ಶೀಘ್ರವೇ 72,000 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಡಿಸಿಎಂ ಡಾ.ಜಿ ಪರಮೇಶ್ವರ್

ಬೆಂಗಳೂರು: 72,000 ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಅವರು, ನಾವು ಪ್ರಣಾಳಿಕೆಯಲ್ಲಿ ನಮ್ಮ ಸರ್ಕಾರ ಬರುವಾಗ 2.5 ಲಕ್ಷ ಹುದ್ದೆಗಳು ಖಾಲಿಯಿದ್ದಾವೆ, ಹಂತ ಹಂತವಾಗಿ ನಾವು ಅದನ್ನು ತುಂಬುತ್ತೇವೆ ಎಂದು ಹೇಳಿದ್ದೆವು. ಅನೇಕ ಕಾರಣಗಳಿಂದ ಅದು ವಿಳಂಬವಾಯಿತು. ಒಳಮೀಸಲಾತಿ ವಿಚಾರ ಬಗೆಹರಿಯದೆ ಇದ್ದದ್ದು ಸಮಸ್ಯೆಯಾಗಿ ಪರಿಣಮಿಸಿತ್ತು. ಹೀಗಾಗಿ ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರ ಸಮಿತಿಯ ವರದಿ ಆಧಾರದ ಮೇಲೆ ಕೂಲಂಕಷವಾಗಿ ಪರಿಶೀಲನೆ ಮಾಡಿ ಒಳಮೀಸಲಾತಿ ಸಮಸ್ಯೆಯನ್ನು ಬಗೆಹರಿಸಲಾಯಿತು. ಬಳಿಕ ಬಜೆಟ್‌ನಲ್ಲಿಯೇ […]
ಹೋಟೆಲ್, ಕೈಗಾರಿಕೆಗಳಿಗೆ ಭರ್ಜರಿ ಗುಡ್ ನ್ಯೂಸ್: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಮೇಲಿನ ನಿರ್ಬಂಧ ತೆರವು

ನವದೆಹಲಿ: ದೇಶದ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಕೇಂದ್ರ ಸರ್ಕಾರವು ಭಾರಿ ಸಮಾಧಾನದ ಸುದ್ದಿಯೊಂದನ್ನು ನೀಡಿದೆ. ಪಶ್ಚಿಮ ಏಷ್ಯಾ ಸಂಘರ್ಷದ (West Asia Crisis) ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆಯ ಪ್ಯಾಕ್ಡ್ ಎಲ್‌ಪಿಜಿ (Non-domestic packed LPG) ಸಿಲಿಂಡರ್‌ಗಳ ಪೂರೈಕೆಯ ಮೇಲೆ ಹೇರಲಾಗಿದ್ದ ಎಲ್ಲಾ ವಲಯವಾರು ನಿಯಂತ್ರಣಗಳನ್ನು ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಹಿಂಪಡೆದಿದೆ. ಪ್ರಸ್ತುತ ದೇಶೀಯ ಉತ್ಪಾದನೆ ಸುಧಾರಿಸಿರುವುದು ಹಾಗೂ ಆಮದು ಮಾಡಿಕೊಳ್ಳಲಾಗುವ ಎಲ್‌ಪಿಜಿ ಲಭ್ಯತೆ ಹೆಚ್ಚಿರುವುದರಿಂದ ಪೂರೈಕೆಯನ್ನು ಬಿಕ್ಕಟ್ಟಿಗೂ ಮುಂಚಿನ ಸಹಜ ಮಟ್ಟಕ್ಕೆ ತರಲಾಗಿದೆ. ಯುಎಸ್-ಇಸ್ರೇಲ್ ಮತ್ತು […]
ಬೆಂಗಳೂರಲ್ಲಿ ಮತ್ತೆ ಕೆಟ್ಟು ನಿಂತ ನಮ್ಮ ಮೆಟ್ರೋ ರೈಲು, ಪ್ರಯಾಣಿಕರು ಪರದಾಟ

ಬೆಂಗಳೂರು: ಸಿಲಿಕಾನ್ ಸಿಟಿಯ ಹೆಮ್ಮೆಯ ಸಾರಿಗೆಯಾದ ನಮ್ಮ ಮೆಟ್ರೋದ ವಿಶ್ವಾಸಾರ್ಹತೆಗೆ ಪದೇ ಪದೇ ತಾಂತ್ರಿಕ ದೋಷಗಳು ತಣ್ಣೀರೆರಚುತ್ತಿವೆ. ಇಂದು ನಗರದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ರೈಲೊಂದು ಅರ್ಧದಲ್ಲೇ ಸ್ಥಗಿತಗೊಂಡಿದ್ದು, ಕಚೇರಿ ಹಾಗೂ ಮನೆಗಳಿಗೆ ತೆರಳಬೇಕಾಗಿದ್ದ ನೂರಾರು ಪ್ರಯಾಣಿಕರು ನಿಲ್ದಾಣಗಳಲ್ಲೇ ತಂಗುವಂತಾಗಿದೆ. ರೈಲು ಚಲಿಸದಂತೆ ತಡೆದ ಆಟೋಮ್ಯಾಟಿಕ್ ಡೋರ್ ನಿಲ್ದಾಣಕ್ಕೆ ಬಂದು ತಲುಪಿದ ಮೆಟ್ರೋ ರೈಲಿನ ಸ್ವಯಂಚಾಲಿತ ಬಾಗಿಲುಗಳು ತಾಂತ್ರಿಕ ಬಿಕ್ಕಟ್ಟಿನಿಂದಾಗಿ ಸಂಪೂರ್ಣವಾಗಿ ಮುಚ್ಚಿಕೊಳ್ಳಲು (Lock) ವಿಫಲವಾಗಿವೆ. ಸುರಕ್ಷತೆಯ ದೃಷ್ಟಿಯಿಂದ ಬಾಗಿಲುಗಳು ಪೂರ್ಣ ಪ್ರಮಾಣದಲ್ಲಿ […]
ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಗೆಳೆಯ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಬೆಂಗಳೂರು: ನಟಿ ಕೃಷಿ ತಾಪಂಡ ಅವರ ಆರ್‌ಆರ್ ನಗರದ ಮನೆಯಲ್ಲಿ ಅವರ ಉದ್ಯಮಿ ಗೆಳೆಯ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿಯ ಗೆಳೆಯ ಹಾಗೂ ಉದ್ಯಮಿ ವೈಶಾಕ್ ಇದೀಗ ಸಾವನ್ನಪ್ಪಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಆರ್‌ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಗೆಳೆಯ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ವಿಚಾರವನ್ನು ನಟಿ ಕೃಷಿ ತಾಪಂಡ ಪೊಲೀಸರಿಗೆ ತಿಳಿಸಿದ್ದರು ಎಂಬ ವಿಚಾರ […]
ರಾಜ್ಯದಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಗೆ ಸಚಿವರಿಗೆ ಹೊಣೆಗಾರಿಕೆ ವಹಿಸಿ ಸರ್ಕಾರದ ಆದೇಶ

ಬೆಂಗಳೂರು: ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಲು ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಪ್ರಮುಖ ಸಚಿವರಿಗೆ ಜಿಲ್ಲಾವಾರು ಉಸ್ತುವಾರಿ ಹೊಣೆಗಾರಿಕೆಯನ್ನು ಹಂಚಿಕೆ ಮಾಡಿ ಹೊಸ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ. ರಾಜ್ಯಪಾಲರ ಆದೇಶದ ಮೇರೆಗೆ ಹೊರಬಿದ್ದಿರುವ ಈ ನೂತನ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ವಿಕೋಪ ನಿರ್ವಹಣೆಯನ್ನು ಚುರುಕುಗೊಳಿಸುವ ಉದ್ದೇಶ ಹೊಂದಿದೆ. ವಿಕೋಪ ನಿರ್ವಹಣೆಗೆ ಸಚಿವರಿಗೆ ವಹಿಸಲಾದ ಹೊಣೆ ಸರ್ಕಾರದ […]
ಹೊಸ ಪುಸ್ತಕ ಬಿಡುಗಡೆ ಮಾಡಿರುವುದು ಕನ್ನಡದ ಅಸ್ಮಿತೆಗೆ ಅಪಚಾರ: ಮಧು ಬಂಗಾರಪ್ಪ

ಬೆಂಗಳೂರು: 6ನೇ ತರಗತಿ ಸಲುವಾಗಿ NCERT (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ) ಬಿಡುಗಡೆ ಮಾಡಿರುವ ಕನ್ನಡ ಪಠ್ಯಪುಸ್ತಕಕ್ಕೆ ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯದೊಂದಿಗೆ ಯಾವುದೇ ಚರ್ಚೆ ನಡೆಸದೇ ಪುಸ್ತಕ ಬಿಡುಗಡೆ ಮಾಡಲಾಗಿದ್ದು, ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು ಹಾಗೂ ಹಳೆ ಮೈಸೂರು ಭಾಗದ ಜಾನಪದ, ಸಾಹಿತ್ಯ ಮತ್ತು ಜೀವನ ಪದ್ಧತಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ. ರಾಜ್ಯದ ಡಿಎಸ್‌ಇಆರ್‌ಟಿ ಈಗಾಗಲೇ ‘ಸವಿ ಕನ್ನಡ’, ‘ಸಿರಿ ಕನ್ನಡ’ ಹಾಗೂ […]
ಫುಟ್ ಪಾತ್ ಒತ್ತುವರಿ ತೆರವಿಗೆ ಡೆಡ್ ಲೈನ್ ಕೊಟ್ರು ಕೃಷ್ಣ ಭೈರೇಗೌಡ

Krishna Bhairegowdaಬೆಂಗಳೂರು: ನಗರದಲ್ಲಿ ಫುಟ್ ಪಾತ್ ಒತ್ತುವರಿ ತೆರವಿಗೆ ಜಿಬಿಎ ಹೊಸ ಹೆಜ್ಜೆ ಇಟ್ಟಿದ್ದು, ನಗರದ 2000 ಕಿಲೋ ಮೀಟರ್ ರಸ್ತೆಯನ್ನು ಆದ್ಯತೆ ಮೇರೆಗೆ ತೆಗೆದುಕೊಂಡು ಸುರಕ್ಷಿತ ಪಾದಾಚಾರಿ ಅಭಿಯಾನ ನಡೆಸಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಸೂಚಿಸಿದ್ದಾರೆ. ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಯಾರೆಲ್ಲ ಒತ್ತುವರಿ ಮಾಡಿಕೊಂಡಿದ್ದಾರೋ ಅವರು ಫುಟ್ ಪಾತ್ ತೆರವುಗೊಳಿಸಲು ಜುಲೈ 1 ರವರೆಗೆ ಗಡುವು ನೀಡಲಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಸಚಿವ ಕೃಷ್ಣ ಭೈರೇಗೌಡ ಘೋಷಿಸಿದ ಹೊಸ ನಿಯಮ […]
ವೃತ್ತಿಪರ ಫುಟ್‌ಬಾಲ್‌ಗೆ ಮೆಕ್ಸಿಕೋದ ದಿಗ್ಗಜ ಗೋಲ್‌ಕೀಪರ್ ಗಿಲ್ಲೆರ್ಮೊ ಒಚೋವಾ ನಿವೃತ್ತಿ ಘೋಷಣೆ!

ಫಿಫಾ ವಿಶ್ವಕಪ್ 2026 ರ ಅಂಗಳದಲ್ಲಿ ಮೆಕ್ಸಿಕೋ ತಂಡ ಭರ್ಜರಿ ಜಯ ದಾಖಲಿಸುತ್ತಿದ್ದಂತೆಯೇ, ಆ ದೇಶದ ದಿಗ್ಗಜ ಗೋಲ್‌ಕೀಪರ್ ಗಿಲ್ಲೆರ್ಮೊ ಒಚೋವಾ (Guillermo Ochoa) ತಮ್ಮ ವೃತ್ತಿಪರ ಫುಟ್‌ಬಾಲ್ ಜೀವನಕ್ಕೆ ವಿದಾಯ ಹೇಳಿದ್ದಾರೆ. ಬುಧವಾರ ನಡೆದ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಜೆಕಿಯಾ ವಿರುದ್ಧ ಮೆಕ್ಸಿಕೋ 3-0 ಅಂತರದ ಜಯಭೇರಿ ಬಾರಿಸಿತು. ಈ ಪಂದ್ಯದ ಕೊನೆಯ ಕ್ಷಣಗಳಲ್ಲಿ ಮೈದಾನಕ್ಕಿಳಿದ ಒಚೋವಾ, ಆಟ ಮುಗಿಯುತ್ತಿದ್ದಂತೆಯೇ ನಿವೃತ್ತಿ ಘೋಷಿಸಿದರು. ಎಸ್ಟಾಡಿಯೋ ಅಜ್ಟೆಕಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ 77ನೇ ನಿಮಿಷದಲ್ಲಿ […]
ವೆನೆಜುವೆಲಾದಲ್ಲಿ ಭೀಕರ ಅವಳಿ ಭೂಕಂಪನ: 32 ಮಂದಿ ಸಾವು, 700ಕ್ಕೂ ಹೆಚ್ಚು ಜನರಿಗೆ ಗಾಯ, ತುರ್ತು ಪರಿಸ್ಥಿತಿ ಘೋಷಣೆ

ಕಾರಕಾಸ್: ವೆನೆಜುವೆಲಾದ ಕರಾವಳಿ ತೀರದಲ್ಲಿ ಬುಧವಾರ ಸಂಜೆ ಭೀಕರ ಅವಳಿ (Back-to-back) ಭೂಕಂಪಗಳು ಸಂಭವಿಸಿದ್ದು, ಭಾರಿ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಭೂಕಂಪನದ ಭೀಕರತೆಗೆ ರಾಜಧಾನಿ ಕಾರಕಾಸ್ ಸೇರಿದಂತೆ ಹಲವು ನಗರಗಳಲ್ಲಿ ಕಟ್ಟಡಗಳು ಧರೆಗುರುಳಿದ್ದು, ಗಾಬರಿಗೊಂಡ ನಿವಾಸಿಗಳು ಪ್ರಾಣಭಯದಿಂದ ಬೀದಿಗಿಳಿದು ಓಡಿದ್ದಾರೆ. ಕೇವಲ ಒಂದು ನಿಮಿಷದ ಅಂತರದಲ್ಲಿ ನಡುಗಿದ ಭೂಮಿ ರಿಕ್ಟರ್ ಮಾಪಕದಲ್ಲಿ ಭೀಕರ ತೀವ್ರತೆಯ 7.2 ಮತ್ತು 7.5 ರಷ್ಟು ಪ್ರಬಲ ಭೂಕಂಪನಗಳು ಕರಾವಳಿ ತೀರದಲ್ಲಿ ದಾಖಲಾಗಿವೆ. ಅತ್ಯಂತ ಕಡಿಮೆ ಅವಧಿಯ ಅಂತರದಲ್ಲಿ ಬೆನ್ನುಬೆನ್ನಿಗೆ ಸಂಭವಿಸಿದ […]
ದೇವರ ಹೆಸರಿನಲ್ಲಿ ದುಡ್ಡು ಮಾಡುವುದು ಯಾಕೆ? ಕಾಸಿಲ್ಲದವರಿಗೆ ಭಗವಂತನ ದರ್ಶನವೇ ಇಲ್ವಾ? ಈ ಸ್ಟೋರಿ ಒಂದೊಮ್ಮೆ ಓದಿ…

ಹಣದ ಮುಂದೆ ಎಲ್ಲವೂ ಶೂನ್ಯವಾಗಿದ್ದು, ಕಾಸಿದ್ದರೆ ಕೈಲಾಸ ಎನ್ನುವ ಗಾದೆಗೆ ನಮ್ಮ ಜೀವನಕ್ಕೆ ಮುಡುಪಾಗಿ ಇಟ್ಟಿದ್ದೇವೆ. ದುಡ್ಡಿನ ಮುಂದೆ ನಾವೆಲ್ಲರೂ ದಡ್ಡರಾಗುತ್ತಿದ್ದು, ಕಾಸಿಗಾಗಿ ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದೇವೆ. ಮನುಷ್ಯ -ಮನುಷ್ಯನಿಗೆ ಮೋಸ ಮಾಡುತ್ತಾನೆ ಎಂದರೆ ಒಂದು ಕಡೆ ಒಪ್ಪಿಕೊಳ್ಳುವ ವಿಚಾರ, ಆದರೆ ಪ್ರಸ್ತುತ ನಾವು ಯಾವ ಸ್ಥಿತಿಗೆ ಬಂದು ತಲುಪಿದ್ದೇವೆ ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಹಣಕ್ಕಾಗಿ ದೇವರನ್ನು ಸಹ ನಾವು ಇಂದು ಬಿಡುತ್ತಿಲ್ಲ. ಧೈವದ ನಾಮದಲ್ಲಿ ಬೇರೆಯವರಿಗೆ ನಾಮ ಹಾಕುತ್ತೇವೆ. ನಮ್ಮ ದೇಶದಲ್ಲಿ ದೇವರು,ದೈವಕ್ಕೆ ವಿಶೇಷ […]