ಸರ್ಕಾರದೊಂದಿಗೆ ಇನ್ಮುಂದೆ ಯಾವುದೇ ಮಾತುಕತೆ ನಡೆದ್ರು ಅದು ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲೇ ತೀರ್ಮಾನ: ಅಭಿಜಿತ್ ದೀಪ್ಕೆ

ನವದೆಹಲಿ: ನಾವು ಮೌನದಿಂದ ಹೋರಾಟ ಮಾಡುತ್ತಿದ್ದ ವೇಳೆ ನಮ್ಮ ಮೇಲೆ ದಾಳಿ ನಡೆದಿದ್ದು, ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಬಿಜೆಪಿ ಗುಂಡಾಗಳನ್ನು ಕಳುಹಿಸಿದೆ ಎಂದು ಕಾಕ್ರೋಚ್‌ ಜನತಾ ಪಾರ್ಟಿಸಂಸ್ಥಾಪಕ ಅಭಿಜಿತ್ ದೀಪ್ಕೆ ತಿಳಿಸಿದ್ದಾರೆ.

ಜಂತರ್‌ ಮಂತರ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜೆ.ಪಿ. ನಡ್ಡಾ ಅವರೊಂದಿಗಿನ ನಮ್ಮ ಕಳೆದ ಸಭೆಯ ನಂತರ ನಮ್ಮ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಸರ್ಕಾರದೊಂದಿಗೆ ಇನ್ಮುಂದೆ ಯಾವುದೇ ರೀತಿಯ ಮಾತುಕತೆ ನಡೆದರೂ ಅದು ಕೇವಲ ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲೇ ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.

ಇಂದು 34ನೇ ದಿನಕ್ಕೆ ನಮ್ಮ ಪ್ರತಿಭಟನೆ ಕಾಲಿಟ್ಟಿದೆ. ನಾನು ಈಗಾಗಲೇ ಲಾಠಿಚಾರ್ಜ್ ಬಗ್ಗೆ ಮಾತನಾಡಿದ್ದೇನೆ. ಈ ಕೃತ್ಯ ಎಸಗಿದ ಪೊಲೀಸ್ ಅಧಿಕಾರಿಗಳನ್ನು ನಾವು ನ್ಯಾಯಾಲಯಕ್ಕೆ ಎಳೆಯುತ್ತೇವೆ ಎಂದು ತಿಳಿಸಿದ್ದಾರೆ.

ಆದರೆ ಸೋನಮ್ ಸರ್ ಅವರ ಜೀವ ನಮಗೆ ಅತ್ಯಂತ ಅಮೂಲ್ಯವಾದ್ದರಿಂದ, ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಬೇಕೆಂದು ಸೋನಮ್ ಸರ್ ಅವರ ನಿರಾಹಾರ ಸತ್ಯಾಗ್ರಹ ಮುಂದುವರಿದಿದ್ದು, ಇಂದು ಅವರ ಉಪವಾಸ ಸತ್ಯಾಗ್ರಹದ 26ನೇ ದಿನವಾಗಿದೆ. ಆದ್ದರಿಂದ ನಮ್ಮ ಬೇಡಿಕೆಗಳು ಈಡೇರುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಅಭಿಜಿತ್‌ ದೀಪ್ಕೆ ಬೇಡಿಕೆಕೊಂಡರು.

ಪೊಲೀಸರು ಕಲ್ಲುಗಳನ್ನು ತುಂಬಿರುವ ಟ್ರಕ್‌ಗಳನ್ನು ತರುತ್ತಿದ್ದಾರೆ. ಕಲ್ಲು ತೂರಾಟ ನಮ್ಮ ಕಡೆಯಿಂದ ನಡೆದಿಲ್ಲ. ಬಿಜೆಪಿಯ ಗೂಂಡಾಗಳು ಈ ಕೃತ್ಯ ಎಸಗುತ್ತಿದ್ದಾರೆ. ಬಿಜೆಪಿಯ ಗೂಂಡಾಗಳು ಬಂದು ಕಲ್ಲು ತೂರಾಟ ನಡೆಸಿ, ನಂತರ ಸಿಜೆಪಿ ಕಾರ್ಯಕರ್ತರ ಹೆಸರನ್ನು ಕೆಡಿಸುತ್ತಿದ್ದಾರೆ ಎಂದು ದೂರಿದರು.

ನಾವು ಕಳೆದ ಒಂದು ತಿಂಗಳಿನಿಂದ ಶಾಂತಿಯುತವಾಗಿ ಧರಣಿ ಕುಳಿತಿದ್ದೇವೆ. ಈ ಒಂದು ತಿಂಗಳಲ್ಲಿ ಇಂತಹ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೆ ಈಗ ಈ ಹೋರಾಟ ಬೃಹತ್ ರೂಪ ಪಡೆದುಕೊಳ್ಳುತ್ತಿದ್ದಂತೆ ಜನರನ್ನು ಪ್ರಚೋದಿಸಲು ಬಿಜೆಪಿಯವರು ಹೊರಗಿನಿಂದ ಗೂಂಡಾಗಳನ್ನು ಕಳುಹಿಸುತ್ತಿದ್ದಾರೆ ಎಂದು ಹೇಳಿದರು.

ಒಟ್ಟಿನಲ್ಲಿ ಇದನ್ನು ನಿಜಕ್ಕೂ ಬಿಜೆಪಿಯವರು ಮಾಡಿಸಿದ್ದಾರಾ? ಇಲ್ಲವೇ ಇದರ ಹಿಂದೆ ಬೇರೆಯವರ ಕೈವಾಡವಿದೆಯಾ ಎಂದು ಕಾದುನೋಡಬೇಕಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others