ಬಡ ರೋಗಿಗಳಿಗೆ ಗುಡ್​​ ನ್ಯೂಸ್​​: ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುವವರಿಗೆ ಯುಟಿ ಖಾದರ್ ಬಿಗ್ ಗಿಫ್ಟ್

UT Khadar ಬೆಂಗಳೂರು: ಇನ್ನು ಮುಂದೆ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಭೇಟಿ ನೀಡುವ ಬಡ ಮತ್ತು ಸಾಮಾನ್ಯ ರೋಗಿಗಳಿಗೆ ಸ್ಪಂದಿಸಲು ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಕಷ್ಟಗಳು ಮತ್ತು ಗೊಂದಲಗಳು ಹಾಗೂ ಸಿಬ್ಬಂದಿಗಳ ನಡೆಗಳ ಕುರಿತಾದ ದೂರುಗಳನ್ನು ಆಲಿಸಲು ಆರೋಗ್ಯ ಸಚಿವರ ಕಚೇರಿಯಿಂದಲೇ ನೇರವಾಗಿ ನಿಯಂತ್ರಿಸಲ್ಪಡುವ 24×7 ಹೆಲ್ಪ್‌ಲೈನ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯುಟಿ ಖಾದರ್ ಸೂಚಿಸಿದರು. ಈ ನಿರ್ಧಾರದಿಂದ ಬಡವರಿಗೆ ಮತ್ತು […]

“ಒಬ್ಬ ವಿದ್ಯಾರ್ಥಿ – ಒಂದು ಗಿಡ” ಅಭಿಯಾನಕ್ಕೆ ಬಿ ಎಸ್ ವಿಶಾಲಾಕ್ಷಿಯಿಂದ ಚಾಲನೆ

BS Vishalakshi ಶ್ರೀರಂಗಪಟ್ಟಣ: ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ, ತಲೆಯ ಮೇಲೆ ನೆರಳು ಕೊಡುವ ಮರ ಇವೆಲ್ಲವೂ ನಮ್ಮ ಪರಿಸರ. ನಮ್ಮ ತಾಯಿ ಹೇಗೆ ನಮ್ಮನ್ನು ಸಾಕಿ ಸಲಹುತ್ತಾರೋ, ಹಾಗೆಯೇ ಭೂತಾಯಿ ನಮ್ಮನ್ನು ಸಲಹುತ್ತಿದ್ದಾಳೆ. ವಿದ್ಯಾರ್ಥಿಗಳಾದ ನೀವುಗಳು ವಿದ್ಯಾಭ್ಯಾಸದ ಜೊತೆಗೆ ಸಂರಕ್ಷಣೆಯ ಕಾಳಜಿಯನ್ನು ಮೈಗೂಡಿಸಿಕೊಳ್ಳಬೇಕು . ಶಾಲಾ ಆವರಣಗಳಲ್ಲಿ ಒಬ್ಬ ವಿದ್ಯಾರ್ಥಿ ಒಂದು ಸಸಿ ನೆಟ್ಟು ಬೆಳೆಸಿ ಪೋಷಿಸಬೇಕು. ಇದೆ ವಿದ್ಯಾರ್ಥಿ ದೆಸೆಯಲ್ಲಿ ಪ್ರಕೃತಿಗೆ ನಾವು ಕೊಡುವ ಕೊಡುಗೆ. ಎಂದು ಶ್ರೀರಂಗನಾಯಕಿ ಸ್ತ್ರೀ […]

ಇನ್ಮುಂದೆ ನನ್ನನ್ನು ಕೊನೆ ಭಾಷಣಕಾರನನ್ನಾಗಿ ಮಾಡಬೇಡಿ: ಹಾಸ್ಯ ಚಟಾಕಿ ಹಾರಿಸಿದ ಮಾಜಿ ಸಿಎಂ ಸಿದ್ದು

ಬೆಂಗಳೂರು: ಇಂದು ಬಿಕೆ ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಇದರ ಬೆನ್ನಲ್ಲೇ ಮಾಜಿ ಸಿಎಂ ಸಿದ್ದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಹಿಂದಿನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನೂತನ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರಿಗೆ ಧ್ವಜ ಹಸ್ತಾಂತರಿಸಿದರು. ಬಳಿಕ ಎಲ್ಲಾ ನಾಯಕರು ಪಕ್ಷ ಸಂಘಟನೆ ಬಗ್ಗೆ ವಿವರವಾಗಿ ಮಾತನಾಡಿದರು. ಇನ್ನು ಕಾರ್ಯಕ್ರಮದಲ್ಲಿ ಕೊನೆಯದಾಗಿ ಭಾಷಣ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಅವಕಾಶ […]

ಹರಿಪ್ರಸಾದ್‌ ಪದಗ್ರಹಣ: ಯೂಸ್‌ಲೆಸ್‌ ಫೆಲೋಸ್‌ ಸುಮ್ನಿ ಇರಿ? ಕೈ ಕಾರ್ಯಕರ್ತರ ಮೇಲೆ ಮಲ್ಲಿಕಾರ್ಜುನ ಖರ್ಗೆ ಗರಂ

Hariprasad’s capture ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್‌ ಪದಗ್ರಹಣ ಮಾಡಲಾಗಿತ್ತು ಈ ಕಾರ್ಯಕ್ರಮದಲ್ಲಿ ಡಿಕೆಶಿ ಅಭಿಮಾನಿಗಳು ಡಿಕೆ ಡಿಕೆ ಎಂದು ಕೂಗುತ್ತಿದ್ದರು ಇವರು ಬೇರೆ ಯಾರು ಆಗಿರಲಿಲ್ಲ ಇಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಇದ್ದರು. ಇವರೇ ಡಿಕೆ ಡಿಕೆ ಎಂದು ಕೂಗಿದರು ಇದನ್ನು ಗಮನಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೆಂಡಾಮಂಡಲಾದರು. ನಾನು ಮತ್ತು ಬಾಕಿಯವರೆಲ್ಲಾ ಕಸಗುಡಿಸೋಕೆ ಬಂದಿದ್ದೇವಾ? ಯೂಸ್‌ಲೆಸ್‌ ಫೆಲೋಸ್‌ ಎಂದು ಕೈ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ […]

ಮೊಹರಂ ಶಾಂತಿ ಸಭೆ: ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

ವಿಜಯನಗರ ಜಿಲ್ಲೆ ಕೂಡ್ಲಿಗಿ : ಜೂನ್ 20 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ , ಕೂಡ್ಲಿಗಿ ಪೊಲೀಸ್ ಉಪವಿಭಾಗ. ಮತ್ತು ಪೊಲೀಸ್ ಠಾಣೆ , ಹಾಗೂ ತಾಲೂಕಾಡಳಿತ , ವಿವಿದ ಸಮುದಾಯಗಳ ಮುಖಂಡರು , ನಾಗರೀಕರ ಸಹಯೋಗದಲ್ಲಿ. ಮೊಹರಂ ಹಬ್ಬದ ಪ್ರಯುಕ್ತ , ಶಾಂತಿ ಸಭೆ ಆಯೋಜಿಸಲಾಗಿತ್ತು. ಇಲಾಖೆಯೊಂದಿಗೆ ಸರ್ವರೂ ಸಹಕರಿಸಬೇಕಿದೆ-ಡಿ.ವೈ.ಎಸ್ಪಿ ಮಲ್ಲೇಶಪ್ಪ ದೊಡ್ಡಮನೆ ಮಾತನಾಡಿ , ಹಬ್ಬ ಸಂಭ್ರಮದ ಸಂಖೇತವಾಗಿದೆ. ಯಾವುದೇ ಕಾರಣಕ್ಕೆ ಶಾಂತಿ ಭಂಗವಾಗಬಾರದು , ಕಾನೂನು ಸುವ್ಯೆವಸ್ಥೆಗೆ ಧಕ್ಕೆ ತರುವುದಕ್ಕೆ ಆಸ್ಪದವಿರುವುದಿಲ್ಲ , […]

ಗಂಧದ ಮರ ಕದ್ದ ಕಳ್ಳರು ಇದೀಗ ಅಂದರ್: 200 KG ಗಂಧದ ಮರ ವಶಕ್ಕೆ ಪಡೆದ ಖಾಕಿ

ದೊಡ್ಡಬಳ್ಳಾಪುರ: ಶಾಲಾ ಅವರಣದಲ್ಲಿನ ಗಂಧದ ಮರಗಳನ್ನ ಮಧ್ಯರಾತ್ರಿ ಸಮಯದಲ್ಲಿ ಕಟಾವ್ ಮಾಡಿ ಕಳವು ಮಾಡಿದ್ದರು, ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ನಗರ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಮೇ 13ರ ಮಧ್ಯರಾತ್ರಿ ಕಛೇರಿ ಪಾಳ್ಳಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ, ದರ್ಗಾ ಮೊಹಲ್ಲಾ ಬಳಿಯ ಮಸೀದಿ ಮತ್ತು ಸ್ಮಶಾನ ಜಾಗದಲ್ಲಿ ಬೆಳೆದಿದ್ದ ಗಂಧದ ಮರಗಳನ್ನ ಕಳವು ಮಾಡಲಾಗಿತ್ತು. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ದೊಡ್ಡಬಳ್ಳಾಪುರ ನಗರ […]

ವಯಸ್ಸು ಹೆಣ್ಣಿಗೆ ಮಾತ್ರನಾ? ಗಂಡಿಗೆ ವಯಸ್ಸೇ ಆಗಲ್ವಾ? ನೈಜ್ಯ ಕಾರಣ ಇಲ್ಲಿದೆ ನೋಡಿ..

ಸಮಾನತೆ ಬಗ್ಗೆ ಸರಳವಾಗಿಯೇ ಕಂಡ ಕಂಡವರ ಮುಂದೆ ಸಾರುತ್ತಿದ್ದು, ಇದರ ಬಗ್ಗೆ ಪ್ರಚಾರವೂ ಭರ್ಜರಿಯಾಗಿ ಮಾಡುತ್ತೇವೆ. ಆದರೇ, ನಿಜವಾಗಿಯೂ ನಮ್ಮಲ್ಲಿ ಸಮಾನತೆ ನೆಲೆಸಿದೆಯೇ? ನಾವೆಲ್ಲಾ ಒಂದೇ ಎನ್ನುವ ರೀತಿಯಲ್ಲಿ ಬದುಕುತ್ತಿದ್ದಿವಾ? ಇಲ್ಲವೇ ಇಲ್ಲ ಈ ಸಮಾನತೆ ಮಾತಿಗೆ ಮಾತ್ರ ಜೀವಂತವಿದೆ ಆದರೆ, ಇದು ಲೈವ್​ಲ್ಲಿ ಯಾವಾಗಲೂ ಮರೆಯಾಗಿರುತ್ತದೆ. ಜಾತಿ ಹೆಸರಿನಲ್ಲಿ,ಸಿರಿತನ-ಬಡತನ ಕೊನೆಗೆ ಬಟ್ಟೆಯಲ್ಲಿಯೂ ಭೇದ-ಭಾವ ಮಾಡುತ್ತೇವೆ. ಈ ವಿಚಾರವನ್ನೆಲ್ಲಾ ಪಕ್ಕಕ್ಕೆ ಸರಿಸೋಣ ಸದ್ಯಕ್ಕೆ ನಮ್ಮ ಗಮನ ಸಿನಿ ರಂಗದತ್ತವಿರಲಿ, ಹೌದು ಸಿನಿರಂಗದಲ್ಲಿ ಕೆಲ ವಿಚಾರಗಳು ನಮ್ಮ ಕಣ್ಣು […]

ಇನ್ಮುಂದೆ ರಾಜ್ಯದ ಗ್ರಾಮ ಪಂಚಾಯ್ತಿಯಲ್ಲೇ ದೊರೆಯಲಿದೆ ‘ವಾಸ ಸ್ಥಳ ಪ್ರಮಾಣ ಪತ್ರ’!

ಬೆಂಗಳೂರು: ಗ್ರಾಮೀಣ ಭಾಗದ ನಾಗರಿಕರು ತುರ್ತು ಸಂದರ್ಭಗಳಲ್ಲಿ ವಿವಿಧ ಸೌಲಭ್ಯಗಳನ್ನು ಪಡೆಯಲು ವಾಸ ಸ್ಥಳ ಪ್ರಮಾಣ ಪತ್ರಕ್ಕಾಗಿ ಹೋಬಳಿ ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸಲು ಕರ್ನಾಟಕ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಇನ್ಮುಂದೆ ಸ್ಥಳೀಯ ಗ್ರಾಮ ಪಂಚಾಯತಿಗಳಲ್ಲೇ ಅತ್ಯಂತ ಸುಲಭವಾಗಿ ನಾಗರಿಕರು ಈ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜೂನ್ 13ರಂದು ನಡೆದ ಸಭೆಯ ನಿರ್ದೇಶನದಂತೆ ಈ ಮಹತ್ತರ ಆಡಳಿತಾತ್ಮಕ ಸುಧಾರಣೆಯನ್ನು ಜಾರಿಗೆ ತರಲಾಗಿದೆ. ಪಿಡಿಒ (PDO) ಗಳಿಗೇ ಸಿಕ್ಕಿತು ದೃಢೀಕರಣದ ಪವರ್ ಸರ್ಕಾರದ ಹೊಸ […]

Vinodh Prabakar: ಖ್ಯಾತ ನಟ ವಿನೋದ್ ಪ್ರಭಾಕರ್ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು, ಐಸಿಯುನಲ್ಲಿ ಚಿಕಿತ್ಸೆ!

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ವಿನೋದ್ ಪ್ರಭಾಕರ್ ಅವರು ಹಠಾತ್ ಅನಾರೋಗ್ಯಕ್ಕೆ ಒಳಗಾಗಿದ್ದು, ಚಿಕಿತ್ಸೆಗಾಗಿ ಅವರನ್ನು ನಗರದ ನಾಗರಭಾವಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಶನಿವಾರ (ಜೂನ್ 20) ಈ ಘಟನೆ ನಡೆದಿದ್ದು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದು ಅಭಿಮಾನಿ ವಲಯದಲ್ಲಿ ಆತಂಕ ಶುರುವಾಗಿದೆ. ರಕ್ತದೊತ್ತಡದ ಸಮಸ್ಯೆಯಿಂದ ತೊಂದರೆ ಮನೆಯಲ್ಲಿದ್ದ ನಟ ವಿನೋದ್ ಪ್ರಭಾಕರ್ ಅವರಿಗೆ ಹಠಾತ್ತನೆ ರಕ್ತದೊತ್ತಡದ (ಬಿಪಿ) ಏರುಪೇರು ಉಂಟಾಗಿದೆ ಎನ್ನಲಾಗಿದೆ. ಶಾರೀರಿಕವಾಗಿ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡ ತಕ್ಷಣವೇ ಎಚ್ಚೆತ್ತ ಕುಟುಂಬಸ್ಥರು, ಯಾವುದೇ ವಿಳಂಬಕ್ಕೆ […]

ದೇಶದ ಅನ್ನದಾತರಿಗೆ ಸಿಹಿಸುದ್ದಿ: 23ನೇ ಕಂತಿನ ಪಿಎಂ ಕಿಸಾನ್ ಯೋಜನೆಯ ಹಣ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕೃಷಿ ವಲಯಕ್ಕೆ ಭರ್ಜರಿ ಉಡುಗೊರೆಗಳನ್ನು ನೀಡಿದ್ದಾರೆ. ಭಾರತ ಸರ್ಕಾರದ ಕೃಷಿ ಸಚಿವಾಲಯ ಹಾಗೂ ಬಂಗಾಳ ಸರ್ಕಾರದ ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ ಬಹುನಿರೀಕ್ಷಿತ 23ನೇ ಕಂತಿನ ಹಣವನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು. ದೇಶದ 9.44 ಕೋಟಿಗೂ ಅಧಿಕ ರೈತರಿಗೆ ಸಿಕ್ಕಿತು ಆರ್ಥಿಕ ನೆರವು ಪ್ರಧಾನಿಯವರು ಬಿಡುಗಡೆ […]