ಇವತ್ತಿನ ವಿಶೇಷ ಸ್ಟೋರಿ ಏನಪ್ಪಾ ಅಂದ್ರೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಹೌದಾ ರಾಯರನ್ನು ನೆನೆಯೋಣ. 17ನೇ ಶತಮಾನದ ಮಹಾನ್ ವೈಷ್ಣವ ಸಂತ ಮತ್ತು ದ್ವೈತ ತತ್ತ್ವಜ್ಞಾನಿ ಶ್ರೀ ರಾಘವೇಂದ್ರ ಸ್ವಾಮಿಗಳ ಸ್ಮರಣೆಯನ್ನು ಮಾಡುವ ವಿಶೇಷ ದಿನ ಇವತ್ತು.
ಶ್ರೀ ರಾಘವೇಂದ್ರ ಸ್ವಾಮಿಗಳನ್ನು ‘ಶಂಖುಕರ್ಣ’ ಋಷಿಯ ಅವತಾರವೆಂದು ನಂಬಲಾಗಿದೆ. ಸೃಷ್ಟಿಯ ನಿಯಮದಂತೆ, ಅವರು ಮೊದಲು ಭಾಗವತ ಧರ್ಮವನ್ನು ಸಾರಿದ ಪ್ರಹ್ಲಾದನಾಗಿ, ಮಹಾಭಾರತದ ಸಮಯದಲ್ಲಿ ಬಾಹ್ಲೀಕರಾಜನಾಗಿ ಹಾಗೂ ಕಲಿಯುಗದಲ್ಲಿ ಶ್ರೀ ವ್ಯಾಸರಾಜರಾಗಿ ಜನ್ಮತಾಳಿದ್ದರು. ಆ ಬಳಿಕ ವಿಜಯನಗರ ಸಾಮ್ರಾಜ್ಯದ ಭುವನಗಿರಿಯಲ್ಲಿ (ಭುವನವೀರ ಪಟ್ಟಣ ಸೀಮೆ) ತಿಮ್ಮಣ್ಣ ಭಟ್ಟ ಹಾಗೂ ಗೋಪಿಕಾಂಬ ದಂಪತಿಯ ಪುತ್ರನಾಗಿ ಜನಿಸಿದರು.
‘ವೆಂಕಟನಾಥ’ ಎಂದು ಹೆಸರಿಡಲಾಗಿತ್ತು. ಮಗುವಾಗಿದ್ದಾಗಿನಿಂದಲೇ ಆಧ್ಯಾತ್ಮದತ್ತ ಒಲವು ಹೊಂದಿದ್ದ ಅವರು, ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ಮಧುರೈನಲ್ಲಿ ಸೋದರಮಾವ ಲಕ್ಷ್ಮಿನರಸಿಂಹಾಚಾರ್ಯರ ಬಳಿ ಆರಂಭಿಕ ಶಿಕ್ಷಣ ಮುಗಿಸಿ, ನಂತರ ಕುಂಭಕೋಣಕ್ಕೆ ತೆರಳಿ ಶ್ರೀ ಸುಧೀಂದ್ರ ತೀರ್ಥರ ಗರಡಿಯಲ್ಲಿ ದ್ವೈತ ವೇದಾಂತ, ತರ್ಕ ಹಾಗೂ ವ್ಯಾಕರಣವನ್ನು ಕರಗತ ಮಾಡಿಕೊಂಡರು ಎನ್ನಲಾಗಿದೆ.
ನಮ್ಮ ಎಲ್ಲಾ ನೋವುಗಳನ್ನು ರಾಯರ ಕೈ ಕೊಟ್ಟು ರಾಯರ ಆರಾಧನೆಯಲ್ಲಿ ಬಂಧಿಯಾಗೋಣ ಬನ್ನಿ..’ಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧನೆ’. ಈ ಆರಾಧನೆ ಮಹೋತ್ಸವವನ್ನು 3 ದಿನಗಳ ಕಾಲ ಆಚರಿಸಲಾಗುತ್ತದೆ. ರಾಯರ ಆರಾಧನೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಇವತ್ತು 355ನೇ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯಾಗಿದೆ.
ಪ್ರತಿ ವರ್ಷ ಶ್ರಾವಣ ಮಾಸದ ಕೃಷ್ಣ ಪಕ್ಷದ ಪಾಡ್ಯ, ಬಿದಿಗೆ ಮತ್ತು ತದಿಗೆಯ ದಿನಗಳಂದು ರಾಯರ ಆರಾಧನಾ ಮಹೋತ್ಸವವು ಮಂತ್ರಾಲಯ ಹಾಗೂ ದೇಶಾದ್ಯಂತದ ರಾಯರ ಮಠಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗುತ್ತದೆ.ಈ ಕಾರಣಕ್ಕೆ ಭಕ್ತ ಸಾಗರ ಮಂತ್ರಾಯದತ್ತ ಹೆಜ್ಜೆ ಹಾಕುತ್ತಿದೆ. ಸಾಕಷ್ಟು ಜನ ಇವತ್ತು ರಾಯರ ಮಡಿಲನ್ನು ಸೇರಿದ್ದು, ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ.
ಇಲ್ಲಿ ಬಂದಿರುವ ಭಕ್ತರು ಹೇಳುತ್ತಾರೆ, ರಾಯರು ನಮ್ಮ ಸಂಕಷ್ಟಗಳನ್ನು ನಿವಾರಿಸುತ್ತಾರೆ.ಮತ್ತು ಮಂತ್ರಾಯಲವು ನೆಮ್ಮದಿಯ ತಾಣವಾಗಿದೆ ಎನ್ನುತ್ತಾರೆ.ಇಂದಿನ ದಿನ ಸರ್ವಜನಾಂಗಕ್ಕೂ ರಾಯರು ಪ್ರೇರಣೆಯಾಗಿದ್ದಾರೆ.ಶ್ರೀ ರಾಘವೇಂದ್ರ ಸ್ವಾಮಿಗಳು ಮಾಡಿದ ಪವಾಡ ಇಂದಿಗೂ ಜೀವಂತವಿದೆ.. ನಾವೆಲ್ಲರು ಈ ಈ ದಿನ ರಾಯರನ್ನು ನೆನೆಯೋಣ . ಕಷ್ಟಗಳನ್ನು ಪಕ್ಕಕ್ಕೆ ಇಟ್ಟು ರಾಯರಿದ್ದಾರೆ ಎಂದು ಮುನ್ನುಗ್ಗೋಣ





