ಲೈಂಗಿಕ ಕಿರುಕುಳ ತಡೆ ಕಾಯ್ದೆ ಕುರಿತು ಅರಿವು ಮೂಡಿಸುವುದು ಅಗತ್ಯ : ನಾಗಲಕ್ಷ್ಮಿ ಚೌಧರಿ

ಬೆಳಗಾವಿ: ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಗೌರವ, ಘನತೆ ಹಾಗೂ ಸುರಕ್ಷತೆಯೊಂದಿಗೆ ಕಾರ್ಯನಿರ್ವಹಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಬೇಕು. ಮಹಿಳೆಯರು ತಮ್ಮ ಹಕ್ಕುಗಳ ಅರಿವು ಪಡೆಯಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸುವರ್ಣ ಸೌಧದ ಸೆಂಟ್ರಲ್ ಹಾಲ್ ನಲ್ಲಿ ನಡೆದ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಕಾಯ್ದೆ 2013ರ ಕುರಿತು […]
Mohan Bhagwat: ಶುದ್ಧ ಸಾತ್ವಿಕ ಪ್ರೇಮವೇ ನಮ್ಮ ಸಂಸ್ಥೆಯ ಕಾರ್ಯದ ಅಡಿಪಾಯ – ಮೋಹನ್ ಭಾಗವತ್

ಲಂಡನ್: ಶುದ್ಧ ಸಾತ್ವಿಕ ಪ್ರೇಮವೇ ನಮ್ಮ ಸಂಸ್ಥೆಯ ಕಾರ್ಯದ ಅಡಿಪಾಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ತಿಳಿಸಿದ್ದಾರೆ. ಲಂಡನ್ನಲ್ಲಿ ಮಾತನಾಡಿದ ಅವರು, ಆತ್ಮೀಯತೆಯ ಈ ಪರಿಕಲ್ಪನೆಯು ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗಿರದೆ ಕುಟುಂಬ, ಸಮುದಾಯ, ಸಮಾಜ ಮತ್ತು ಇಡೀ ಮಾನವಕುಲಕ್ಕೆ ವಿಸ್ತರಿಸುತ್ತದೆ. ಪ್ರಕೃತಿಯೊಂದಿಗೆ ಹಿಂದೂ ನಾಗರಿಕತೆ ಹೊಂದಿರುವ ನಿಕಟ ಸಂಬಂಧವನ್ನು ಒತ್ತಿ ಹೇಳಿದರು. ಕೆಲವರು ನಮ್ಮ ಕಾರ್ಯಕ್ಕೆ ತೀವ್ರ ದ್ವೇಷವೇ ಆಧಾರ ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಆದರೆ ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ. […]
Yathindra Siddaramaiah : ಬಿಜೆಪಿಯವರು ಕೂತು ಕೂತು ಸೋಮಾರಿಗಳಾಗಿದ್ದರು. ಸ್ವತಃ ಕ್ರಿಯಾಶೀಲರಾಗಬೇಕು – ಯತೀಂದ್ರ

ರಾಯಚೂರು: ನಿನ್ನೆ (ಸೆ.6) ಬೆಂಗಳೂರಿನಲ್ಲಿ ನಡೆದಿರೋದು ಅಹಿಂದ ಸಭೆ ಅಲ್ಲ. ಹಿಂದುಳಿದ ಸಂಘಟನೆಗಳ ಒಕ್ಕೂಟದಿಂದ ಕಾರ್ಯಕ್ರಮ ಆಗಿದೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ಇದು ನಮ್ಮ ತಂದೆಯವರು ಮಾಡಿದ ಕಾರ್ಯಕ್ರಮ ಅಲ್ಲ, ಕರೆಯೋದು, ಇತ್ತೀಚೆಗೆ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ಅಂತರ ಕಾಯ್ದುಕೊಳ್ಳುತ್ತಿದ್ದಾರಾ ಅನ್ನೋ ವಿಚಾರಕ್ಕೆ ನನಗೆ ಗೊತ್ತಿರುವಂತೆ ಅಂತಹದ್ದೇನು ಇಲ್ಲ ಎಂದು ತಿಳಿಸಿದ್ದಾರೆ. ಪಾದಯಾತ್ರೆಯಿಂದ ಏನೂ ಪ್ರಯೋಜನ ಇಲ್ಲ. ಯಾವ ಉದ್ದೇಶದಿಂದ ಪಾದಯಾತ್ರೆ ಮಾಡಬೇಕು ಅನ್ಕೊಂಡಿದ್ರೊ ಆ ಉದ್ದೇಶ […]
CM DK Shivakumar : ಹೈಕಮಾಂಡ್ ಸೂಚನೆಯಂತೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ನೂತನ ಶಿಕ್ಷಣ ನೀತಿ

ದೇವನಹಳ್ಳಿ: “ನವ ಯುವ ಪೀಳಿಗೆಯ ಅಗತ್ಯ, ಆಲೋಚನೆಗೆ ತಕ್ಕಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೂಚನೆಯಂತೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ನೂತನ ಶಿಕ್ಷಣ ನೀತಿ ರೂಪಿಸಲು ಮುಂದಾಗಿದ್ದೇವೆ” ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದ ರಾಮಯ್ಯ ವಿಜ್ಞಾನ ಮತ್ತು ಮ್ಯಾನೇಜ್ ಮೆಂಟ್ ಸಂಸ್ಥೆ ಉದ್ಘಾಟನೆ ಹಾಗೂ ನಾರಾಯಣ ಪ್ರಜ್ಞಾಲಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಯರಾಂ ಅವರ ಹಾಗೂ ನನ್ನ ಪರಿಚಯ 40 ವರ್ಷಗಳಷ್ಟು ಹಳೆಯದು. ಜಯರಾಂ ಅವರನ್ನು […]
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ದೇಶಭಕ್ತ – ಶರತ್ ಚಂದ್ರ ಬೋಸ್

ಸೆಪ್ಟೆಂಬರ್ 6 ಮರೆತುಹೋದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನ ಜಯಂತಿ ವಿಶೇಷವಾಗಿದೆ. ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರು ಅಜರಾಮರ. ಆದರೆ ಆ ನೇತಾಜಿಯ ಬೆನ್ನೆಲುಬಾಗಿ, ಅವರ ಪ್ರತಿ ಹೆಜ್ಜೆಯಲ್ಲೂ ನೆರಳಿನಂತೆ ನಿಂತು, ತನ್ನ ಸರ್ವಸ್ವವನ್ನೇ ದೇಶಕ್ಕೆ ಅರ್ಪಿಸಿದ ಇನ್ನೊಬ್ಬ ಮಹಾನ್ ಚೇತನ ಶರತ್ ಚಂದ್ರ ಬೋಸ್. ಇಂದು ಸೆಪ್ಟೆಂಬರ್ 6, ಅವರ 137ನೇ ಜಯಂತಿ. ಈ ದಿನ ಅವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಬಾಲ್ಯ ಮತ್ತು ಶಿಕ್ಷಣ : ಶರತ್ ಚಂದ್ರ […]
ಡೊಮಿನಿಕನ್ ರಿಪಬ್ಲಿಕ್ ದೇಶದಿಂದ ವಿಶ್ವ ಸುಂದರಿ ಪಟ್ಟ ಗೆದ್ದ ಎರಡನೇ ಮಹಿಳೆ : ಹಾಗಾದ್ರೆ ಜೊಹೆರಿ ಮೊಲಾ ಯಾರು ?

ಹನೋಯ್: ಡೊಮಿನಿಕನ್ ರಿಪಬ್ಲಿಕ್ ದೇಶದಿಂದ ವಿಶ್ವ ಸುಂದರಿ ಪಟ್ಟ ಗೆದ್ದ ಎರಡನೇ ಮಹಿಳೆಯಾಗಿದ್ದು, ಡೊಮಿನಿಕನ್ ರಿಪಬ್ಲಿಕ್ನ ಜೊಹೆರಿ ಮೊಲಾ ಅವರು ʻಮಿಸ್ ವರ್ಲ್ಡ್ 2026ʼ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಡೊಮಿನಿಕನ್ ರಿಪಬ್ಲಿಕ್ ಅನ್ನು ಪ್ರತಿನಿಧಿಸಿದ್ದ ಜೊಹೆರಿ ಮೊಲಾ, ಅಂತಿಮ ಸುತ್ತಿನಲ್ಲಿ ಸ್ಪೇನ್ನ ಎಲಿಸಬೆತ್ ರೆಯ್ನೆಸ್ ಅವರನ್ನ ಹಿಂದಿಕ್ಕಿ ವಿಜೇತರಾದರು. ಎಲಿಸಬೆತ್ ರೆಯ್ನೆಸ್ ಪ್ರಥಮ ರನ್ನರ್ ಅಪ್, ಮಲೇಷ್ಯಾದ ತಾನುಸಿಯಾ ಚೆಟ್ಟಿ ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆದರು ಎನ್ನಲಾಗಿದೆ. ಕಳೆದ ವರ್ಷದ 72ನೇ ಮಿಸ್ ವರ್ಲ್ಡ್ ಪಟ್ಟ ಗೆದ್ದ […]
Actress Ramya : ಅಶ್ಲೀಲ ಕಾಮೆಂಟ್ ಪ್ರಕರಣ- ಈ ಪ್ರಕರಣ ಎಲ್ಲರಿಗೂ ಒಂದು ಪಾಠವಾಗಬೇಕು: ನಟಿ ರಮ್ಯಾ

ಬೆಂಗಳೂರು : ಅಶ್ಲೀಲ ಕಾಮೆಂಟ್ ಪ್ರಕರಣ ವಿಚಾರವಾಗಿ ನಟಿ ರಮ್ಯಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಪ್ರಕರಣ ಎಲ್ಲರಿಗೂ ಒಂದು ಪಾಠವಾಗಬೇಕು ಎಂದು ಹೇಳಿದ್ದಾರೆ. ನಟಿ ರಮ್ಯಾಗೆ ಅಶ್ಲೀಲ ಸಂದೇಶ ಹಾಗೂ ಕಾಮೆಂಟ್ಗಳನ್ನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಕುಟುಂಬಸ್ಥರು ಕೇಸ್ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಆದ್ರೆ, ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾ ಹಾಗೂ ಮೊಬೈಲ್ ಬಳಸಿಕೊಂಡು ಯಾರ ಬಗ್ಗೆಯಾದರೂ ಮನಬಂದಂತೆ ಕೆಟ್ಟದಾಗಿ ಕಾಮೆಂಟ್ ಮಾಡುವುದು ಸರಿಯಲ್ಲ. ʻಒಬ್ಬ […]
ಕೆಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಿದೆ: ಗ್ಲಾಸ್ ಯಾವಾಗಲೂ ಅರ್ಧ ಖಾಲಿಯಾಗಿರುತ್ತದೆ- ಪ್ರಧಾನಿ ಮೋದಿ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಜಾಗತಿಕ ವ್ಯಾಪಾರಕ್ಕೆ ಅಡ್ಡಿಪಡಿಸಿದ ಹೊರತಾಗಿಯೂ ಭಾರತದ 7.8ರಷ್ಟು GDP ಬೆಳವಣಿಗೆಯು ದೇಶದ ಆರ್ಥಿಕತೆಯ ಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ GDP ಅಂಕಿಅಂಶಗಳನ್ನು ಉಲ್ಲೇಖಿಸುವ ಮೂಲಕ ವಿಮರ್ಶಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಂದರು. ಇಂತಹ ಸಂದರ್ಭಗಳಲ್ಲಿ ಇಂತಹ ಬೆಳವಣಿಗೆಯನ್ನು ಸಾಧಿಸುವುದು ಭಾರತದ ಶಕ್ತಿ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಭಾರತವು ಬೆಳೆಯುತ್ತಿದೆ ಮಾತ್ರವಲ್ಲದೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಇದರ ಹೊರತಾಗಿಯೂ, 2013ರಲ್ಲಿ ಗ್ಲಾಸ್ […]
ಪಾಲಿಕೆ ಸಿಬ್ಬಂದಿಗೆ ಕೃಷ್ಣ ಬೈರೇಗೌಡ ಖಡಕ್ ವಾರ್ನಿಂಗ್ : ಕರ್ತವ್ಯ ಲೋಪ ಸಹಿಸಲ್ಲ, ಕರ್ತವ್ಯಕ್ಕೆ ಗೈರಾದ್ರೆ ಸೇವೆಯಿಂದ ವಜಾ

ಬೆಂಗಳೂರು: ಕರ್ತವ್ಯಕ್ಕೆ ಗೈರುಹಾಜರಾಗುವ ಪಾಲಿಕೆ ಸಿಬ್ಬಂದಿಗೆ ಇನ್ಮುಂದೆ ಯಾವುದೇ ವಿನಾಯಿತಿ ಇಲ್ಲ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಬೆಂಗಳುರಿನಲ್ಲಿ ಮಾತನಾಡಿದ ಅವರು, ಗೈರುಹಾಜರಾಗುವ ಸಿಬ್ಬಂದಿಗೆ ನೋಟಿಸ್ ನೀಡಲಾಗುವುದು. ಅವರು ಸಮರ್ಪಕವಾಗಿ ಉತ್ತರಿಸದಿದ್ದರೆ, ಸೇವೆಯಿಂದ ವಜಾಗೊಳಿಸುವ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ. ಬೆಂಗಳೂರಿನ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಸಿದ ಪರಿಶೀಲನೆ ವೇಳೆ ಶೇ.30ರಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿರುವುದು ಕಂಡುಬಂದಿದ್ದು, ಪದೇಪದೆ ಕರ್ತವ್ಯಕ್ಕೆ ಗೈರಾಗುವ ಸಿಬ್ಬಂದಿಗೆ ನೋಟಿಸ್ ನೀಡಿ, ಸಮರ್ಪಕ […]
ರಾಷ್ಟ್ರೀಯ ವನ್ಯಜೀವಿಗಳ ದಿನ-ವನ್ಯಜೀವಿ ಸಂರಕ್ಷಣೆ ಇದು ದಯೆಯಲ್ಲ, ನಮ್ಮ ಸಾಂವಿಧಾನಿಕ ಜವಾಬ್ದಾರಿ

ಇಂದು ಸೆಪ್ಟೆಂಬರ್ 4, ರಾಷ್ಟ್ರೀಯ ವನ್ಯಜೀವಿಗಳ ದಿನ.“ವನ್ಯಜೀವಿಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ, ಅವುಗಳ ಉಳಿವಿನಲ್ಲೇ ಪ್ರಕೃತಿಯ ಉಳಿವು.”ಇದು ಕೇವಲ ಘೋಷಣೆಯಲ್ಲ, ಇದು ಭಾರತದ ಸಂವಿಧಾನ ಮತ್ತು ಕಾನೂನು ಹೇಳುವ ಕಡ್ಡಾಯ ಜವಾಬ್ದಾರಿ. ರಾಷ್ಟ್ರೀಯ ವನ್ಯಜೀವಿಗಳ ದಿನವನ್ನು (National Wildlife Day) ಪ್ರತಿ ವರ್ಷ ಸೆಪ್ಟೆಂಬರ್ 4 ರಂದು ಆಚರಿಸಲಾಗುತ್ತದೆ. ಇದನ್ನು 2005 ರಲ್ಲಿ ಅಮೆರಿಕದ ಪ್ರಾಣಿ ನಡವಳಿಕೆ ತಜ್ಞೆ ಕಾಲೀನ್ ಪೈಗ್ ಸ್ಥಾಪಿಸಿದರು. 2006 ರಲ್ಲಿ “ಮೊಸಳೆ ಬೇಟೆಗಾರ” ಖ್ಯಾತಿಯ ವನ್ಯಜೀವಿ ಸಂರಕ್ಷಕ ಸ್ಟೀವ್ ಇರ್ವಿನ್ ಮೃತಪಟ್ಟ […]