕಾರಣಕ್ಕೆ ನಮ್ಮನ್ನ ಟಾರ್ಗೆಟ್ ಮಾಡಲು ಆಗ್ತಾ ಇದೆ ಅಂತ ಹೇಳಿದ್ದಾರೆ. ಮುಖ್ಯಮಂತ್ರಿಗಳಿಗಾಗಲಿ, ನಾಗೇಂದ್ರ ಅವರಿಗೂ ಕೂಡ ನಾನು ಕೇಳಲಿಕ್ಕೆ ಬಯಸುತ್ತೇನೆ. ವಾಲ್ಮೀಕಿ ಯಾರು? ವಾಲ್ಮೀಕಿ ನಿಗಮ ಯಾರದು? ವಾಲ್ಮೀಕಿ ನಿಗಮದಲ್ಲಿ ನೀವೇ ವಾಲ್ಮೀಕಿ ಸಮುದಾಯದವರಾಗಿ ಆ ಜನಾಂಗಕ್ಕೆ ತಲುಪಬೇಕಾದ ಹಣ ಲೂಟಿ ಮಾಡಿ ನೀವೇ ನುಂಗಿದ ಮೇಲೆ ನಿಮ್ಮನ್ನ ಟಾರ್ಗೆಟ್ ಹೇಗೆ ಮಾಡಲಿಕ್ಕೆ ಆಗುತ್ತೆ? ಎಂದು ಕೇಳಿದರು.

ಹಣ ನುಂಗಿದವರಿಗೆ ಸನ್ಮಾನ ಮಾಡ್ತಾರಾ?

ಹಣ ನುಂಗಿದವರಿಗೆ ಸನ್ಮಾನ ಮಾಡ್ತಾರಾ? ಇದು ನೀವು ಆ ಸಮುದಾಯಕ್ಕೆ ಮಾಡಿದ ಅನ್ಯಾಯ ಅಲ್ವಾ? ಇದು ಹಣ ಕದ್ದರೆ ನಾವು ಜಾತಿಯನ್ನು ಮುಂದೆ ಇಟ್ಟುಕೊಳ್ಳಬಾರದು. ಕದ್ದು ನಾವು ನಮ್ಮ ಜನಾಂಗಕ್ಕೆ ಅನ್ಯಾಯ ಮಾಡಿದ್ದೇವೆ. ಆ ಕಾರಣದಿಂದ ಅವರು ಇವತ್ತು ಯೋಚನೆ ಮಾಡಬೇಕಾಗಿತ್ತು. ನಾನು ಮಾಡಿದ ಅನ್ಯಾಯಕ್ಕೆ ನಾನು ಇನ್ನೊಬ್ಬರ ಮಾತು ಹೇಳೋವರೆಗೆ ಕಾಯೋದಿಲ್ಲ. ನನಗೆ ಅಂತಾ ಮಂತ್ರಿಗಿರಿ ಬೇಕಾಗಿಲ್ಲ. ಇನ್ನೊಬ್ಬರಿಂದ ಛೀಮಾರಿ ಹಾಕಿಸಿಕೊಳ್ಳುವಂತ ಅವಶ್ಯಕತೆ ನನಗಿಲ್ಲ. ಆದ್ದರಿಂದ ನಾನು ಮಂತ್ರಿಗಿರಿಗೆ ರಾಜೀನಾಮೆ ಕೊಡ್ತೀನಿ ಅಂತ ಅವರೇ ಕೊಡಬೇಕಾಗಿತ್ತು ಎಂದು ಆಗ್ರಹಿಸಿದರು.

ದಲಿತರ ಹಣ ನುಂಗಲು ಅನುಮತಿ ಇದೆಯೇ?

ಆದರೆ ಅದನ್ನು ಬಿಟ್ಟು ನಾನು ದಲಿತ ಅಂದಮೇಲೆ ದಲಿತರ ಹಣ ನುಂಗಲಿಕ್ಕೆ ನಿಮಗೆ ಏನು ಅನುಮತಿ ಕೊಟ್ಟಿದ್ದಾರಾ? ದಲಿತರ ಹಣ ದಲಿತರು ಮಾತ್ರ ಮುಂಗಬಹುದು ಅಂತ ಇದೆಯಾ? ಈ ರೀತಿ ನೀವು ಅಪಾದಿತರಾಗಿದ್ದೀರಿ. ನಿಮ್ಮ ಮೇಲೆ ಈಗಲೂ ಕೇಸಿದೆ. ಯಾವುದೇ ಕೋರ್ಟು ನಿಮಗೆ ಆದೇಶ ಕೊಟ್ಟಿಲ್ಲ. ಅಂದಮೇಲೆ ನೀವು ಮಂತ್ರಿಮಂಡಲದಲ್ಲಿ ಮುಂದುವರಿಯಲಿಕ್ಕೆ ಯೋಗ್ಯರಲ್ಲ ಎಂದು ಹೇಳಿದರು.

ಸಭಾಪತಿಗಳು ಆವೇಶಕ್ಕೆ ಬಿದ್ದು “ನೀವೆಲ್ಲ ಮಾಡೋದು ಸರಿಯಲ್ಲ, ಚರ್ಚೆಗೆ ಬನ್ನಿ” ಅಂದರು. ಏನು ಚರ್ಚೆಗೆ ಬರೋದು? ನಾವು ಚರ್ಚೆ ಮಾಡಿದ ತಕ್ಷಣ 187 ಕೋಟಿ ಹಣ ಏನಾದರೂ ಐವತ್ತು ಕೋಟಿಗೆ ಬರುತ್ತಾ? ಅದμÉ್ಟೀ ಇರುತ್ತೆ ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ ಪಕ್ಷ ಹೆಚ್ಚು ಭ್ರಷ್ಟ

ಎಷ್ಟು ನಾಗೇಂದ್ರ ಭ್ರಷ್ಟರೋ ಅದಕ್ಕಿಂತ ಕಾಂಗ್ರೆಸ್ಸು ಹೆಚ್ಚು ಭ್ರಷ್ಟ. ಈ ಭ್ರಷ್ಟಚಾರಕ್ಕೆ ಇವತ್ತು ಕುಮ್ಮಕ್ಕು ಕೊಡ್ತಾ ಇರೋದು ಕೂಡ ಕಾಂಗ್ರೆಸ್ ಪಕ್ಷ. ಅವರು ದುಡ್ಡು ಹೊಡೆದು ಅವರ ಜೋಬಿಗೆ ಇಟ್ಟಿದ್ದರಿಂದ ಈಗ ಇವರನ್ನ ರಕ್ಷಣೆ ಮಾಡಲಿಕ್ಕೆ ಅವರು ಬಂದಿದ್ದಾರೆ ಎಂದು ಆರೋಪಿಸಿದರು. ಯಾವುದೇ ಕಾರಣಕ್ಕೆ ನಾವು ಹೋರಾಟದಿಂದ ಹಿಂದೆ ಸರಿಯೋದಿಲ್ಲ ಎಂದು ಎಚ್ಚರಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others