Hariprasad's capture ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್ ಪದಗ್ರಹಣ ಮಾಡಲಾಗಿತ್ತು ಈ ಕಾರ್ಯಕ್ರಮದಲ್ಲಿ ಡಿಕೆಶಿ ಅಭಿಮಾನಿಗಳು ಡಿಕೆ ಡಿಕೆ ಎಂದು ಕೂಗುತ್ತಿದ್ದರು ಇವರು ಬೇರೆ ಯಾರು ಆಗಿರಲಿಲ್ಲ ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಇದ್ದರು. ಇವರೇ ಡಿಕೆ ಡಿಕೆ ಎಂದು ಕೂಗಿದರು ಇದನ್ನು ಗಮನಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೆಂಡಾಮಂಡಲಾದರು. ನಾನು ಮತ್ತು ಬಾಕಿಯವರೆಲ್ಲಾ ಕಸಗುಡಿಸೋಕೆ ಬಂದಿದ್ದೇವಾ? ಯೂಸ್‌ಲೆಸ್ ಫೆಲೋಸ್ ಎಂದು ಕೈ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಕೆಪಿಸಿಸಿ ನೂತನ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು, ಸಮಾವೇಶ ಉದ್ದೇಶಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡುತ್ತಿದ್ದಾಗ ಕಾರ್ಯಕರ್ತರು ಡಿಕೆ, ಡಿಕೆ, ಡಿಕೆ ಎಂದು ಘೋಷಣೆ ಕೂಗಲಾರಂಭಿಸಿದರು ಈ ಕಾರಣಕ್ಕಾಗಿ ಕಾರ್ಯಕರ್ತರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಸಿಡಿದೆದ್ದರು.
ಪಕ್ಷಕ್ಕೆ ಶಿಸ್ತು ಬೇಕು. ಯಾರು ಎಷ್ಟೇ ದೊಡ್ಡವರಿರಲಿ, ಇಲ್ಲಿ ವ್ಯಕ್ತಿ ಪೂಜೆ ನಡೆಯಲ್ಲ. ನನ್ನ 58 ವರ್ಷದ ರಾಜಕೀಯ ಜೀವನದಲ್ಲಿ ಹಲವು ನಾಯಕರು ಬಂದು ಹೋಗಿದ್ದಾರೆ. ಸಾಕಷ್ಟು ಮಂದಿ ನೋಡಿದ್ದೇನೆ. ಅನೇಕ ನಾಯಕರು ಕಾಂಗ್ರೆಸ್‌ನಿಂದ ಬೆಳೆದಿದ್ದಾರೆ. ಪಕ್ಷಕ್ಕೆ ಕೊಡುಗೆ ಹೆಚ್ಚು ಇರದಿದ್ದರೂ, ಹಲವರಿಗೆ ಕಾಂಗ್ರೆಸ್ ಹೆಚ್ಚಿನ ಶಕ್ತಿ ಕೊಟ್ಟಿದೆ. ನಾವೆಲ್ಲರೂ ಕೂಡಿ ಪಕ್ಷವನ್ನು ಕಟ್ಟೋಣ. ಮಧ್ಯದಲ್ಲಿ ಕೂಗಾಡಿದರೆ ಪುಟೇಜ್ ಬಳಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಡಿಕೆಶಿ ಹೆಸರು ಕೂಗುತ್ತಿರುವವರಿಗೆ ” ಹೇ ಸುಮ್ಮನೆ ಆಗಿ. ಇಲ್ಲಿ ಕೂಗಿದರೆ ಮೀಟಿಂಗ್ ಒಳ್ಳೆಯ ರೀತಿ ಆಗಲ್ಲ. ಒಬ್ಬರ ಹೆಸರ ಮೇಲೆ ಕೂಗ್ತಾ ಇದ್ದರೆ, ಬಾಕಿಯವರು ಏನು ಕಸಗುಡಿಸಲು ಬಂದಿದ್ದಾರಾ? ಬೇರೆಯವರಿಗೆ ಮೌಲ್ಯವಿಲ್ಲ ಎಂದು ಕಾರ್ಯರ್ತರ ವಿರುದ್ಧ ಕಿಡಿಗಾರಿದರು.





