ಕೂಡಲಸಂಗಮಕ್ಕೆ ಸಿಎಂ ಡಿಕೆಶಿ ಎಂಟ್ರಿ- ವಿಶೇಷ ಪೂಜೆ ಜತೆ ತ್ರಿವೇಣಿ ಸಂಗಮಕ್ಕೆ ಬಾಗಿನ ಅರ್ಪಣೆ

ಬಾಗಲಕೋಟೆ: ಹುನಗುಂದ ತಾಲೂಕಿನಲ್ಲಿರುವ ಕೂಡಲಸಂಗಮದ ಸಂಗಮನಾಥ ದೇವಸ್ಥಾನಕ್ಕೆ ಸಿಎಂ ಡಿಕೆ ಶಿವಕುಮಾರ್‌ ಭೇಟಿ ನೀಡಿದ್ದಾರೆ. ನಂತರ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ಸಭೆಯಲ್ಲಿ ಸಾಕಷ್ಟು ಜನ ಭಾಗಿಯಾಗಿದ್ದು ಅಧಿಕಾರಿಗಳು ಸಹ ಭಾಗವಹಿಸಿದ್ದರು.ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ್ ಕಾಶಪ್ಪನವರ್ ಹಾಗೂ ಕುಟುಂಬಸ್ಥರು ಸಿಎಂಗೆ ಬಸವಣ್ಣನವರ ಬೆಳ್ಳಿ ಮೂರ್ತಿ ಹಾಗೂ ಬೆಳ್ಳಿ ಗಧೆ ನೀಡಿ ಗೌರವಿಸಿದರು.

ಹಣೆಗೆ ವಿಭೂತಿ ಧರಿಸಿ ಶರಣರಂತೆ ಸಂಗಮನಾಥ ದೇಗುಲದಲ್ಲಿ ಸಿಎಂ ಡಿಕೆಶಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಣೆ ಮಾಡಿದ್ದಾರೆ.

ಸಭೆಯಲ್ಲಿ ವಿಧಾನಸಭಾ ಉಪ ಸಭಾಧ್ಯಕ್ಷರಾದ ಮಂಕಾಳ ವೈದ್ಯ, ಸಂಸದರಾದ ಡಾ. ಜಿ.ಸಿ. ಚಂದ್ರಶೇಖರ್, ಮಾಜಿ ಸಚಿವರಾದ ಆರ್‌.ಬಿ ತಿಮ್ಮಾಪುರ, ಶಾಸಕರಾದ ಉಮೇಶ್ ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others