ನಟ ಪ್ರಕಾಶ್ ರಾಜ್ ಗೆ ಕಾನೂನು ಸಂಕಷ್ಟ: ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿದ ಕೋರ್ಟ್

ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ನಿಯಮಬಾಹಿರವಾಗಿ ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿಗಳನ್ನು ಹೊಂದಿರುವ ಗಂಭೀರ ಕಾನೂನು ಉಲ್ಲಂಘನೆ ಆರೋಪ ಎದುರಿಸುತ್ತಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಬಂಧನಕ್ಕೆ ಬೆಂಗಳೂರು ನ್ಯಾಯಾಲಯ ಹಸಿರು ನಿಶಾನೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ನಟನ ವಿರುದ್ಧ ಬೆಂಗಳೂರಿನ 48ನೇ ಎಸಿಜೆಎಂ ನ್ಯಾಯಾಲಯವು ಜಾಮಿನಿಲ್ಲಾ ವಾರೆಂಟ್ (NBW) ಹೊರಡಿಸಿದೆ.

ಕಾನೂನು ಹೋರಾಟದ ಹಿನ್ನೆಲೆ

ಕಳೆದ 2019 ರಲ್ಲೇ ನ್ಯಾಯವಾದಿ ದಿಲೀಪ್ ಕುಮಾರ್ ಅವರು ಈ ಕುರಿತು ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದರು. ನಟ ಪ್ರಕಾಶ್ ರಾಜ್ ಅವರು ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣ ಸೇರಿದಂತೆ ಒಟ್ಟು ನಾಲ್ಕು ರಾಜ್ಯಗಳಲ್ಲಿ ಕಾನೂನುಬಾಹಿರವಾಗಿ ಮತದಾರರ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದಾರೆ ಎಂಬುದು ದೂರುದಾರರ ಪ್ರಮುಖ ಆರೋಪವಾಗಿತ್ತು. ದೇಶದ ಸಂವಿಧಾನ ಮತ್ತು ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಒಬ್ಬ ನಾಗರಿಕ ಕೇವಲ ಒಂದೇ ಕಡೆ ಮತದಾನದ ಹಕ್ಕು ಹೊಂದಿರಲು ಸಾಧ್ಯವಿದ್ದು, ನಟ ಈ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಕೋರ್ಟ್ ಕಠಿಣ ಕ್ರಮಕ್ಕೆ ಕಾರಣವೇನು?

ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗದಿಂದ ಸೂಕ್ತ ಸ್ಪಂದನೆ ಸಿಗದ ಕಾರಣ ದೂರುದಾರರು ನೇರವಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ದೂರಿನ ವಿಚಾರಣೆ ಕೈಗೆತ್ತಿಕೊಂಡಿದ್ದ 48ನೇ ಎಸಿಜೆಎಂ ನ್ಯಾಯಾಲಯವು, ತನ್ನ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ನಟ ಪ್ರಕಾಶ್ ರಾಜ್ ಅವರಿಗೆ ಈ ಹಿಂದೆ ಎರಡು ಬಾರಿ ಅಧಿಕೃತ ಸಮನ್ಸ್ ಕಳುಹಿಸಿಕೊಟ್ಟಿತ್ತು. ಆದರೆ ನ್ಯಾಯಾಲಯದ ಆದೇಶಕ್ಕೆ ಕ್ಯಾರೆ ಎನ್ನದ ನಟ, ಎರಡು ಬಾರಿಯೂ ವಿಚಾರಣೆಗೆ ಗೈರುಹಾಜರಾಗಿದ್ದರು. ಕೋರ್ಟ್ ಸಮನ್ಸ್‌ ಅನ್ನು ಸತತವಾಗಿ ನಿರ್ಲಕ್ಷಿಸಿದ ನಟನ ಬೇಜವಾಬ್ದಾರಿತನವನ್ನು ತೀವ್ರವಾಗಿ ಪರಿಗಣಿಸಿದ ನ್ಯಾಯಾಧೀಶರು, ಈ ಬಾರಿ ಯಾವುದೇ ಜಾಮೂನು ಸಿಗದಂತಹ ಕಠಿಣ ಜಾಮಿನಿಲ್ಲಾ ವಾರೆಂಟ್ ಜಾರಿಗೊಳಿಸುವ ಮೂಲಕ ನಟನಿಗೆ ಬಿಗ್ ಶಾಕ್ ನೀಡಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others