30 ಲಕ್ಷ ಇನ್ಶೂರೆನ್ಸ್ ಹಣಕ್ಕಾಗಿ ಸ್ವಂತ ತಮ್ಮನನ್ನೇ ಸುಪಾರಿ ಕೊಟ್ಟು ಕೊಂದ ಅಣ್ಣ

ತುಮಕೂರು: ಜೀವ ವಿಮೆಯ (LIC) ಬೃಹತ್ ಮೊತ್ತವನ್ನು ದೋಚಲು ಅಣ್ಣನೇ ಹಂತಕರೊಂದಿಗೆ ಕೈಜೋಡಿಸಿ ಸ್ವಂತ ತಮ್ಮನ ಪ್ರಾಣ ತೆಗೆದಿರುವ ಆಘಾತಕಾರಿ ಘಟನೆ ಜಿಲ್ಲೆಯ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ರಸ್ತೆ ಅಪಘಾತದಂತೆ ಕಾಣುತ್ತಿದ್ದ ಪ್ರಕರಣವನ್ನು ಆಳವಾಗಿ ತನಿಖೆ ನಡೆಸಿದ ಪೊಲೀಸರು, ಇದೊಂದು ವ್ಯವಸ್ಥಿತ ಕೊಲೆ ಎಂಬುದನ್ನು ಪತ್ತೆ ಹಚ್ಚಿ ಅಣ್ಣ ಸೇರಿದಂತೆ ನಾಲ್ವರು ಆರೋಪಿಗಳನ್ನು ಕಟಕಟೆಗೆ ತಳ್ಳಿದ್ದಾರೆ. ತಮ್ಮನ ಹೆಸರಲ್ಲಿ 15 ಲಕ್ಷದ ಪಾಲಿಸಿ; ನಾಮಿನಿ ಅಣ್ಣ! ಆಂಧ್ರ ಮೂಲದ ರಮೇಶ್ (35) […]
ಬಂದೋಬಸ್ತ್ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ: ದೇವದುರ್ಗದ ಡಿಎಆರ್ ಪೊಲೀಸ್ ಪೇದೆ ದುರ್ಮರಣ

ರಾಯಚೂರು: ಜಿಲ್ಲೆಯ ದೇವದುರ್ಗದಲ್ಲಿ ಕರ್ತವ್ಯದ ಮೇಲಿದ್ದಾಗಲೇ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಪೊಲೀಸ್ ಪೇದೆಯೊಬ್ಬರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಲಿಂಗಸುಗೂರು ತಾಲೂಕಿನ ಅಮದಿಹಾಳ ಗ್ರಾಮದ ನಿವಾಸಿಯಾದ ರೇಣುಕಾರಾಜ (38) ಮೃತಪಟ್ಟ ದುರ್ದೈವಿ. ಇವರು 2008ರ ಬ್ಯಾಚ್‌ನ ಕಾನ್ಸ್‌ಟೇಬಲ್ ಆಗಿದ್ದು, ಸದ್ಯ ದೇವದುರ್ಗ ಸಿಪಿಐ ಅವರ ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೊಹರಂ ಹಬ್ಬದ ಬಂದೋಬಸ್ತ್ ನಿಮಿತ್ತ ಇವರನ್ನು ಮದರಕಲ್ ಗ್ರಾಮದಲ್ಲಿ ಭದ್ರತಾ ಲೋಪವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಗೆ ನಿಯೋಜಿಸಲಾಗಿತ್ತು. ಎಂದಿನಂತೆ ಜೀಪ್ ಚಾಲನೆ ಮಾಡುತ್ತಿದ್ದಾಗ ರೇಣುಕಾರಾಜ ಅವರಿಗೆ ತೀವ್ರ […]
ಸಿಎಜಿ ಆಡಿಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಯ ಬೃಹತ್ ಎಡವಟ್ಟು ಬಹಿರಂಗ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ‘ಗೃಹಲಕ್ಷ್ಮಿ’ ಯೋಜನೆಯ ನಗದು ವರ್ಗಾವಣೆ ಪ್ರಕ್ರಿಯೆಯಲ್ಲಿ ಸರಣಿ ಗೊಂದಲಗಳು ಹಾಗೂ ಗಂಭೀರ ಆರ್ಥಿಕ ದೋಷಗಳು ಉಂಟಾಗಿರುವುದನ್ನು ಭಾರತೀಯ ಲೆಕ್ಕ ನಿಯಂತ್ರಕರು ಮತ್ತು ಮಹಾ ಪರಿಶೋಧಕರು (CAG) ಬಹಿರಂಗಪಡಿಸಿದ್ದಾರೆ. ಸರ್ಕಾರದ ಪ್ರಮುಖ ಆರ್ಥಿಕ ಸೌಲಭ್ಯದ ಆಡಿಟಿಂಗ್ ನಡೆಸಿದ ಸಿಎಜಿ, ವ್ಯವಸ್ಥೆಯಲ್ಲಿನ ಲೋಪಗಳನ್ನು ಪಟ್ಟಿ ಮಾಡಿ ತನಿಖೆಗೆ ಆದೇಶಿಸಿದೆ. ಅಸ್ತಿತ್ವದಲ್ಲೇ ಇರದ ಖಾತೆಗಳಿಗೆ ಹರಿದ ಕೋಟ್ಯಂತರ ರೂಪಾಯಿ! ಯೋಜನೆಯ ಡಿಬಿಟಿ (ನೇರ ನಗದು ವರ್ಗಾವಣೆ) ವ್ಯವಸ್ಥೆಯಲ್ಲಿನ ಅತ್ಯಂತ ವಿಚಿತ್ರ ಮತ್ತು ಗಂಭೀರ ತಪ್ಪು ಈ […]
ನವಿಲು ಗರಿ ಬಳಸಿ ರೀಲ್ಸ್ ಮಾಡಿದ ಎಡವಟ್ಟು: ವನ್ಯಜೀವಿ ಕಾಯ್ದೆ ಉಲ್ಲಂಘನೆ ಆರೋಪದ ಬೆನ್ನಲ್ಲೇ ಕ್ಷಮೆಯಾಚಿಸಿದ ನಿವೇದಿತಾ ಗೌಡ-ಕಿಶನ್

ಬೆಂಗಳೂರು: ರಾಷ್ಟ್ರೀಯ ಪಕ್ಷಿ ನವಿಲಿನ ಗರಿಗಳನ್ನು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ನಿವೇದಿತಾ ಗೌಡ ಮತ್ತು ಕಿಶನ್ ಬಿಳಗಲಿ, ಇದೀಗ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ. ಕಾನೂನು ಉಲ್ಲಂಘನೆಯ ಆರೋಪ ಕೇಳಿಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜೋಡಿ, ವಿವಾದಾತ್ಮಕ ರೀಲ್ಸ್ ಅನ್ನು ಡಿಲೀಟ್ ಮಾಡಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದೆ. ಕಾನೂನಿನ ಅರಿವಿರಲಿಲ್ಲ, ತನಿಖೆಗೆ ಸಿದ್ಧ: ನಿವೇದಿತಾ ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ನಿವೇದಿತಾ ಗೌಡ, ಅರಣ್ಯ ಇಲಾಖೆಯ ನಿಯಮಗಳ ಬಗ್ಗೆ ತಮಗೆ […]
ಅಬಕಾರಿ ಹೆಚ್ಚುವರಿ ಆಯುಕ್ತನ ಮನೆ ಮೇಲೆ ಇಡಿ ದಾಳಿ : ಹಾಗಾದ್ರೆ ಯಾರು ಗೊತ್ತಾ ಆ ಅಧಿಕಾರಿ? ಇಲ್ಲಿದೆ ನೋಡಿ ಮಾಹಿತಿ

ಬೆಳಗಾವಿ : ಸರ್ಕಾರಿ ಕೆಲಸ ಬೇಕು ಅಂತ ಸಾಕಷ್ಟು ಜನ ಕಾಯುತ್ತಾ ಇರುತ್ತಾರೆ ಇದಕ್ಕೆ ಕಾರಣ ಸರ್ಕಾರಿ ಕೆಲಸ ಮಾಡಿದ್ರೆ ಒಳ್ಳೆಯ ಸಂಬಳ, ಯಾವುದೇ ಕಿರಿ ಕಿರಿ ಇರುವುದಿಲ್ಲ ಜೀವನ ಪೂರ್ತಿ ನೆಮ್ಮದಿಯಾಗಿ ಇರಬಹುದು ಎನ್ನುವ ಬಯಕೆ. ಹೀಗಿರುವಾಗ ಅಧಿಕಾರಿಗಳು ಅಡ್ಡ ದಾರಿಯುತ್ತ ಸಾಗುವುದು ಯಾಕೆ? ಕಾರಣವೇ ಅತಿಯಾಸೆ ಅಲ್ಲವೇ? ಈ ವಿಚಾರಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದಾಳಿ ಮಾಡುತ್ತಲೇ ಇರುತ್ತಾರೆ. ಸದ್ಯಕ್ಕೆ ಇಡಿ ಅಧಿಕಾರಿಗಳು ಬೆಳಗಾವಿ, ಮೈಸೂರು, ಬೆಂಗಳೂರು, ಅರಿಸಿಕೇರೆ ಸೇರಿ ಆರು ಕಡೆ ದಾಳಿ […]
ನಟ ಮಮ್ಮುಟ್ಟಿ, ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಪದ್ಮಭೂಷಣ; ರೋಹಿತ್ ಶರ್ಮಾಗೆ ಪದ್ಮಶ್ರೀ ಪುರಸ್ಕಾರ

ನವದೆಹಲಿ: ದೇಶದ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಗಣ್ಯ ಸಾಧಕರಿಗೆ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಎರಡನೇ ಹಂತದ ವಿಶೇಷ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮ ಪ್ರಶಸ್ತಿಗಳನ್ನು ವಿತರಿಸಿದರು. ಕ್ರೀಡೆ, ಕಲೆ, ಸಾರ್ವಜನಿಕ ವಿದ್ಯಮಾನ ಹಾಗೂ ಸಿನಿಮಾ ರಂಗದ ದಿಗ್ಗಜರು ಇಂದು ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳನ್ನು ಪಡೆದುಕೊಂಡರು. ಕಲಾ ಲೋಕದ ದಿಗ್ಗಜರಿಗೆ ಪದ್ಮಭೂಷಣ ಗೌರವ ಮಲಯಾಳಂ ಚಿತ್ರರಂಗದ ಅದ್ವಿತೀಯ ನಟ ಮಮ್ಮುಟ್ಟಿ ಹಾಗೂ ದಶಕಗಳ ಕಾಲ ಭಾರತೀಯ ಚಿತ್ರರಂಗವನ್ನು ತಮ್ಮ ಕಂಠಸಿರಿಯಿಂದ ಆಳಿದ […]
ನಟ ಪ್ರಕಾಶ್ ರಾಜ್ ಗೆ ಕಾನೂನು ಸಂಕಷ್ಟ: ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿದ ಕೋರ್ಟ್

ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ನಿಯಮಬಾಹಿರವಾಗಿ ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿಗಳನ್ನು ಹೊಂದಿರುವ ಗಂಭೀರ ಕಾನೂನು ಉಲ್ಲಂಘನೆ ಆರೋಪ ಎದುರಿಸುತ್ತಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಬಂಧನಕ್ಕೆ ಬೆಂಗಳೂರು ನ್ಯಾಯಾಲಯ ಹಸಿರು ನಿಶಾನೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ನಟನ ವಿರುದ್ಧ ಬೆಂಗಳೂರಿನ 48ನೇ ಎಸಿಜೆಎಂ ನ್ಯಾಯಾಲಯವು ಜಾಮಿನಿಲ್ಲಾ ವಾರೆಂಟ್ (NBW) ಹೊರಡಿಸಿದೆ. ಕಾನೂನು ಹೋರಾಟದ ಹಿನ್ನೆಲೆ ಕಳೆದ 2019 ರಲ್ಲೇ ನ್ಯಾಯವಾದಿ ದಿಲೀಪ್ ಕುಮಾರ್ ಅವರು ಈ ಕುರಿತು ಬೆಂಗಳೂರಿನ ಹಲಸೂರು […]
ಬೇರೆ ಕಡೆ ಇಲ್ಲದ ಕುಮಾರಸ್ವಾಮಿ, ನಿಖಿಲ್ ಹೋರಾಟ ಬಿಡದಿಯಲ್ಲಿ ಮಾತ್ರ ಯಾಕೆ: ಶಾಸಕ ಬಾಲಕೃಷ್ಣ ಕಿಡಿ

ಬೆಂಗಳೂರು: “ಸರ್ಜಾಪುರ, ಚಿಕ್ಕಬಳ್ಳಾಪುರ, ಜಂಗಮಕೋಟೆ, ದೊಡ್ಡಬಳ್ಳಾಪುರದಲ್ಲಿ ವಿವಿಧ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಹಾಸನದಲ್ಲಿ ಕೇಂದ್ರದಿಂದ ಮಂಜೂರಾಗುವ ಮುನ್ನವೇ ಐಐಟಿ ಕಾಲೇಜಿಗಾಗಿ 1800 ಎಕರೆ ಭೂಸ್ವಾಧೀನ ಮಾಡಿದ್ದಾರೆ. ಕುಮಾರಸ್ವಾಮಿ ಹಾಗೂ ನಿಖಿಲ್ ಅವರು ಇಲ್ಲೆಲ್ಲೂ ಮಾಡದ ಹೋರಾಟವನ್ನು ಬಿಡದಿಯಲ್ಲಿ ಮಾತ್ರ ಯಾಕೆ ಮಾಡುತ್ತಿದ್ದಾರೆ” ಎಂದು ಮಾಗಡಿ ಶಾಸಕರಾದ ಬಾಲಕೃಷ್ಣ ಅವರು ಕಿಡಿ ಕಾರಿದರು. ಬೆಂಗಳೂರಿನಲ್ಲಿ ಬಿಡದಿ ಟೌನ್ ಶಿಪ್ ವಿಚಾರವಾಗಿ ಮಾಧ್ಯಮಗೋಷ್ಠಿ ನಡೆಸಿ ಬಾಲಕೃಷ್ಣ ಅವರು ಮಂಗಳವಾರ ಮಾತನಾಡಿದರು. ಮುಖ್ಯಮಂತ್ರಿಗಳು ಕುಮಾರಸ್ವಾಮಿ ಅವರೊಂದಿಗೆ ಚರ್ಚೆಗೆ ದಿನಾಂಕ […]
ಸಿನಿಮಾ ನಿರ್ದೇಶಕನಾಗಬೇಕಿದ್ದ ಯುವಕ ಆತ್ಮಹ*ತ್ಯೆಗೆ ಶರಣು

ನೆಲಮಂಗಲ: ಕನ್ನಡ ಚಿತ್ರರಂಗದಲ್ಲಿ (ಸ್ಯಾಂಡಲ್‌ವುಡ್) ಸಿನೆಮಾ ನಿರ್ದೇಶಕನಾಗಬೇಕೆಂಬ ದೊಡ್ಡ ಕನಸು ಹೊತ್ತಿದ್ದ ಯುವಕನೊಬ್ಬ ನೇಣಿಗೆ ಶರಣಾಗಿರುವ ಅತ್ಯಂತ ದುರದೃಷ್ಟಕರ ಘಟನೆ ನೆಲಮಂಗಲದ ಬಳಿ ನಡೆದಿದೆ. ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಬಿದಲೂರಿನ ನಿವಾಸಿಯಾದ 35 ವರ್ಷದ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. ಕಿರುಚಿತ್ರಗಳ ಮೂಲಕ ಕಲೆ ಪ್ರದರ್ಶಿಸಿದ್ದ ಯುವಕ ಮಂಜುನಾಥ್ ಅವರಿಗೆ ಸಿನಿಮಾ ರಂಗದಲ್ಲಿ ದೊಡ್ಡ ನಿರ್ದೇಶಕನಾಗಬೇಕೆಂಬ ಅತೀವ ಆಸೆಯಿತ್ತು. ಇದಕ್ಕಾಗಿ ಅವರು ಈಗಾಗಲೇ ಸಾಕಷ್ಟು ಕಿರುಚಿತ್ರಗಳನ್ನು (Short Movies) ನಿರ್ದೇಶನ ಮಾಡಿದ್ದರು. ಅಷ್ಟೇ ಅಲ್ಲದೆ, ತಾವೇ ಸ್ವತಃ […]
ಶವರ್ಮಾದಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಪತ್ತೆ: ಆಹಾರ ಇಲಾಖೆಯ ವರದಿ!

ಬೆಂಗಳೂರು: ಇಂದಿನ ಯುವ ಪೀಳಿಗೆಯ ನಾಲಿಗೆಗೆ ಲಕಲಕನೆ ರುಚಿ ನೀಡುವ ಅತ್ಯಂತ ಜನಪ್ರಿಯ ಫಾಸ್ಟ್‌ಫುಡ್‌ಗಳಲ್ಲಿ ‘ಶವರ್ಮಾ’ ಮುಂಚೂಣಿಯಲ್ಲಿದೆ. ಆದರೆ, ಇದೀಗ ಇದೇ ಶವರ್ಮಾ ಜನರ ಜೀವಕ್ಕೆ ಕಂಟಕವಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ರಾಜ್ಯದ ವಿವಿಧ ಹೋಟೆಲ್‌ಗಳಿಂದ ಆಹಾರ ಸುರಕ್ಷತಾ ಇಲಾಖೆಯು ಜಪ್ತಿ ಮಾಡಿದ್ದ ಶವರ್ಮಾ ಮಾದರಿಗಳ ಪ್ರಯೋಗಾಲಯ ವರದಿಯು ಸಾರ್ವಜನಿಕರನ್ನು ಆತಂಕದ ಸುಳಿಗೆ ದೂಡಿದೆ. ಪರೀಕ್ಷೆಗೆ ಒಳಪಡಿಸಲಾಗಿದ್ದ 32 ಮಾದರಿಗಳ ಪೈಕಿ ಕೆಲವು ಸ್ಯಾಂಪಲ್‌ಗಳಲ್ಲಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಲ್ಲ ಮಾರಕ ‘ಕಾರ್ಸಿನೋಜೆನಿಕ್’ ಎಂಬ ರಾಸಾಯನಿಕ ಅಂಶಗಳು ಪತ್ತೆಯಾಗಿರುವುದು […]