ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆಯೇ ಜಗಳ, ಗಲಾಟೆಗಳು ಮುಗಿಲು ಮುಟ್ಟಿವೆ ಮಾತಿನ ಮೌಲ್ಯ ಅರಿಯದೆ ಕೆಲವು ಜನ ತಮಗೆ ಇಷ್ಟ ಬಂದತೆ ನಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಮತ್ತೊಂದು ಕಡೆ ಈ ಶೋ ಅನ್ನು ಹಿರಿಯರಿಂದ ಹಿಡಿದು ಮಕ್ಕಳು ಸಹ ನೋಡುತ್ತಾ ಇರುತ್ತಾರೆ. ಇದೆಲ್ಲಾ ದೊಡ್ಡ ಮನೆ ಒಳಗಿರುವ ಮಂದಿಗೆ ಗೊತ್ತಿದ್ದರೂ ಸಹ ದಡ್ಡರಂತೆ ನಡೆದುಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ.
ಹೌದು ಸ್ಪರ್ಧಿಗಳ ನಡುವೆ ಸೌಜನ್ಯ, ಸಂಯಮ ಎನ್ನುವುದೇ ಇಲ್ಲದಂತಾಗಿದ್ದು, ಮುಖ್ಯವಾಗಿ ಮಾಡ್ರನ್ ಮಹಾಕವಿ ಮಂಜ ನಡವಳಿಕೆ ಹಾಗೂ ಟಾಂಟ್‌ಗಳ ವಿರುದ್ಧ ಈಗ ಪ್ರೇಕ್ಷಕರು ಮತ್ತು ನೆಟ್ಟಿಗರು ಗರಂ ಆಗಿದ್ದಾರೆ. ಯಾವುದೋ ಒಂದು ಆಟದಲ್ಲಿ ಸೌಂದರ್ಯ ಎನ್ನುವ ಹೆಣ್ಣು ಮಗಳು ಆತನಿಗೆ ಹೊಡೆಯುತ್ತಾರೆ. ಕೊಪದಲ್ಲಿ ಅದು ನೋಡುವುದಕ್ಕೆ ಹೊಡೆತ ತರ ಇದ್ದಿಲ್ಲ ಆದ್ರೂ ಅವಳು ಆತನಿಗೆ ಕಾಲು ಬಿದ್ದು ಕ್ಷಮೆಸಿ ಎಂದು ಕೇಳಿಕೊಳ್ಳುತ್ತಾಳೆ.
ಇದಕ್ಕೆ ಬೇಕು-ಬೇಡ ಪ್ರತಿಕ್ರಿಯೆ ನೀಡಿದ ಮಂಜ ನಂತರ ಆಕೆಯ ನಡುವಳಿಕೆಯ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಮತ್ತು ಆ ಹೆಣ್ಣು ಮಗಳ ಬಗ್ಗೆ ತಪ್ಪಾಗಿ ನಡೆದುಕೊಂಡಿದ್ದಾನೆ. ಆತನ ಕಿರುಚಾಟ,ಕುಮ್ಮಕ್ಕು ನೋಡುಗರಿಗೆ ಕಿರಿಕಿರಿ ಮಾಡುತ್ತಿದ್ದೆ. ಕೆಲ ನೆಟ್ಟಿಗೆರಂತೂ ಹುಚ್ಚರ ಸಂತೆಯಿಂದ ಎದ್ದು ಬಂದಿದ್ದಾನೆ ಎಂದು ಹೇಳುತ್ತಿದ್ದಾರೆ.
ಮತ್ತೊಂದು ಕಡೆ ದೊಡ್ಡ ಮನೆಯಲ್ಲಿ ಮಂಜ ನೀಡುತ್ತಿರುವ ಟಾಂಟ್‌ಗಳಿಂದ ಬೇಸತ್ತ ಸ್ಪರ್ಧಿ ಅವಿನಾಶ್, ತಾಳ್ಮೆ ಕಳೆದುಕೊಂಡು ಸಿಟ್ಟಿಗೆದ್ದಾರೆ. ಇಂಥ ದರಿದ್ರದವರ ಜೊತೆಗೆ ನಾನು ಇರಲ್ಲ..” ಎಂದು ಗುಡುಗಿರುವ ಅವಿನಾಶ್, ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ʻಬಿಗ್ ಬಾಸ್ʼ ಮನೆಯಿಂದ ಹೊರನಡೆಯುವುದಾಗಿ ಹೇಳಿದ್ದಾರೆ. ಮಂಜು ಅವರ ಪದಬಳಕೆ ಹಾಗೂ ವೈಯಕ್ತಿಕ ನಿಂದನೆಗಳಿಂದ ಮನೆಯ ವಾತಾವರಣವೇ ಕಲುಷಿತಗೊಂಡಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹೊರ ಹಾಕುತ್ತಿದ್ದಾರೆ.
ಅವಿನಾಶ್ ಕೊನೆಗೂ ಸರಿಯಾಗಿ ಹೇಳಿದ, ಸೆಲೆಕ್ಟ್ ಮಾಡಿರೋ ಜಡ್ಜ್‌ಗೆ ಅವಮಾನ, ಸೆಲೆಕ್ಟ್ ಮಾಡಿರೋ ಹೋಸ್ಟ್‌ಗೆ ಅವಮಾನ, ಸೆಲೆಕ್ಟ್ ಮಾಡಿರೋ ಜನಗಳಿಗೆ ಅವಮಾನ ಅಂತ. ಅಗ್ನಿಪರೀಕ್ಷೆ ಜನರು ಏನು ಮಾಡುತ್ತಿದ್ದಾರೋ ಅದು ತಪ್ಪು”
“ಹೊಟ್ಟೆ ಹಸಿವಾದಾಗ ತಿನ್ನೋರನ್ನ ನೋಡಿದೀನಿ. ಕಂಟೆಂಟ್‌ಗೋಸ್ಕರ ತಿನ್ನೋರನ್ನ ಇದೆ ಮೊದ್ಲು ನೋಡ್ತಿರೋದು. ಎಲ್ಲ ಸಾಲ ಸಾಮಾನ್ಯರು ಅಂದ್ರೆ ಸಿಂಪಥಿ ಇರ್ತಿತ್ತು. ಆದರೆ, ಈ ಸಲ ಸೆಲೆಬ್ರಿಟಿಗಳು ನೋಡಿದ್ರೆ ಪಾಪ ಅನ್ಸ್ತಿದೆ. ಅದೇನ್ ಅಂತ ಸೆಲೆಕ್ಟ್ ಮಾಡಿ ಕಳ್ಸಿದಿರೋ ಎಂದು ಜಡ್ಜ್ ಗಳನ್ನು ಜನ ತರಾಟೆಗೆ ತಗೆದುಕೊಂಡಿದ್ದಾರೆ.
ಮತ್ತೊಂದು ಕಡೆ ಶಾಸ್ತ್ರಿ ಎನ್ನುವ ಯುವಕ ಆಟದ ವಿಚಾರದಲ್ಲಿ ಮನೆಯ ಕೆಲವು ಜನರಿಗೆ ಅಂದರೆ ಗಂಡು ಮಕ್ಕಳಿಗೆ ಹೇಳಿತ್ತಾನೆ ನೀವೆಲ್ಲಾ ಉಪಯೋಗಕ್ಕೆ ಬರುವುದಿಲ್ಲ ಕೈಗೆ ಬಳೆ ತೊಟ್ಟುಕೊಳ್ಳಿ ಎಂದು ಪ್ರತಿಯೊಂದು ಸೀಜನ್ ಅಲ್ಲಿ ಹೆಣ್ಣು ಮಕ್ಕಳ ಬಳೆಯ ಬಗ್ಗೆ ಮಾತನಾಡಿ ಅವರನ್ನು ಕೇವಲ ಎನ್ನುವ ರೀತಿಯಲ್ಲಿ ಕೆಲ ಅವಿವೇಕಿಗಳು ನಡೆದುಕೊಳ್ಳುತ್ತಿದ್ದಾರೆ.
ʻಬಿಗ್ ಬಾಸ್ʼ ಮನೆಯಲ್ಲಿ ಕಾಮನ್ ಸ್ಪರ್ಧಿಗಳ ನಡೆ-ನುಡಿಯನ್ನ ನೋಡಿ ಬೇಸತ್ತಿರುವ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಆಕ್ರೋಶವನ್ನ ಹೊರಹಾಕುತ್ತಿದ್ದಾರೆ.
“ಕನ್ನಡ ಬಿಗ್ ಬಾಸ್‌ನ ಇಷ್ಟೂ ಸೀಸನ್‌ಗಳಲ್ಲಿ ಇಷ್ಟು ಕೀಳುಮಟ್ಟದ ಹಾಗೂ ವರ್ಸ್ಟ್ ಕಂಟೆಸ್ಟೆಂಟ್‌ಗಳನ್ನ ನಾವೆಂದೂ ನೋಡಿಲ್ಲ” ಎಂದು ಅನೇಕ ನೆಟ್ಟಿಗರು ಕಾಮನ್ ಸ್ಪರ್ಧಿಗಳ ವಿರುದ್ಧ ಗರಂ ಆಗಿದ್ದಾರೆ. ಸಾಮಾನ್ಯ ಜನರ ಹೆಸರಿನಲ್ಲಿ ಬಿಗ್ ಬಾಸ್ ಮನೆಗೆ ಬಂದು ಈ ರೀತಿ ವರ್ತಿಸುತ್ತಿರುವುದು ಕಾಮನ್ ಮ್ಯಾನ್ ಟ್ಯಾಗ್‌ಗೆ ತರುವ ಕಳಂಕ ಎಂಬ ವಾದವೂ ಕೇಳಿಬರುತ್ತಿದೆ.
ʻಬಿಗ್ ಬಾಸ್ʼಮನೆಯಲ್ಲಿ ಕೆಲವು ಮಾತುಗಳು, ಹೆಣ್ಣು ಮಕ್ಕಳಿಗೆ ಬೇಸರ ತರಿಸಿದರೆ ಮತ್ತೊಂದು ಕಡೆ ಹಲವರ ನಡವಳಿಕೆಯಿಂದ ಜನ ರೊಚ್ಚಿಗೆದ್ದಿದ್ದಾರೆ. ಇನ್ನು ಉಳಿದ ಬುದ್ಧಿವಂತರು ಬಿಗ್ ಬಾಸ್ ನೋಡುವುದೇ ತಪ್ಪು ಸಾಮಾಜದಲ್ಲಿ ನೊಂದವರಿಗಾಗಿ ಏನಾದ್ರು ಮಾಡಿ ಇಂತಹ ಕಿತ್ತೋದ್ ಶೋಗಳನ್ನು ಬಿಟ್ಟು ಅಂತ ಹೇಳಿದ್ದಾರೆ. ಒಟ್ಟಿನಲ್ಲಿ ಈ ಸಾರಿ ಬಿಗ್ ಬಾಸ್ ಮಂದಿ ನೆಟ್ಟಿಗರ ಕಣ್ಣಿಗೆ ಗುರಿಯಾಗಿದ್ದು, ಮುಂದೆ ಸುದೀಪ ಇವರ ನಡುವಳಿಕೆಗೆ ತಕ್ಕ ಶಿಕ್ಷೆ ಕೊಡಿ ಅಂತ ಬೇಡಿಕೆಯನ್ನು ಸಹ ಇಟ್ಟಿದ್ದಾರೆ.





