ಬಳ್ಳಾರಿ: ಮಧು ಬಂಗಾರಪ್ಪನವರು ದಿನಕ್ಕೊಂದು ಹೊಸ ಶೂ ಬದಲಾಯಿಸ್ತಾರೆ. ಆದರೆ ಶಾಲಾ ಮಕ್ಕಳಿಗೆ ಕೊಡುವ ಶೂ ಚಿಂದಿ ಆಯುವವರು ಕೂಡ ತಗೋಳಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಹಾಗೂ ಶಾಸಕ ಬಿ.ನಾಗೇಂದ್ರ ಅವರು ನನಗೆ ಶತ್ರುವಲ್ಲ, ಅವರ ಮೇಲೆ ಯಾವುದೇ ದ್ವೇಷವಿಲ್ಲ ಎಂದರು.
ಸಿಎಂ ಡಿ.ಕೆ.ಶಿವಕುಮಾರ್ ಅವರು ಅರಮನೆಯಲ್ಲಿದ್ದು, ಜನರನ್ನು ಬೀದಿಗೆ ನಿಲ್ಲಿಸುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಧು ಬಂಗಾರಪ್ಪನವರು ದಿನಕ್ಕೊಂದು ಹೊಸ ಶೂ ಬದಲಾಯಿಸ್ತಾರೆ… ಆದರೆ ಶಾಲಾ ಮಕ್ಕಳಿಗೆ ಕೊಡುವ ಶೂ ಚಿಂದಿ ಆಯುವವರು ಕೂಡ ತಗೋಳಲ್ಲ ಎಂದಿದ್ದಾರೆ, ಹಾಕಿಕೊಂಡ ಕೂಡಲೇ ಶೂ ಹರಿಯುತ್ತದೆ ಶಿಕ್ಷಣ ಎಂಬುದು ಹುಟ್ಟಿನಿಂದ ಸಾಯುವವರೆಗೂ ಇರುತ್ತದೆ .ಹೀಗಾಗಿ, ಶಿಕ್ಷಣದ ಕಡೆ ಗಮನ ಕೊಡಬೇಕು ಎಂದರು.
ನೀವು ಗಾಳಿ ಬಂದ ಕಡೆ ತೂರಿಕೊಳ್ಳೋ ಜನ. ಬಿಜೆಪಿ ಇದ್ದಾಗ ನಮ್ಮ ಹತ್ರ ಮಂತ್ರಿಯಾದಿರಿ, ಸಿದ್ದರಾಮಯ್ಯ ಇದ್ದಾಗ ಅವರಿಗೆ ಪೂಜೆ ಮಾಡಿ ಸಚಿವರಾಗಿದ್ದೀರಿ. ಈಗ ಶಿವಕುಮಾರ್ ಅವರಿಗೆ ಪೂಜೆ ಮಾಡಿ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ಶ್ರೀರಾಮಲು ಲೇವಡಿ ಮಾಡಿದ್ದಾರೆ.
ರೆಡ್ಡಿ, ಶ್ರೀರಾಮುಲು ಮತ್ತು ಯಡಿಯೂರಪ್ಪ ಅವರು ಪ್ರತ್ಯೇಕ ಪಕ್ಷ ಕಟ್ಟಿದ್ದರು ಎಂದು ತಂಗಡಗಿ ಹೇಳಿದ್ದಾರೆ. ಯಡಿಯೂರಪ್ಪ ಪಾರ್ಟಿ ಕಟ್ಟಿದ್ದು ಸ್ವಾರ್ಥಕ್ಕಲ್ಲ, ಜನಹಿತಕ್ಕಾಗಿ. ನಿನ್ನ ಹಾಗೆ ಅಧಿಕಾರಕ್ಕಾಗಿ ಪದೇ ಪದೇ ಸ್ವಾಮಿ ನಿಷ್ಠೆ, ಪಕ್ಷ ನಿಷ್ಠೆ ಬದಲಾಯಿಸುವವರಲ್ಲ ಎಂದರು.
ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ 187 ಕೋಟಿ ನಿಗಮದ ಹಣದ ಹಗರಣದ ವಿರುದ್ಧ ನಮ್ಮ ಹೋರಾಟವಾಗಿದೆ. ತನಿಖೆ ವೇಳೆ ನಾಗೇಂದ್ರ ಅವರ ಹೆಸರನ್ನು ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ. ಈ ಹಣ ನಿಗಮಕ್ಕೆ ವಾಪಸಾಗಿ ಸಮುದಾಯದ ಜನರಿಗೆ ತಲುಪಬೇಕು. ಇದನ್ನು ಪ್ರಶ್ನಿಸುವುದು ತಪ್ಪೇ ಎಂದು ಕೇಳಿದರು.
ಪ್ರಸಕ್ತ ವರ್ಷ ಮಳೆ ಕೊರತೆಯಿಂದ ತೀವ್ರ ಬರಗಾಲ ಎದುರಾಗಿದ್ದರೂ ಮುಖ್ಯಮಂತ್ರಿ ಜನರಿಗೆ ಸಹಾಯ ಮಾಡಿಲ್ಲ. ರೈತರ ಕಷ್ಟಗಳನ್ನು ಆಲಿಸಿಲ್ಲ. ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರ ಮನೆ ಕಾಯುತ್ತ ಕಾಲ ಕಳೆದಿದ್ದಾರೆ. ಇದು ಹೈಟೆಕ್ ಸರ್ಕಾರ, ಬಡವರಿಗೆ ಸಹಾಯ ಮಾಡದ ಬಿಸಿನೆಸ್‌ಮನ್ ಸರ್ಕಾರ ಎಂದು ಟೀಕಿಸಿದರು.





