ಲಾಯರ್‌ ಬದಲಾವಣೆ : ಸುಪ್ರೀಂಗೆ‌ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ ದರ್ಶನ್

Darshan ಬೆಂಗಳೂರು: ಬಿಡುಗಡೆ ಭಾಗ್ಯ ಸಿಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಇದೀಗ ವಕೀಲರನ್ನು ಬದಲಾಯಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದರ ಬೆನ್ನಲ್ಲೇ ನೂತನ ವಕೀಲರ ಮೂಲಕ ಪ್ರಕರಣದ 60 ಸಾಕ್ಷಿಗಳ ವಿಚಾರಣೆಗೆ ನಿಗದಿಪಡಿಸಲಾಗಿರುವ ಒಂದು ವರ್ಷದ ಗಡುವನ್ನು ಕಡಿತಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಇದೀಗ ತಿಳಿದು ಬಂದಿದೆ. ಇದರಲ್ಲಿ ಒಂದು ವರ್ಷದ ಅವಧಿಯನ್ನು ಮರುಪರಿಶೀಲಿಸಿ, ಕಡಿಮೆ ಅವಧಿ ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿದ್ದು, ಕೇಸ್ ವಾದದಿಂದ ವಕೀಲ […]

ಕರ್ನಾಟಕ ಡ್ರಗ್ಸ್ ಕ್ಯಾಪಿಟಲ್ ಆಗ್ತಿದೆ,ಇದರ ಕಡೆ ಪ್ರಿಯಾಂಕ್ ಖರ್ಗೆ ಗಮನಹರಿಸಲಿ : ಸಿ.ಟಿ ರವಿ

ಬೆಂಗಳೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಬಗ್ಗೆ ಮಾತಾಡೋದು ಬಿಟ್ಟು ,ಅವರಿಗೆ ಮಾಡಲು ಬೇಕಾದಷ್ಟು ಕೆಲಸ ಇದ್ದು, ಆ ಕೆಲಸಗಳ ಕಡೆ ಗಮನ ಕೊಡಲಿ ಅಂತ ಬಿಜೆಪಿ ನಾಯಕ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಅನ್ನು ಮತ್ತೆ ಟಾರ್ಗೆಟ್ ಮಾಡ್ತಿರುವ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ಮಾಡೋದಕ್ಕೆ ತುಂಬಾ ಕೆಲಸಗಳು ಇವೆ. ಆ ಕಡೆ ಗಮನಹರಿಸಲಿ. ಕರ್ನಾಟಕ ಡ್ರಗ್ಸ್ ಕ್ಯಾಪಿಟಲ್ ಆಗ್ತಿದೆ. ಇದರ ಕಡೆ ಗಮನಹರಿಸಲಿ. ದೊಡ್ಡ ಪ್ರಮಾಣದಲ್ಲಿ ಬಾಂಗ್ಲಾ […]

ನಾಳೆ, ನಾಡಿದ್ದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ “66/11ಕೆ.ವಿ ಪದ್ಮನಾಭನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 24.06.2026 (ಬುಧವಾರ) ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 14:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬನಗಿರಿನಗರ, ಪಾಪಯ್ಯ ಗಾರ್ಡನ್, ಬಾಲಾಜಿ ಕಲ್ಯಾಣ ಮಂಟಪ ಸುತ್ತಮುತ್ತ, ಸಿದ್ದಮ್ಮ & ಸಿದ್ದಯ್ಯ ರೆಡ್ಡಿ ಏರಿಯಾ, ದಕ್ಷಿಣ 9ನೇ ಉಪ ವಿಭಾಗ ಕಛೇರಿ, ಜಯನಗರ ವಿಭಾಗ ಕಛೇರಿ, 30ನೇ ಮೇನ್, 30ನೇ ಕ್ರಾಸ್, ಬಿ.ಎನ್. ಎಂ. ಕಾಲೇಜ್, ಬಿ.ಡಿ.ಎ. ಕಾಂಪ್ಲೆಕ್ಸ್, ದೇವಗಿರಿ […]

ಓಸಿ ವಿನಾಯಿತಿ ನೀಡಿ ರಾಜ್ಯ ಇಂಧನ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಓಸಿ, ಸಿಸಿ ಇಲ್ಲದೆ ಹೊಸದಾಗಿ ನಿರ್ಮಿಸಿರುವ ಮನೆಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕವನ್ನು ಪಡೆಯಲು ವರ್ಷಕ್ಕೂ ಹೆಚ್ಚು ಕಾಲದಿಂದ ಕಾಯುತ್ತಿದ್ದ ಸಾರ್ವಜನಿಕರಿಗೆ ರಾಜ್ಯ ಸರ್ಕಾರವು ಶಾಶ್ವತ ವಿದ್ಯುತ್ ಸಂಪರ್ಕವನ್ನು ಪಡೆಯಲು ಸ್ವಾಧೀನ ಪ್ರಮಾಣಪತ್ರ (OC) ನೀಡುವುದರಿಂದ ಒಂದು ಬಾರಿಯ ವಿನಾಯಿತಿ ನೀಡಿ ಸೋಮವಾರ ಆದೇಶ ಹೊರಡಿಸಿದ್ದು,ಆದೇಶ ತ್ವರಿತಗತಿಯಲ್ಲಿ ಜಾರಿಗೆ ತರಲು ಇಂಧನ ಇಲಾಖೆ ಎಲ್ಲಾ ಎಸ್ಕಾಂಗಳಿಗೆ ಮಾರ್ಗಚೂಚಿಯನ್ನು ಹೊರಡಿಸಿದೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅರ್ಹ ವಸತಿ ಕಟ್ಟಡಗಳಿಗೆ ಶಾಶ್ವತ […]

ಸಚಿವ ಸಂಪುಟ ವಿಸ್ತರಣೆಗೆ ಸುಳಿವು ನೀಡಿದ ಡಿಕೆಶಿ: ಹಾಗಾದ್ರೆ ಯಾರಿಗೆ ಅವಕಾಶ ? ಇಲ್ಲಿದೆ ನೋಡಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಎಲ್ಲರಿಗೂ ಕ್ರೇಜ್‌ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆ ಕಸರತ್ತಿನ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊಸಬರಿಗೆ ಮಣೆ ಹಾಕುವ ಕುರಿತು ಮಹತ್ವದ ಸುಳಿವು ಕೊಟ್ಟಿದ್ದಾರೆ. ಇಂದು ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ತಮ್ಮ ಸರ್ಕಾರಿ ನಿವಾಸದತ್ತಿರ ದರ್ಗಾದ ಧರ್ಮಗುರುಗಳು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.ದರ್ಗಾದ ಧರ್ಮಗುರುಗಳು ಭೇಟಿ ನಂತರಮಾಧ್ಯಮಗಳಿಗೆ ಸಿಎಂ ಡಿಕೆ ಶಿವಕುಮಾರ ಮಹತ್ತರ ಮಾಹಿತಿ ನೀಡಿದ್ದಾರೆ. ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಆಲೋಚನೆ […]

ರಾಷ್ಟ್ರೀಯತೆಯ ಸಾರುವ ‘ಪೆದ್ದಿ’ ಸಿನಿಮಾ ಭಾರತೀಯ ಚಿತ್ರರಂಗಕ್ಕೆ ಭವಿಷ್ಯ ನೀಡುತ್ತಾ? ರಾಮ್ ಚರಣ್ ಇದರ ಬಗ್ಗೆ ಹೇಳಿದ್ದೇನು? ಇಲ್ಲಿದೆ ನೋಡಿ ಮಾಹಿತಿ

ಹಳೆಯ ಕಾಲದಲ್ಲಿ ದೇಶ ಭಕ್ತಿ ಸಾರುವ ಸಿನಿಮಾಗಳು ಕಡಿಮೆ ಮಟ್ಟದಲ್ಲಿ ಇದ್ದು, ಇತ್ತೀಚೆಗೆ ಬಹಳ ಮಟ್ಟಿಗೆ ಅಭಿವೃದ್ದಿಯಾಗುತ್ತಿವೆ. ಅತ್ತ ದಕ್ಷಿಣದಲ್ಲಿ ದೇಶಪ್ರೇಮ ಸಾರುವ ಸಿನಿಮಾ. ಸೈನಿಕರ ಬಗೆಗಿನ ಸಿನಿಮಾಗಳು, ರಾಷ್ಟ್ರೀಯತೆ ಸಾರುವ ಸಿನಿಮಾಗಳು ಕಡಿಮೆ ಇದ್ದವು. ಆದರೆ ಇತ್ತೀಚೆಗೆ ದಕ್ಷಿಣದಲ್ಲೂ ಈ ರೀತಿಯ ಚಿತ್ರಗಳು ಬೆಳೆಯುತ್ತಿವೆ. ಇತ್ತೀಚೆಗೆ ಬಿಡುಗಡೆ ಆದ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಸಹ ರಾಷ್ಟ್ರೀಯತೆ ಸಾರುವ, ದೇಶಪ್ರೇಮ ಸಾರುವ ಚಿತ್ರವಾಗಿದ್ದು, ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ವಿಜಯದ ಪಟಾಕಿ ಹಾರಿಸಿದೆ. ಇತ್ತೀಚೆಗೆ […]

ಸೋಶಿಯಲ್‌ ಮೀಡಿಯಾ, ಸಂಸಾರದಲ್ಲಿ ಕಾರ್ಯನಿರತರಾಗಿರುವವರು ಕರಾಳ ಸತ್ಯ ತಿಳಿದುಕೊಳ್ಳಿ ! ಕಾರಣ ಇಲ್ಲಿದೆ ನೋಡಿ

Social mediaನಿರುದ್ಯೋಗದಿಂದ ಬೇಸತ್ತ ಕೆಲ ಯುವಕರು ಸಾಮಾಜಿಕ ಜಾಲತಾಣಗಳಿಂದ ವೃತ್ತಿ ಆರಂಭಿಸಿದ್ದಾರೆ. ಇನ್ನುಳಿದವರಂತೂ ಸ್ಪಲ್ಪ ಫೇಮಸ್‌ ಆದ್ರೆ ಸಾಕು ದುಡ್ಡಿಗಾಗಿ, ಇಲ್ಲಸಲ್ಲದ ಪ್ರಾಡಕ್ಟ್‌ಗಳನ್ನು ಪ್ರಮೋಟ್‌ ಮಾಡುತ್ತಾರೆ. ಮೋಟಿವೇಶನ್‌ ಹೆಸರಿನಲ್ಲಿ ಲೈಕ್‌ಗಾಗಿ ಸಾಕಷ್ಟು ಸರ್ಕಸ್‌ ಮಾಡುತ್ತಾರೆ. ಒಂದು ಕಾಲದಲ್ಲಿ ಬೆಳೆಗ್ಗೆ ಎದ್ದ ತಕ್ಷಣ ನೇರವಾಗಿ ನಮ್ಮ ಮನೆ ಕೆಲಸಗಳನ್ನು ಮಾಡುತ್ತಿದ್ದೀವಿ. ಆದರೆ ಇದೀಗ ನೇರವಾಗಿ ಎದ್ದ ಕ್ಷಣ ನಮ್ಮ ಕೈ ಮೊಬೈಲ್‌ನ್ನು ಸರ್ಚ್‌ ಮಾಡುತ್ತಿದ್ದು, ಮಲಗಿರುವಲ್ಲಿಯೇ ೧-೨ ತಾಸು ಪೋನ್‌ ಅಲ್ಲಿ ಮುಳುಗಿ ಬಿಡುತ್ತೇವೆ. ಅಂದು ನಾವು ಹೊರಗಡೆ […]

HD Kumaraswamy : ಕಾಂಗ್ರೆಸ್‌ನಲ್ಲಿ ಮ್ಯಾನ್ ಪವರ್, ಮಸಲ್ ಪವರ್, ಮನಿ ಪವರ್ ಎಲ್ಲಾ ಇದೆ.

ಬೆಂಗಳೂರು: ಬಿಜೆಪಿ ಅವರು ಧರ್ಮಸ್ಥಳದಲ್ಲಿ ಶಾಸಕಾಂಗ ಸಭೆ ಮಾಡೋದ್ರಲ್ಲಿ ತಪ್ಪೇನು ಇಲ್ಲ. ಆದರೆ ಈಗ ಅದು ಮುಗಿದು ಹೋಗಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಎಂಎಲ್‌ಸಿ ಚುನಾವಣೆಯಲ್ಲಿ ಶಾಸಕರ ಅಡ್ಡ ಮತದಾನ ವಿಚಾರದಲ್ಲಿ ಬಿಜೆಪಿಯಿಂದ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಮುಂದಾಗಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಶಾಸಕರು ಅಡ್ಡ ಮತದಾನ ಮಾಡಿರೋದು ಮುಗಿದು ಹೋಗಿರುವ ವಿಷಯ, ಈ ಸರ್ಕಾರದಲ್ಲಿ ಯಾರಿಗೆ ಬೇಕಾದ್ರೂ ಬ್ಲ್ಯಾಕ್ ಮೇಲ್ ಮಾಡ್ತಾರೆ. ಆಮಿಷ […]

ಬಿಜೆಪಿ ವಿರುದ್ಧ ಬಿಕೆಹೆಚ್‌ ವಾಗ್ದಾಳಿ : ಸಮಾವೇಶದಿಂದ ನೀಟ್‌ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಸಮಸ್ಯೆ

BKH ಬೆಂಗಳೂರು: ನಮ್ಮ ಸಮಾವೇಶದಿಂದಾಗಿ ವಿದ್ಯಾರ್ಥಿಗಳಿಗೆ ಏನಾದರೂ ತೊಂದರೆಯಾಗಿದ್ದರೆ ನಾನು ವೈಯಕ್ತಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್‌ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸರಣಿ ತಪ್ಪು ಮಾಹಿತಿ ನೀಡುವ ಸುಳ್ಳಿನ ಫ್ಯಾಕ್ಟರಿ ಇಟ್ಟುಕೊಂಡಿದ್ದು, ತಮ್ಮದೇ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ಬೆಂಗಳೂರಿನಲ್ಲಿ ನಡೆದ ಸಂಕಲ್ಪ ಸಮಾವೇಶದ ವೇಳೆ ನಗರದಲ್ಲಿ ಅತೀ ಹೆಚ್ಚು ಟ್ರಾಫಿಕ್ ಜಾಮ್ ಆಗಿದ್ದು ನಿಜ, ಇದರಿಂದ ಸಾರ್ವಜನಿಕರಿಗೆ […]

ಸಿದ್ದರಾಮಯ್ಯ ಕೊಟ್ಟ ಆಡಳಿತ ಇಡೀ ದೇಶಕ್ಕೆ ಮಾದರಿ : ಡಿ.ಕೆ ಶಿವಕುಮಾರ್‌

DK Sivakumar ಬೆಂಗಳೂರು: ರಾಜ್ಯದಲ್ಲಿ ನಿಲ್ಲಿಸಿರುವ ವಿದ್ಯಾರ್ಥಿ ಚುನಾವಣೆಯನ್ನು ಈ ವರ್ಷದಿಂದಲೇ ಪ್ರಾರಂಭಿಸುತ್ತೇವೆ ಎಂದು ಸಿಎಂ ಡಿ.ಕೆ ಶಿವಕುಮಾರ್‌ ತಿಳಿಸಿದ್ದಾರೆ. ಈ ವೇಳೆ ತಾವು ಅಧಿಕಾರ ವಹಿಸಿಕೊಂಡ ದಿನವನ್ನು ನೆನಪಿಸಿಕೊಂಡರು. ನನಗೆ 2020ರ ಮಾ.10 ರಂದು ಸೋನಿಯಾ ಗಾಂಧಿ ಪಕ್ಷದ ಅಧಿಕಾರ ನೀಡಿದ್ದರು. ಆಗ ಇಷ್ಟೊಂದು ದೊಡ್ಡದಾಗಿ ಕಾರ್ಯಕ್ರಮ ಮಾಡೋಕೆ ಆಗಿರಲಿಲ್ಲ. ಜೂಮ್ ಕಾಲ್‌ನಲ್ಲೇ ನಾನು ಅಧಿಕಾರ ಸ್ವೀಕರಿಸಿದೆ. ನಿಮ್ಮ ವಿಶ್ವಾಸ, ಸಹಕಾರದಿಂದ ಸೇವೆ ಮಾಡಿದ್ದೇನೆ. ನಾನು ಮನುಷ್ಯ, ನನ್ನ ಕೈಯಲ್ಲಿ ಅನೇಕ ತಪ್ಪು ಆಗಿರಬಹುದು ಎಂದರು. […]