ಸಚಿವ ಸಂಪುಟ ವಿಸ್ತರಣೆಗೆ ಸುಳಿವು ನೀಡಿದ ಡಿಕೆಶಿ: ಹಾಗಾದ್ರೆ ಯಾರಿಗೆ ಅವಕಾಶ ? ಇಲ್ಲಿದೆ ನೋಡಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಎಲ್ಲರಿಗೂ ಕ್ರೇಜ್‌ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆ ಕಸರತ್ತಿನ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊಸಬರಿಗೆ ಮಣೆ ಹಾಕುವ ಕುರಿತು ಮಹತ್ವದ ಸುಳಿವು ಕೊಟ್ಟಿದ್ದಾರೆ.

ಇಂದು ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ತಮ್ಮ ಸರ್ಕಾರಿ ನಿವಾಸದತ್ತಿರ ದರ್ಗಾದ ಧರ್ಮಗುರುಗಳು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.ದರ್ಗಾದ ಧರ್ಮಗುರುಗಳು ಭೇಟಿ ನಂತರ
ಮಾಧ್ಯಮಗಳಿಗೆ ಸಿಎಂ ಡಿಕೆ ಶಿವಕುಮಾರ ಮಹತ್ತರ ಮಾಹಿತಿ ನೀಡಿದ್ದಾರೆ. ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಆಲೋಚನೆ ನಡೆದಿರುವುದನ್ನು ವ್ಯಕ್ತಪಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯ ಗೊಂದಲಗಳಿಗೆ ಪ್ರತಿಕ್ರಿಯಿಸಿದ ಅವರು, ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಸಂಪೂರ್ಣ ಜವಾಬ್ದಾರಿಯನ್ನು ಪಕ್ಷದ ಹೈಕಮಾಂಡ್ ವಹಿಸಿಕೊಂಡಿದೆ. ಈಗಾಗಲೇ ನವದೆಹಲಿಯಲ್ಲಿ ಈ ಕುರಿತು ವರಿಷ್ಠರ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡೋಣ” ಎಂದು ತಿಳಿಸಿದ್ದಾರೆ.

ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡುವ ಆಲೋಚನೆ ನಮ್ಮಲ್ಲಿ ಪ್ರಗತಿಯಲ್ಲಿದೆ. ನಾನು ಯಾರ ಪ್ರಗತಿ ಅಥವಾ ಅವಕಾಶವನ್ನು ತಡೆಯಲು ಬಯಸುವುದಿಲ್ಲ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಡಿಸಿಎಂ ಅವರ ಈ ಹೇಳಿಕೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಹೊಸ ಸಂಚಲನ ಮೂಡಿಸಿದ್ದು, ಸದ್ಯದಲ್ಲೇ ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದೆಯೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. ಮುಂದೆ ಡಿಕೆಶಿ ಹೇಳಿರುವ ಹೇಳಿಕೆ ನಿಜವಾಗುತ್ತಾ? ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ ಸಿಗುತ್ತಾ? ಎನ್ನವುದು ಪಕ್ಷದ ಹೈಕಮಾಂಡ್ ನಿರ್ಧಾರದ ಬಳಿಕ ಬೆಳಕಿಗೆ ಬರಲಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others