ಸಿದ್ದರಾಮಯ್ಯರನ್ನ ಒಗ್ಗರಣೆಗೆ ಕರಿಬೇವು ಸೊಪ್ಪಿನಂತೆ ಬಳಸಿ ಸೈಡಿಗೆ ಇಟ್ಟಿದೆ; ಆರ್ ಅಶೋಕ್‌

ರಾಮನಗರ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷ ರೆಸ್ಟ್‌ ಗ್ಯಾರಂಟಿ ಕೊಟ್ಟಿದೆ ಈ ಕಾರಣಕ್ಕೆ ಅವರು ಕೈ ಪಕ್ಷದಿಂದ ವಿಶ್ರಾಂತಿಯಲ್ಲಿ ಇದ್ದಾರೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಕೈ ಪಕ್ಷದ ವಿರುದ್ಧ ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕರಿಬೇವು ಸೊಪ್ಪಿನಂತೆ ಒಗ್ಗರಣೆಗೆ ಬಳಸಿ ಸೈಡಿಗೆ ಇಟ್ಟಿದೆ. ಅವರ ಬಾಯಿ ಮುಚ್ಚಿಸಲಾಗಿದ್ದು, ಮೈಸೂರಿನ ಮನೆಯಲ್ಲಿ ರೆಸ್ಟ್ ಗ್ಯಾರಂಟಿ ಮಾಡುವ ಸ್ಥಿತಿಗೆ ತರಲಾಗಿದೆ. ಡಿ.ಕೆ.ಶಿವಕುಮಾರ್ ಮುಖ ನೋಡಿ ಒಕ್ಕಲಿಗರು ವೋಟ್ ಹಾಕಲ್ಲ ಎಂದು ಅವರದೇ ಪಕ್ಷದ ಕೆ.ಎನ್.ರಾಜಣ್ಣ ಹೇಳಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರ ಮೂರೇ ವರ್ಷಗಳಲ್ಲಿ 1.5 ಲಕ್ಷ ಕೋಟಿ ಸಾಲ ಮಾಡಲು ಹೊರಟಿದೆ. ಪ್ರಸ್ತುತ ವರ್ಷಕ್ಕೆ 35,000 ದಿಂದ 40,000 ಕೋಟಿ ಬಡ್ಡಿ ಕಟ್ಟುವ ಸ್ಥಿತಿ ಎದುರಾಗಿದೆ. ಸಾಲ ಮಾಡದೇ ಬಜೆಟ್ ಮಂಡಿಸಿ ತೋರಿಸಲಿ ಮಂಗಳೂರಿನಲ್ಲಿ ಮೊದಲ ಬಾರಿಗೆ ಸರ್ಕಾರ ಕ್ಯಾಬಿನೆಟ್ ಮೀಟಿಂಗ್ ನಡೆಸುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಸಾಲದಲ್ಲಿ ಮುಳುಗಿದ್ದು, ಹೊಸ ಘೋಷಣೆಗೆ ಹಣ ಎಲ್ಲಿಂದ ತರುತ್ತೆ?ಎಂದು ತಿಳಿಸಿದ್ದಾರೆ.

ಈಗ ಮಂಗಳೂರಿನ ರೆಸಾರ್ಟ್‌ನಲ್ಲಿ ಮೀನು, ಏಡಿಕಾಯಿ ತಿಂದುಕೊಂಡು ಕ್ಯಾಬಿನೆಟ್ ನಡೆಸಿ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಕ್ರಷರ್‌ಗಳಿಂದ ವರ್ಷಕ್ಕೆ 1 ಕೋಟಿ ಕಮಿಷನ್ ಬೇಡಿಕೆ ಇಟ್ಟಿರುವುದರಿಂದ ಜೆಲ್ಲಿ, ಎಂ-ಸ್ಯಾಂಡ್ ಸಿಗದೆ ರಸ್ತೆ ಕಾಮಗಾರಿಗಳು ಸ್ಥಗಿತಗೊಂಡಿವೆ. ಆಸ್ಪತ್ರೆಗಳಲ್ಲಿ ಔಷಧಿಯಿಲ್ಲ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಏರಿಕೆಯಾಗಿಲ್ಲ ಮತ್ತು ರೈತರಿಗೆ ಸೂಕ್ತ ಬರ ಪರಿಹಾರ ತಲುಪಿಲ್ಲ ಎಂದು ಟೀಕಿಸಿದರು

ಬೊಮ್ಮಾಯಿ ಸರ್ಕಾರ ಉಳಿತಾಯದ ಬಜೆಟ್ ನೀಡಿದ್ದರೆ, ಈ ಸರ್ಕಾರ ದಿವಾಳಿಯಾದ ಬಜೆಟ್ ನೀಡಿದೆ. ಕೆಎಸ್ಆರ್‌ಟಿಸಿಗೆ 5,000 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದ್ದು, ಸಿಬ್ಬಂದಿಗೆ ಸಂಬಳ ಹಾಗೂ ಡೀಸೆಲ್‌ಗೂ ಹಣವಿಲ್ಲದಂತಾಗಿದೆ ಎಂದು ವಾಗ್ದಾಳಿ ನಡಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others