ಎತ್ತರದ ಹಿನ್ನೀರಿನಿಂದ ಬಾಧಿತರಾಗುವ ಎಲ್ಲ ಗ್ರಾಮಸ್ಥರ ಹಿತ ಕಾಪಾಡಲು ಬದ್ಧ: ಎಂ.ಬಿ ಪಾಟೀಲ್

M.B. Patil ವಿಜಯಪುರ: 2023ರಲ್ಲಿ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಮೇಲೆ ನಾನು ಅಂದಿನ ಸಿಎಂ ಸಿದ್ಧರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಒತ್ತಡ ತಂದು ಹೊಸ ನಿಗದಿತ ದರದಂತೆ ಒಣಬೇಸಾಯ ಜಮೀನಿಗೆ 30 ಲಕ್ಷ ರೂ. ಮತ್ತು ನೀರಾವರಿ ಭೂಮಿಗೆ 40 ಲಕ್ಷ ರೂ. ಪರಿಹಾರ ನೀಡಲು ಕ್ರಮ ಕೈಗೊಂಡಿದ್ದೆ ಎಂದು ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಬಬಲೇಶ್ವರ ತಾಲೂಕಿನ ಬಾಧಿತ […]
ರಾಜ್ಯದಲ್ಲಿ ಆಶ್ರಯ ಯೋಜನೆಯಡಿ ಮನೆ ಹಂಚಿಕೆಗೆ ಹರಾಜು ಪ್ರಕ್ರಿಯೆ ರದ್ದು, ಲಾಟರಿ ಸಿಸ್ಟಂ ಜಾರಿಗೆ ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

ಬೆಂಗಳೂರು: “ಸ್ವಂತದೊಂದು ಸೂರಿನ ಕನಸು ಹೊತ್ತು ವರ್ಷಗಳಿಂದ ಕಾಯುತ್ತಿರುವ ಬಡವರು ಹಾಗೂ ಮಧ್ಯಮ ವರ್ಗದವರ ತಾಳ್ಮೆಯನ್ನು ಇನ್ನು ಹೆಚ್ಚು ಪರೀಕ್ಷಿಸಬೇಡಿ. ಈಗಾಗಲೇ ಮುಂಗಡ ಹಣ ಪಾವತಿಸಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರಿಗೂ ಆದಷ್ಟು ಬೇಗ ಮನೆಗಳನ್ನು ಹಂಚಿಕೆ ಮಾಡಿ,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆ. ವಿಧಾನಸೌಧದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಸತಿ ಇಲಾಖೆಯ ಸಮಗ್ರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಗ್ರಾಮೀಣ ಭಾಗದ ವಸತಿ ಯೋಜನೆಗಳು ಹಾಗೂ ನಿವೇಶನ […]
ಮಂಡ್ಯದ ಮುತ್ತತ್ತಿಯಲ್ಲಿ ಸೆಲ್ಫಿ ವ್ಯಾಮೋಹಕ್ಕೆ ಒಂದೇ ಕುಟುಂಬದ ಐವರು ನೀರುಪಾಲು

ಮಂಡ್ಯ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ಇಂದು ಅತ್ಯಂತ ದುರದೃಷ್ಟಕರ ಘಟನೆಯೊಂದು ಜರುಗಿದೆ. ನದಿಯ ಪ್ರವಾಹದ ಮುಂದೆ ನಿಂತು ಸುಂದರ ಚಿತ್ರಗಳನ್ನು ಸೆರೆಹಿಡಿಯಲು ಹೋದ ಒಂದೇ ರಕ್ತಸಂಬಂಧದ ಐವರು ಸದಸ್ಯರು ನೀರಿನ ಭೀಕರ ಸೆಳೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಮರಣ ಹೊಂದಿದವರನ್ನು ಬೆಂಗಳೂರು ದಕ್ಷಿಣ ವಿಭಾಗದ ಚನ್ನಪಟ್ಟಣ ನಿವಾಸಿಗಳಾದ ವಿಜಯಮ್ಮ (50), ಚೈತ್ರ (20), ಶ್ವೇತಾ (38), ಪ್ರಿಯಾಂಕಾ (28) ಹಾಗೂ ಮಹೇಶ್ ಎಂದು ಗುರುತಿಸಲಾಗಿದೆ. ಕ್ಷಣಾರ್ಧದಲ್ಲಿ ಸಂಭವಿಸಿದ […]
ಪಾಸ್‌ಪೋರ್ಟ್ ಕೇವಲ ಪ್ರಯಾಣದ ದಾಖಲೆ, ಪೌರತ್ವದ ಪುರಾವೆಯಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಭಾರತೀಯ ಪಾಸ್‌ಪೋರ್ಟ್ ಹೊಂದುವುದು ಕೇವಲ ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ಸರ್ಕಾರ ನೀಡುವ ಗುರುತಿನ ಚೀಟಿಯಾಗಿದೆಯೇ ಹೊರತು, ಅದು ಒಬ್ಬ ವ್ಯಕ್ತಿಯ ಅಧಿಕೃತ ಪೌರತ್ವವನ್ನು ಸಾಬೀತುಪಡಿಸುವ ಅಂತಿಮ ದಾಖಲೆಯಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವಾಲಯವು ಅತ್ಯಂತ ಪ್ರಮುಖ ಆಡಳಿತಾತ್ಮಕ ಸ್ಪಷ್ಟನೆ ನೀಡಿದೆ. ಸಾರ್ವಜನಿಕ ವಲಯದಲ್ಲಿ ದೀರ್ಘಕಾಲದಿಂದ ಇದ್ದ ಸಾಮಾನ್ಯ ನಂಬಿಕೆಯೊಂದನ್ನು ಈ ಹೊಸ ಹೇಳಿಕೆಯು ಸಂಪೂರ್ಣವಾಗಿ ಬದಲಾಯಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಕಾನೂನು ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಅತ್ಯಂತ ಮಹತ್ವದ್ದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ವಿದೇಶ ಪ್ರವಾಸಕ್ಕೆ ಮಾತ್ರ […]
ವಿದ್ಯಾರ್ಥಿ ಬಸ್ ಪಾಸ್ ಹಣ ಮರುಪಾವತಿ ಪ್ರಕ್ರಿಯೆ ಆರಂಭ: ಆಧಾರ್ ಲಿಂಕ್, ಇ-ಕೆವೈಸಿ ಕಡ್ಡಾಯ!

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಸರ್ಕಾರವು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಸ್ತುತ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈ ಸೌಲಭ್ಯ ಅನ್ವಯವಾಗಲಿದೆ. ಇದರೊಂದಿಗೆ, ಈಗಾಗಲೇ ಹಣ ನೀಡಿ ಪಾಸ್ ಪಡೆದುಕೊಂಡಿರುವ ವಿದ್ಯಾರ್ಥಿಗಳಿಗೆ ಅವರು ಪಾವತಿಸಿದ್ದ ಪೂರ್ಣ ಮೊತ್ತವನ್ನು ಸರ್ಕಾರವೇ ಭರಿಸಿ, ಅದನ್ನು ಮರುಪಾವತಿ […]
ಗ್ರಾಮೀಣ ಕುಟುಂಬಗಳಿಗೆ ಬೇಸಾಯದ ಸಮಯದಲ್ಲೂ ಕೃಷಿ ಉದ್ಯೋಗ ಲಭಿಸುವುದಿಲ್ಲ : ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಹಳ್ಳಿಯಲ್ಲಿ ಬರುವ ಕುಟುಂಬಗಳಿಗೆ ಉದ್ಯೋಗದ ಖಾತ್ರಿ ನೀಡಿದ್ದ ನರೇಗಾ ನೂತನ ಸ್ವರೂಪ ವಿಕ್ಷಿತ ಭಾರತ್ ಜಿ ರಾಮ್ ಜಿಯಿಂದರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾದರೂ ಗ್ರಾಮೀಣ ಜನರ, ಮಹಿಳೆಯರ, ವಂಚಿತರ, ದುರ್ಬಲರ ಹಿತದೃಷ್ಟಿಯಿಂದ ಜುಲೈ 1ರಿಂದಲೇ ಜಾರಿಗೆ ತರಲಾಗುವುದು ಎಂದು ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳನ್ನು ಬಿಟ್ಟು ಕಾಯಿದೆ ರೂಪಿಸಿದ ಬಗ್ಗೆಯೂ ಕರ್ನಾಟಕ ರಾಜ್ಯ ಸರ್ಕಾರದ ವಿರೋಧವಿದೆ. ಜೊತೆಗೆ ಕೇಂದ್ರ ಸರ್ಕಾರ […]
ವಿಶ್ರಾಂತಿಧಾಮವಾಗಬೇಕಿದ್ದ ಗುಡ್ಡ ದುಶ್ಚಟಗಳ ತಾಣ – ಕೆಎಸ್ ಜಯಶಂಕರ್ ಜೀರ್ಣೋದ್ಧಾರಕ್ಕೆ ಒತ್ತಾಯ

ಶ್ರೀರಂಗಪಟ್ಟಣ: ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದರೆ ಪಾಂಡವಪುರದ ಹೆಮ್ಮೆ ಪಾಂಡವಪುರ ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಮದ ಬಳಿಯಿರುವ ಐತಿಹಾಸಿಕ ಗುಡ್ಡವು ಸೂಕ್ತ ನಿರ್ವಹಣೆ ಇಲ್ಲದೆ ಮದ್ಯಪಾನ, ಜೂಜು ತಾಣವಾಗಿ ಬದಲಾಗುತ್ತಿದೆ ಎಂದು ಪ್ರಾಧ್ಯಾಪಕ ಧನಂಜಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕು ದಿಕ್ಕಿಗೂ ರಮ್ಯ ತಾಣವಾಗಿರುವ ಈ ಗುಡ್ಡದ ಮೇಲೆ ನಿಂತರೆ ಮೇಲುಕೋಟೆ ಬೆಟ್ಟ, ಕುಂತಿಬೆಟ್ಟ, ಕರಿಘಟ್ಟ, ಚಾಮುಂಡಿ ಬೆಟ್ಟ, ಪಾಂಡವಪುರ ಸಕ್ಕರೆ ಕಾರ್ಖಾನೆ ಎಲ್ಲವೂ ಕಣ್ಣಿಗೆ ಹಬ್ಬ ಉಣಿಸುತ್ತವೆ. ಗುಡ್ಡದ ಮೇಲೆ ಪ್ರಾಚೀನ ಬ್ರಹ್ಮಲಿಂಗೇಶ್ವರ ದೇವಸ್ಥಾನವಿದ್ದು, ಪಕ್ಕದಲ್ಲೇ ಅವಧೂತ ಮಠವೂ […]
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪಂಕ್ಚರ್ ಮತ್ತು ವಾಹನ ರಿಪೇರಿ ಕೇಂದ್ರಗಳ ಸ್ಥಾಪನೆಗೆ NHAI ನಿರ್ಧಾರ

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಸಂಚರಿಸುವ ವಾಹನ ಸವಾರರು ಎದುರಿಸುತ್ತಿದ್ದ ಅತಿ ದೊಡ್ಡ ತಲೆನೋವಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ದೀರ್ಘ ಪ್ರಯಾಣದ ವೇಳೆ ವಾಹನಗಳು ಕೆಟ್ಟು ನಿಂತರೆ ಅಥವಾ ಟೈರ್ ಪಂಕ್ಚರ್ ಆದಲ್ಲಿ ತಕ್ಷಣಕ್ಕೆ ಮೆಕ್ಯಾನಿಕ್ ನೆರವು ಸಿಗದೆ ಸವಾರರು ಅನುಭವಿಸುತ್ತಿದ್ದ ಸಂಕಷ್ಟಗಳನ್ನು ನೀಗಿಸಲು ಹೆದ್ದಾರಿಯುದ್ದಕ್ಕೂ ಅತ್ಯಾಧುನಿಕ ದುರಸ್ತಿ ಕೇಂದ್ರಗಳನ್ನು ಆರಂಭಿಸಲು ಪ್ರಾಧಿಕಾರ ನಿರ್ಧರಿಸಿದೆ. ಪ್ರಯಾಣಿಕರಿಂದ ಸರಣಿ ದೂರುಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಎನ್‌ಎಚ್‌ಎಐ, ತುರ್ತು ರಸ್ತೆಬದಿಯ […]
ಜೂ.29ರಂದು ಬೆಂಗಳೂರಿನ ಜಯನಗರದಲ್ಲಿ ಕರುಳಿನ ಆರೋಗ್ಯ ಕುರಿತು ವಿಶೇಷ ಸಂವಾದ ಆಯೋಜನೆ

ಬೆಂಗಳೂರು: ನಮ್ಮ ದೇಹದ ಅತಿಮುಖ್ಯ ಭಾಗವಾಗಿರುವ ‘ಕರುಳಿನ ಆರೋಗ್ಯ’ದ (Gut Health) ಬಗ್ಗೆ ಕಾಳಜಿ ಮತ್ತು ಆಸಕ್ತಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, ಜನರಿಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ‘ಹ್ಯಾಪಿಯೆಸ್ಟ್ ಹೆಲ್ತ್’ ಸಂಸ್ಥೆ ಮುಂದಾಗಿದೆ. “ವಿಶ್ವ ಮೈಕ್ರೋಬಯೋಮ್ ದಿನ”ದ ಪ್ರಯುಕ್ತ ಜೂನ್ 29, 2026ರಂದು ಬೆಂಗಳೂರಿನ ಜಯನಗರದಲ್ಲಿರುವ ‘ಹ್ಯಾಪಿಯೆಸ್ಟ್ ಆಯುರ್ವೇದ ಕ್ಲಿನಿಕ್’ನಲ್ಲಿ ‘ದಿ ಆಯುರ್ವೇದ ಆ್ಯಂಡ್ ಗಟ್ ಡೈಲಾಗ್’ ಎಂಬ ವಿಶೇಷ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರುಳಿನ ಆರೋಗ್ಯ ಮತ್ತು ಅದರಲ್ಲಿರುವ ಸೂಕ್ಷ್ಮಾಣುಜೀವಿಗಳ (ಮೈಕ್ರೋಬಯೋಮ್) ಪ್ರಾಮುಖ್ಯತೆಯ […]
ಕೆಂಪು ಮುಳ್ಳಿನ ರಸಭರಿತ ಹಣ್ಣು ‘ರಾಂಬುಟನ್’: ಇದರಲ್ಲಿದೆ ದಿನಿತ್ಯದ ಆರೋಗ್ಯದ ರಹಸ್ಯ!

ನೋಡಲು ಲೈಚಿ ಹಣ್ಣಿನ ದೊಡ್ಡ ಆವೃತ್ತಿಯಂತೆ ಕಾಣುವ, ಮೃದುವಾದ ಮುಳ್ಳುಗಳಂತಹ ಜೂಟು ಹೊಂದಿರುವ ‘ರಾಂಬುಟನ್’ ಇತ್ತೀಚಿನ ದಿನಗಳಲ್ಲಿ ನಮ್ಮ ಮಾರುಕಟ್ಟೆಗಳಲ್ಲೂ ಸಾಕಷ್ಟು ಜನಪ್ರಿಯತೆ ಪಡೆಯುತ್ತಿದೆ. ಕೇವಲ ವಿಲಕ್ಷಣ ರೂಪದಿಂದಷ್ಟೇ ಅಲ್ಲದೆ, ತನ್ನ ಅಪಾರ ಪೌಷ್ಟಿಕಾಂಶದ ಮೌಲ್ಯಗಳಿಂದಲೂ ಈ ಹಣ್ಣು ಗಮನ ಸೆಳೆದಿದೆ. ನಿತ್ಯದ ಆರೋಗ್ಯವನ್ನು ಸುಧಾರಿಸಲು ಈ ಹಣ್ಣು ಹೇಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಎಂಬ ವಿವರ ಇಲ್ಲಿದೆ: 1. ಸೋಂಕುಗಳ ವಿರುದ್ಧ ನೈಸರ್ಗಿಕ ಕವಚ ರಾಂಬುಟನ್ ಹಣ್ಣು ವಿಟಮಿನ್ ‘ಸಿ’ ನ ಪ್ರಬಲ ಮೂಲವಾಗಿದೆ. ಇದು […]