ಬೆಂಗಳೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಬಗ್ಗೆ ಮಾತಾಡೋದು ಬಿಟ್ಟು ,ಅವರಿಗೆ ಮಾಡಲು ಬೇಕಾದಷ್ಟು ಕೆಲಸ ಇದ್ದು, ಆ ಕೆಲಸಗಳ ಕಡೆ ಗಮನ ಕೊಡಲಿ ಅಂತ ಬಿಜೆಪಿ ನಾಯಕ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಅನ್ನು ಮತ್ತೆ ಟಾರ್ಗೆಟ್ ಮಾಡ್ತಿರುವ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ಮಾಡೋದಕ್ಕೆ ತುಂಬಾ ಕೆಲಸಗಳು ಇವೆ. ಆ ಕಡೆ ಗಮನಹರಿಸಲಿ. ಕರ್ನಾಟಕ ಡ್ರಗ್ಸ್ ಕ್ಯಾಪಿಟಲ್ ಆಗ್ತಿದೆ. ಇದರ ಕಡೆ ಗಮನಹರಿಸಲಿ. ದೊಡ್ಡ ಪ್ರಮಾಣದಲ್ಲಿ ಬಾಂಗ್ಲಾ ಅಕ್ರಮ ವಲಸಿಗರು ಕರ್ನಾಟಕದ ಕಡೆ ಬರುತ್ತಿರುವ ಮಾಹಿತಿ ಇದೆ. ಇದು ದೇಶದ ಭದ್ರತೆ ದೃಷ್ಟಿಯಿಂದ ಅಪಾಯಕಾರಿ. ಅದರ ಕಡೆ ಗಮನಹರಿಸಲಿ ಎಂದಿದ್ದಾರೆ.
ಭಯೋತ್ಪಾದಕರ ಸ್ಲೀಪರ್ ಸೆಲ್ ರೀತಿ ಕರ್ನಾಟಕ ಬಳಕೆ ಆಗ್ತಿದ್ದು, ಇದಕ್ಕೆ ಎನ್‌ಐಎ ಮಾಹಿತಿ ಕಲೆ ಹಾಕಿದೆ. ಉಗ್ರರ ಜೊತೆ ಸಂಬಂಧ ಇರೋರನ್ನು ಬಂಧಿಸಿದೆ. ಈ ಕಡೆ ಗಮನ ಕೊಡಬೇಕು ಅವರು ಕಾಲಾಯ ತಸ್ಮೈ ನಮಃ. ಕಾಲವೇ ಎಲ್ಲದ್ದಕ್ಕೂ ಉತ್ತರ ಕೊಡುತ್ತೆ. ಕಾಲಕ್ಕಿಂತ ದೊಡ್ಡವರು ಯಾರು ಇಲ್ಲ. ಕಾಲವೇ ಉತ್ತರ ಕೊಡುತ್ತೆ. ಅಧಿಕಾರದ ಅಹಂಕಾರದಲ್ಲಿ ಬೆಳೆದವರು ಮಣ್ಣಲ್ಲಿ ಮಣ್ಣಾಗಿ ಯಾರೂ ಉಳಿದಿಲ್ಲ. ಒಳ್ಳೆ ಕೆಲಸ ಮಾಡೋಕೆ ಅವಕಾಶ ಇದ್ದಾಗ ಒಳ್ಳೆ ಕೆಲಸ ಮಾಡೋದು ಬಿಟ್ಟು ಒಳ್ಳೆ ಕೆಲಸ ಮಾಡೋರ ಬಗ್ಗೆ ಅಪಪ್ರಚಾರ ಮಾಡುತ್ತಾ ಹೋದರೆ ಅಪಪ್ರಚಾರದಿಂದ ಪ್ರಚಾರ ಸಿಗಬಹುದು. ಆದರೆ ಅದು ಘನ ಕಾರ್ಯ ಅಲ್ಲ ಎಂದು ಆಕ್ರೋಶ ಕಿಡಿಗಾರಿದ್ದಾರೆ.
ಇನ್ನು ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಮಾಜಿ-ಹಾಲಿ ಸಿಎಂಗಳ ನಡುವೆ ಪಂಥಾಹ್ವಾನ ವಾಗಿ ಮಾತನಾಡಿ, ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಪಕ್ಷಗಳ ರಾಜಕಾರಣಕ್ಕಿಂತ ರೈತರ ಬದುಕಿನ ಪ್ರಶ್ನೆಯಿದೆ. ರೈತರ ಒಪ್ಪಿಗೆ ಇಲ್ಲದೇ ಟೌನ್‌ಶಿಪ್ ಮಾಡಲು ನಮ್ಮ ವಿರೋಧ ಇದೆ. 10% ಜನರಿಗೆ ಯೋಜನೆ ಬೇಕು ಅಂತ ನೋಟಿಫಿಕೇಶನ್ ಮಾಡೋದು ಸರಿಯಲ್ಲ. ಆ ಭೂಮಿ ಫಲವತ್ತಾದ ಭೂಮಿ. ಈಗಾಗಲೇ ಬಿಜೆಪಿ ನಾಯಕರು ಭೇಟಿ ಕೊಟ್ಟು ಬಂದಿದ್ದಾರೆ. ನಾವು ಅಧಿವೇಶನದಲ್ಲೂ ಕೂಡ ಈ ವಿಚಾರ ಕೈಗೆತ್ತಿಕೊಳ್ಳುತ್ತೇವೆ. ರೈತರ ಬದುಕಿನ ಸಮಾಧಿ ಮೇಲೆ ಟೌನ್‌ಶಿಪ್ ಮಾಡಲು ವಿರೋಧ ಇದೆ. ರೈತರ ಹೋರಾಟದ ಜತೆಗೆ ನಾವು ಕೂಡ ಭಾಗವಸುತ್ತೇವೆ ಎಂದು ತಿಳಿಸಿದ್ದಾರೆ.
ನೀಟ್ ಎಕ್ಸಾಂ ವಿಚಾರವಾಗಿ ಮಾತನಾಡಿ, ಪರೀಕ್ಷೆ ಮೊದಲೇ ನಿಗದಿ ಆಗಿತ್ತು. ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಸ್ವೀಕಾರವನ್ನ ಒಂದಿನ ಹಿಂದೆ, ಮುಂದೆ ಮಾಡಿದ್ರೆ ನೀಟ್ ಎಕ್ಸಾಂಗೆ ಬಂದ ಮಕ್ಕಳು ಎಕ್ಸಾಂನಿಂದ ವಂಚಿತರಾಗಿ ಕಣ್ಣೀರು ಹಾಕುತ್ತಿರಲಿಲ್ಲ. ಆ ಕಣ್ಣೀರಿನ ಶಾಪ ಯಾರಿಗೆ ತಟ್ಟಬೇಕು. ಧಿಕಾರದ ಅಹಂಕಾರ ಬಿಟ್ಟು ಆಲೋಚನೆ ಮಾಡಿದ್ರೆ ಆದ್ಯತೆ ಏನು ಅಂತ ಗೊತ್ತಾಗುತ್ತದೆ. ಅಧಿಕಾರದ ಅಹಂಕಾರವೇ ದೊಡ್ಡದಾದರೇ ಅಹಂಕಾರದ ಮದದಲ್ಲಿ ಮರೆಯುತ್ತಾರೆ ಇದರ ಬಗ್ಗೆ ಅವರು ಅಲೋಚನೆ ಮಾಡಲಿ. ಇದೆಲ್ಲ ಅಧಿಕಾರ ಅಹಂಕಾರದ ಪರಿಣಾಮ ಎಂದು ಹೇಳಿದ್ದಾರೆ.





