ಈ ಬಿಗ್ಬಾಸ್ ವೇದಿಕೆ ಮೇಲೆ ಅವರು ತಾಳ್ಮೆ ಕಳೆದುಕೊಂಡಿದ್ದು ಬಲು ಅಪರೂಪ. ಸಾಮಾನ್ಯವಾಗಿ ತಾಳ್ಮೆ ಕಳೆದುಕೊಂಡು ಮಾತನಾಡುವುದಿಲ್ಲ, 13ನೇ ಸೀಸನ್ನಿನ ಎರಡನೇ ವಾರ ಬಿಗ್ಬಾಸ್ ಮನೆಯಲ್ಲಿ ನಡೆದ ಘಟನೆಗಳು ಸ್ಪರ್ಧಿಗಳಿಗೆ ಮಾತ್ರವಲ್ಲ, ವೀಕ್ಷಕರಿಗೂ ಸಹ ಕಿರಿ-ಕಿರಿ ತಂದಿತ್ತು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಮಂಜ ಸೇರಿದಂತೆ ಕೆಲ ಸ್ಪರ್ಧಿಗಳು ಆಡಲು ಅಲ್ಲ ತಮ್ಮ ರೌಡಿತನ ತೋರಲು ಮನೆ ಸೇರಿದಂತೆ ವರ್ತಿಸಿದ್ದರು. ಹಾಗಾಗಿ ಸುದೀಪ್ ಅವರು ಅಂಥಹವರಿಗೆ ಅವರಿಗೆ ತಕ್ಕದಾದ ಭಾಷೆಯಲ್ಲಿಯೇ ಉತ್ತರ ನೀಡಿದರು. ವಿಶೇಷವಾಗಿ ಮಹಾಕವಿ ಮಾಡರ್ನ್ ಮಂಜನಿಗೆ ಕ್ಲಾಸ್ ತೆಗೆದುಕೊಂಡರು.
ಇತರೆ ಸ್ಪರ್ಧಿಗಳನ್ನು ಐದು ಪೈಸೆ ಯೋಗ್ಯತೆ, 10 ಪೈಸೆ ಯೋಗ್ಯತೆ, 50 ಪೈಸೆ ಯೋಗ್ಯತೆ ಎಂದೆಲ್ಲ ಹೇಳಿದ್ದ. ಈ ಬಗ್ಗೆ ಮಾತನಾಡಿದ ಸುದೀಪ್, ‘ನಿನ್ನ ಯೋಗ್ಯತೆ ಎಷ್ಟು?’ ಎಂದರು. ‘ಯೋಗ್ಯತೆಯೇ ಇಲ್ಲದ ವ್ಯಕ್ತಿ ಇನ್ನೊಬ್ಬರ ಯೋಗ್ಯತೆ ಹೇಗೆ ಅಳೆಯಬಲ್ಲ’ ಎಂದು ಪರೋಕ್ಷವಾಗಿ ಮಂಜನ ಬೆಲೆ ಇಲ್ಲದವ ಎಂದು ಟೀಕೆ ಮಾಡಿದರು.
ಮಂಜ ಈ ವಾರ ಮಾಡಿದ್ದು ಒಂದೆರಡಲ್ಲ. ಸಿಕ್ಕ-ಸಿಕ್ಕವರ ಮೇಲೆಲ್ಲ ರೌಡಿತನ ತೋರಿದ್ದ. ಬಿಗ್ಬಾಸ್ ಮನೆಯ ಹಲವಾರು ನಿಯಮಗಳನ್ನು ಮುರಿದಿದ್ದ. ಹಿರಿಯರು, ಕಿರಿಯರು, ಮಹಿಳೆಯರು ಎಂದು ಸಹ ನೋಡದೆ ಕೆಟ್ಟದಾಗಿ ವರ್ತಿಸಿದ್ದ. ಖುದ್ದು ಬಿಗ್ಬಾಸ್ ಬಗ್ಗೆಯೂ ಕೆಟ್ಟದಾಗಿ, ಏಕವಚನದಲ್ಲಿ ಮಾತನಾಡಿದ್ದ. ಆದರೆ ಎಲ್ಲದಕ್ಕೂ ಸುದೀಪ್ ತಕ್ಕ ಉತ್ತರಗಳನ್ನೇ ನೀಡಿದರು.
ಬಿಗ್ಬಾಸ್ ಅನ್ನು ಏಕವಚನದಲ್ಲಿ ಮಾತಾಡ್ತೀರ, ನಾನು ಹೇಳಿದಂತೆ ಆಗಬೇಕು ಅನ್ನುತ್ತೀರ, ನಾನೇ ಗ್ರೇಟ್ ಅನ್ನುತ್ತೀರ, ನಿಮ್ಮ ವಯಸ್ಸಿಗೆ ಇದೆಲ್ಲ ಬೇಕ? ವಯಸ್ಸಿನ ಬಗ್ಗೆ ಆದರೂ ಮರ್ಯಾದೆ ಇರಲಿ. ಕ್ಯೆಮೆರಾ ಇದೆ ಎಂಬ ಕಾರಣಕ್ಕೆ ಎಲ್ಲರೂ ಮೌನವಾಗಿ ಸಹಿಸಿಕೊಂಡಿದ್ದಾರೆ. ಕ್ಯಾಮೆರಾ ಆಫ್ ಆದರೆ ಕತೆಯೇ ಬೇರೆ ಆಗುತ್ತೆ. ನಮ್ಮಲ್ಲಿ ಕವಿ ಎಂದರೆ ಬಹಳ ಗೌರವ ಇದೆ. ಸುನೀತರು, ಹೃದಯವಂತರು, ವಿನಯವಂತರು ಎಂದು ನೋಡುತ್ತೇವೆ. ಆದರೆ ನಿನ್ನ ರೀತಿ ಆಡೋರನ್ನ ‘ಕಿತ್ತೋಗಿರೋ ನನ್ನ ಮಕ್ಳು’ ಎಂದು ಕರೀತಾರೆ ಎಂದು ಸುದೀಪ್ ಹೇಳಿದ್ದಾರೆ.
ಇತ್ತ ಟಾಸ್ಕ್‌ವೊಂದರಲ್ಲಿ ಮಾಡರ್ನ್ ಮಹಾಕವಿ ಮಂಜನ ಮೇಲೆ ಕೈಮಾಡಿದ್ದಕ್ಕೆ ಸೌಂದರ್ಯ ಶೆಟ್ಟಿಗೆ ಕಿಚ್ಚ ಸುದೀಪ್ ಶಿಕ್ಷೆ ನೀಡಿದ್ದಾರೆ. ಸೌಂದರ್ಯ ಬಿಗ್ ಬಾಸ್ ಮನೆಗೆ ಜೈಲು ಪಾಲಾಗಿದ್ದಾರೆ.ವಾರದ ಕಥೆಯಲ್ಲಿ ‘ಅಗ್ನಿ ಪರೀಕ್ಷೆ’ಯಲ್ಲಿ ಗೆದ್ದು ಬಂದಿದ್ದ ಗ್ಯಾಂಗ್‌ಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ದೊಡ್ಮನೆಯಲ್ಲಿ ಮಂಜ, ಕಿರಣ್ ಶಾಸ್ತ್ರಿ, ಲಿಖಿತ್, ಧನುಶ್ ವರ್ತನೆಗೆ ಕಿಚ್ಚ ಗರಂ ಆದರು. ನಾಲ್ವರಿಗೂ ಹಿಗ್ಗಾಮುಗ್ಗ ಜಾಡಿಸಿದ ಬಳಿಕ ಸೌಂದರ್ಯ ಶೆಟ್ಟಿ ವಿಚಾರಕ್ಕೆ ಬಂದರು. ಟಾಸ್ಕ್ ಆಡುವಾಗ ಮಂಜನ ಮೇಲೆ ಸೌಂದರ್ಯ ಕೈ ಮಾಡಿದ್ದಕ್ಕೆ ಶಿಕ್ಷೆ ನೀಡಿದರು.





