ವಾಷಿಂಗ್ಟನ್: ರಾಜತಾಂತ್ರಿಕ ಮಾತುಕತೆಗಳು ಒಪ್ಪಂದಕ್ಕೆ ಬರಲು ವಿಫಲವಾದರೆ, ಹೊಸ ವರ್ಷದ (2027) ಬಳಿಕ ಇರಾನ್ ಮೇಲೆ ಮತ್ತೊಮ್ಮೆ ಸೇನಾ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಸಂಧಾನಕಾರರು ಉದ್ದೇಶಪೂರ್ವಕವಾಗಿ ಮಾತುಕತೆಗಳನ್ನು ಎಳೆಯುತ್ತಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಸದ್ಯ ನಡೆಯುತ್ತಿರುವ ಮಾತುಕತೆಗಳನ್ನು ಅವರು ಅರ್ಥಹೀನ ಎಂದು ಟೀಕಿಸಿದ್ದಾರೆ. ಹೊಸ ವರ್ಷದೊಳಗೆ ಒಪ್ಪಂದ ಅಂತಿಮವಾಗದಿದ್ದರೆ, ಟೆಹ್ರಾನ್ ವಿರುದ್ಧ ಮತ್ತೆ ದೊಡ್ಡ ಮಟ್ಟದ ಸೇನಾ ದಾಳಿ ನಡೆಸಲು ತಾವು ಒಲವು ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.
ಇರಾನ್ ಬಂದರುಗಳ ಮೇಲಿನ ಅಮೆರಿಕದ ನೌಕಾ ದಿಗ್ಬಂಧನವನ್ನು ಮುರಿಯಲು ಇರಾನ್ ಹಡಗುಗಳು ಪ್ರಯತ್ನಿಸಿದರೆ, ಅವುಗಳನ್ನು ಸಮುದ್ರದ ತಳಕ್ಕೆ ಸೇರಿಸುವುದಾಗಿ ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ
ಇರಾನ್ ಜೊತೆಗಿನ ರಾಜತಾಂತ್ರಿಕ ಮಾತುಕತೆಗಳು ಒಪ್ಪಂದಕ್ಕೆ ಬರಲು ವಿಫಲವಾದರೆ ಹೊಸ ವರ್ಷದ ಬಳಿಕ ಮತ್ತೊಮ್ಮೆ ಇರಾನ್ ಮೇಲೆ ಸೇನಾ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ.
ಟೆಹ್ರಾನ್ ಜೊತೆ ನಡೆಯುತ್ತಿರುವ ಮಾತುಕತೆಗಳನ್ನು ಅರ್ಥಹೀನ ಎಂದು ಟೀಕಿಸಿರುವ ಅವರು, ಅವರು ಯಾವಾಗಲೂ ಮಾತನಾಡುತ್ತಲೇ ಇರುತ್ತಾರೆ. ಅವರ ಕೆಲಸವೇ ಮಾತನಾಡದು. ಆದರೆ ಆ ಮಾತುಗಳೆಲ್ಲ ಅಸಂಬದ್ಧ” ಎಂದು ಹೇಳುವ ಮೂಲಕ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಾಣದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಇರಾನ್ ಬಂದರುಗಳ ಮೇಲೆ ಅಮೆರಿಕ ಹೇರಿರುವ ನೌಕಾ ದಿಗ್ಬಂಧನವನ್ನು (Naval Blockade) ಉಲ್ಲಂಘಿಸಲು ಪ್ರಯತ್ನಿಸುವ ಯಾವುದೇ ಇರಾನ್ ಹಡಗುಗಳ ಮೇಲೆ ಅಮೆರಿಕದ ಸೇನಾಪಡೆಗಳು ಗುಂಡು ಹಾರಿಸಿ ಮುಳುಗಿಸಲಿವೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ನೌಕಾಪಡೆಯ ಉಪಸ್ಥಿತಿಗೆ ಇರಾನ್ ಪಡೆಗಳು ಅಡ್ಡಿಪಡಿಸಲು ಪ್ರಯತ್ನಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ಅವರು ಹಾಗೆ ಮಾಡಲಿ ಎಂದು ನಾನು ಆಶಿಸುತ್ತೇನೆ. ಅವರ ನೌಕಾಪಡೆಯ ಉಳಿದ ಹಡಗುಗಳಂತೆ ಅವುಗಳೂ ಸಮುದ್ರದ ತಳ ಸೇರುತ್ತವೆ ಎಂದು ಹೇಳಿದ್ದಾರೆ.
ಅಲ್ಲದೆ, ವಿದ್ಯುತ್ ಕಡಿತದಂತಹ ಆಂತರಿಕ ಸಮಸ್ಯೆಗಳ ವಿರುದ್ಧ ಇರಾನ್ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು ಬೆಂಬಲಿಸಿರುವ ಟ್ರಂಪ್, ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ಹೋರಾಟ ಮುಂದುವರಿಸುವಂತೆ ಪ್ರತಿಭಟನಾಕಾರರಿಗೆ ಕರೆ ನೀಡಿದ್ದಾರೆ.
ಇರಾನ್ ಉದ್ದೇಶಪೂರ್ವಕವಾಗಿ ಮಾತುಕತೆಗಳನ್ನು ಎಳೆಯುತ್ತಿದೆ ಎಂದು ಆರೋಪಿಸಿದ್ದಾರೆ. ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದದಂತೆ ತಡೆಯುವ ಶಾಶ್ವತ ಒಪ್ಪಂದ ಅಗತ್ಯ ಎಂದು ಅಮೆರಿಕ ಪುನರುಚ್ಚರಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚುನಾವಣೆಗೆ ಮೊದಲು ಇದ್ದುದಕ್ಕಿಂತ ಈಗ ಅವರು ಹೆಚ್ಚು ಆಕ್ರಮಣಕಾರಿಯಾಗಿದ್ದಾರೆ” ಎಂದು ಹೇಳಿದ್ದಾರೆ.ಇದೇ ವೇಳೆ ಇರಾನ್ನ ಮಾತುಕತೆ ಪ್ರತಿನಿಧಿಗಳನ್ನು ಟೀಕಿಸಿದ ಅವರು, ಅವರನ್ನು ‘ವೃತ್ತಿಪರ ಡ್ಯಾನ್ಸರ್ಗಳು’ ಎಂದು ವ್ಯಂಗ್ಯವಾಡಿದ್ದಾರೆ.
ಅವರು ಯಾವಾಗಲೂ ಮಾತನಾಡುತ್ತಲೇ ಇರುತ್ತಾರೆ, ಅವರು ಮಾಡುವುದೆಲ್ಲವೂ ಬರೀ ಮಾತು, ಆದರೆ ಅದೆಲ್ಲವೂ ಸುಳ್ಳು” ಎಂದು ಕಿಡಿಕಾರಿದ್ದಾರೆ.ಅಮೆರಿಕದ ಮಧ್ಯಂತರ ಚುನಾವಣೆಗಳ ನಂತರ ಇರಾನ್ ಅಧಿಕಾರಿಗಳು ಮತ್ತಷ್ಟು ಆಕ್ರಮಣಕಾರಿಯಾಗಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ.







ಇನ್ನೂ ಯಾವುದೇ ಕಾಮೆಂಟ್ ಇಲ್ಲ. ಮೊದಲ ಕಾಮೆಂಟ್ ನೀವೇ ಬರೆಯಿರಿ! (Be the first to comment.)