ನಾನು ಮೋದಿಯವರ ಫ್ಯಾನ್, ಅವರು ಭಾರತ ಮತ್ತು ಜಗತ್ತಿನ ದೊಡ್ಡ ಶಕ್ತಿ – ಮಾರ್ಕೊ ರುಬಿಯೋ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮುಂದಿನ ವರ್ಷದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ. ಅಧ್ಯಕ್ಷರ ಭೇಟಿ ಹಿನ್ನೆಲೆ ಈ ವರ್ಷಾಂತ್ಯಕ್ಕೆ ತಾವು ಭಾರತಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಹೊಗಳಿದ ರುಬಿಯೋ, ನಾನು ಮೋದಿಯವರ ಫ್ಯಾನ್, ಅವರು ಭಾರತವನ್ನು ಜಗತ್ತಿನ ದೊಡ್ಡ ಶಕ್ತಿಯನ್ನಾಗಿ ಮಾಡಿದ್ದಾರೆ. ಭಾರತ ಮತ್ತು ಅಮೆರಿಕ ದೇಶಗಳು ತೈಲ ವ್ಯಾಪಾರವನ್ನು ಹೆಚ್ಚಿಸಲು ಕೆಲಸ ಮಾಡುತ್ತಿವೆ ಎಂದರು. ಕಚ್ಚಾ ತೈಲವನ್ನು ಶುದ್ಧೀಕರಿಸುವ ದೊಡ್ಡ […]

ನಿಮ್ಮನೆ ಕೂಲಿಗೆ ಬರ್ತೀವಿ, ನೀವು ಬಿಸಾಕೋ ಭಿಕ್ಷೆ ಅನ್ನ ತಿಂತೀವಿ ಹಿಂಗ್ಯಾಕ ಹೇಳಿದ್ರು ಪ್ರದೀಪ್‌ ಈಶ್ವರ್‌ ? ಇಲ್ಲಿದೆ ನೋಡಿ

Pradeep Ishwar ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಲ್ಲಿ ನಡೆದ ಕೆಂಪೇಗೌಡ ಜಯಂತಿ ಆಚರಣೆ ವೇಳೆ ಶಾಸಕ ಪ್ರದೀಪ್ ಈಶ್ವರ್‌ ಅವರನ್ನು ವೇದಿಕೆಯಿಂದ ಆಚೆ ಕಳುಹಿಸುವಂತೆ ಕುಮಾರಸ್ವಾಮಿ, ಸಂಸದ ಡಾ.ಕೆ ಸುಧಾಕರ್ ಬೆಂಬಲಿಗರು ಗಲಾಟೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದ ಪ್ರದೀಪ್‌ ಈಶ್ವರ್‌ ಆಕ್ರೋಶ ಹೊರಹಾಕಿದ್ದಾರೆ. ನಾನು ಜಿಲ್ಲೆಯ ಶೋಷಿತ ಸಮುದಾಯದ ಶಾಸಕ. ಕಾರ್ಯಕ್ರಮಕ್ಕೆ ಕರೆದು ಅವಮಾನ ಮಾಡೋದು ಸರಿನಾ? ಜಿಲ್ಲೆಯಲ್ಲಿ ಶೋಷಿತರು, ಅಲ್ಪಸಂಖ್ಯಾತರು ಬದುಕುಬಾರದ? ಅಂತ ಪ್ರಶ್ನೆ ಮಾಡಿದ್ದಾರೆ. ನಾನು ತುಂಬಾ ತಾಳ್ಮೆಯಿಂದ […]

ಹೆದ್ದಾರಿಯಲ್ಲೇ ನಾಡಬಾಂಬ್ ಸ್ಪೋಟಿಸಿಕೊಂಡು ಕಾರಿನಲ್ಲೇ ಯುವಕ ಆತ್ಮಹ*ತ್ಯೆ!

 ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಸೀಮೆಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಬೆಂಗಳೂರಿನಿಂದ ಯುವತಿಯೊಬ್ಬಳನ್ನು ಅಪಹರಿಸಿಕೊಂಡು ಬಂದಿದ್ದ ಎನ್ನಲಾದ ನಾಗೇಂದ್ರ ಎಂಬ ಯುವಕ, ಮಾರ್ಗಮಧ್ಯೆ ಕಾರಿನಲ್ಲೇ ನಾಡಬಾಂಬ್ ಸ್ಫೋಟಿಸಿಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಮಧ್ಯಾಹ್ನ 1.30ರ ಸುಮಾರಿಗೆ ಚಲಿಸುತ್ತಿದ್ದ ವಾಹನದಲ್ಲೇ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನಾಗೇಂದ್ರ ಯುವತಿಗೆ ಚಾಕುವಿನಿಂದ ಇರಿದಿದ್ದು, ತೀವ್ರ ರಕ್ತಸ್ರಾವದಿಂದ ಕಂಗಾಲಾದ ಆಕೆ ತಕ್ಷಣವೇ ಚಲಿಸುವ ಕಾರಿನಿಂದ ಹೊರಕ್ಕೆ ಜಿಗಿದು ರಕ್ಷಣೆಗಾಗಿ ಕಿರುಚಾಡಿದ್ದಾಳೆ. ಚಾಲಕ […]

ಸ್ಯಾಂಡಲ್‌ವುಡ್‌ನಲ್ಲಿ ಸೂತಕ: ಚಾರಣದ ವೇಳೆ ನಿರ್ಮಾಪಕ ಭಾಮಾ ಹರೀಶ್ ಪುತ್ರ ವಿಧಿವಶ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಸ್ಯಾಂಡಲ್‌ವುಡ್‌ನ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಭಾಮಾ ಹರೀಶ್ ಅವರ ಕುಟುಂಬದಲ್ಲಿ ಭಾರೀ ದುರಂತವೊಂದು ಸಂಭವಿಸಿದೆ. ಅವರ 29 ವರ್ಷದ ಮಗ ಉಲ್ಲಾಸ್ ಅವರು ಶಿವಮೊಗ್ಗ ಜಿಲ್ಲೆಯ ಹೆಸರಾಂತ ಪ್ರವಾಸಿ ತಾಣವಾದ ಕೊಡಚಾದ್ರಿ ಪರ್ವತ ಶ್ರೇಣಿಯಲ್ಲಿ ಹಠಾತ್ತನೆ ಸಾವನ್ನಪ್ಪಿದ್ದಾರೆ. ಗಮ್ಯಸ್ಥಾನ ತಲುಪುವ ಮುನ್ನವೇ ನಿಂತ ಹೃದಯ ಬಡಿತ ವಾರಾಂತ್ಯದ ರಜೆಯ ನಿಮಿತ್ತ ಉಲ್ಲಾಸ್ ಅವರು ತಮ್ಮ ಆಪ್ತ ಸ್ನೇಹಿತರ ಬಳಗದೊಂದಿಗೆ ಕೊಡಚಾದ್ರಿ ಬೆಟ್ಟಕ್ಕೆ ಟ್ರೆಕ್ಕಿಂಗ್ ತೆರಳಿದ್ದರು. ಆದರೆ […]

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ವಿಪಕ್ಷಗಳು ರಾಜಕಾರಣ ಮಾಡಬಾರದು: ಬೈರತಿ ಸುರೇಶ್

ಬೆಂಗಳೂರು: ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ವಿಪಕ್ಷಗಳು ರಾಜಕಾರಣ ಮಾಡಬಾರದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಏನೇ ಇದ್ರೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಇತಿಹಾಸದಲ್ಲಿ ಯಾವಾಗಲಾದರೂ ಸಿಎಂ ಹಾಗೂ ಕೇಂದ್ರ ಸಚಿವ ಬಹಿರಂಗ ಚರ್ಚೆ ಮಾಡಿದ್ದಾರಾ? ಅಲ್ಲಿ ಹೋಗಿ ಚರ್ಚೆಗೆ ಬನ್ನಿ ಅನ್ನೋದು ಸರಿನಾ? ರಾಜ್ಯದ ಘನತೆಗೆ ಧಕ್ಕೆ ಆಗುತ್ತೆ ಇದರಿಂದ ಎಂದು ವಾಗ್ದಾಳಿ ನಡೆಸಿದರು. ಇತ್ತ ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರ ಏರಿಕೆಯ ಸುಳಿವನ್ನು ಕೊಟ್ಟ ಅವರು, ಕೇಂದ್ರ ಕಾರಣ […]

Blast Zone Movie Review : ಸಿನಿ ರಂಗದಲ್ಲಿ ಸೌಂಡ್‌ ಮಾಡುತ್ತಿದೆ ‘ಬ್ಲಾಸ್ಟ್ ಝೋನ್’ ಚಿತ್ರ – ಕರಾಟೆ ಕಿಕ್‌ ಜತೆ ಫ್ಯಾಮಿಲಿ ಟಚ್‌ ಇಲ್ಲಿದೆ ನೋಡಿ ಕಂಪ್ಲೀಟ್‌ ಸ್ಟೋರಿ

ಇತ್ತೀಚೆಗೆ ತೆರೆ ಮೇಲೆ ಕಾಣಿಸಿಕೊಳ್ಳುವ ಚಿತ್ರಗಳು ಮಹಿಳಾ ಸಬಲೀಕರಣಕ್ಕೆ ಸಾಕ್ಷಿಯಾಗುತ್ತಿದ್ದು, ಸಿನಿಮಾ ಎಂದರೆ,ಅಲ್ಲಿ ಪುರುಷರು ಮಾತ್ರ ನಾಯಕ ಸ್ಥಾನದಲ್ಲಿ ಇರುತ್ತಿದ್ದರು. ಹೆಣ್ಣು ಮಕ್ಕಳನ್ನು ನಾಚುವ ನಾರಿಯಂತೆ ಇಲ್ಲವೆ, ಅಡುಗೆ ಮನೆಗೆ ಸೂಕ್ತ ಎನ್ನುವಂತೆ ಬಿಂಬಿಸುತ್ತಿದ್ದರು. ಆದರೆ ಇದೀಗ ಜನರ ಮೈಂಡ್‌ ಸೆಟ್‌ ಚೇಂಜ್‌ ಆಗಿದೆ ಅದರ ತಕ್ಕಂತೆ ಚಿತ್ರರಂಗವೂ ಹೊಸ ಹೊಸ ಸಿನಿಗಳ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಚಿತ್ರದಲ್ಲಿ ನಾಯಕಿಯರೂ ನಾಯಕನ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ‘ಬ್ಲಾಸ್ಟ್ ಝೋನ್’ ಹೆಣ್ಣು ಮಕ್ಕಳ ಮನಸ್ಸನ್ನು ಗೆಲ್ಲುವಲ್ಲಿ […]

ಸಿಎಂ ಡಿಕೆಶಿಗೆ ಸವಾಲ್‌ ಹಾಕಿದ ನಿಖಿಲ್ ಕುಮಾರಸ್ವಾಮಿ ಯಾಕೆ ಗೊತ್ತಾ? ಕಾರಣ ಇಲ್ಲಿದೆ ನೋಡಿ.

Nikhil Kumaraswamy ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ನಾಳೆ ಜೂ.27 ಭೈರಮಂಗಲಕ್ಕೆ ಹೋಗುತ್ತಿದ್ದು, ಸಿಎಂ ಡಿಕೆ ಶಿವಕುಮಾರ್ ಅವರು ಭೈರಮಂಗಲಕ್ಕೆ ಬರಲಿ ನೋಡೋಣ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸಿಎಂ ಅವರು ವಿಧಾನಸೌಧದಲ್ಲಿ 4 ಗೋಡೆ ಮಧ್ಯೆ ಚರ್ಚೆ ಮಾಡೋಣ ಅಂತ ಪತ್ರ ಬರೆದಿದ್ದರು. ಕುಮಾರಸ್ವಾಮಿ ಅವರು ರೈತರ ಸಮ್ಮುಖದಲ್ಲಿ ಚರ್ಚೆಗೆ ಕರೆದಿದ್ದಾರೆ. ಕುಮಾರಸ್ವಾಮಿ ‌ರೈತರ ಪರ ಇರೋ ವ್ಯಕ್ತಿ. ನಾಳೆ […]

ಮುತ್ತತ್ತಿ ಕಾವೇರಿ ನದಿಯಲ್ಲಿ ಸಾವುಗಳನ್ನು ತಡೆಯಲು ಸುರಕ್ಷತಾ ಕ್ರಮ ಕೈಗೊಳ್ಳಿ: ಪ್ರಿಯಾಂಕ್ ಖರ್ಗೆಗೆ HDK ಪತ್ರ

ಬೆಂಗಳೂರು: ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿರುವ ಮುತ್ತತ್ತಿಯಲ್ಲಿರುವ ಕಾವೇರಿ ನದಿಯಲ್ಲಿ ನಿರಂತರವಾಗಿ ಪ್ರವಾಸಿಗರು ನದಿಯ ನೀರಿನ ಸುಳಿಗಳಿಗೆ ಸಿಲುಕಿ ಜೀವ ಕಳೆದುಕೊಳ್ಳುತ್ತಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಮುತ್ತತ್ತಿಯಲ್ಲಿ ಪೊಲೀಸ್ ಉಪಠಾಣೆ ತೆರೆಯುವ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಮುತ್ತತ್ತಿಯ ಕಾವೇರಿ ನದಿ ಬಾಗದ ಪ್ರದೇಶದಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು, ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು ಮತ್ತು ನದಿಗೆ ಇಳಿಯದಂತೆ ತಡೆಯಲು ದಂಡೆಯ ಉದ್ದಕ್ಕೂ […]

ನಮ್ಮ ಮೆಟ್ರೋ ಪಿಲ್ಲರ್ ಲೈಟಿಂಗ್ ಕೆಲಸದ ವೇಳೆ ವಿದ್ಯುತ್ ಶಾಕ್ ನಿಂದ ಕಾರ್ಮಿಕ ಸಾ*ವು

ಬೆಂಗಳೂರು: ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿ ವಿದ್ಯುತ್‌ಗೆ ಸಂಬಂಧಿಸಿದ ಕೆಲಸ ನಿರ್ವಹಿಸುತ್ತಿದ್ದ ಗುತ್ತಿಗೆ ಕಾರ್ಮಿಕರೊಬ್ಬರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ಈ ಬೇಸರದ ಸಂಗತಿ ಸಂಭವಿಸಿದೆ. ನೆಲದ ಅಡಿಯಲ್ಲಿ ಕೆಲಸ ಮಾಡುವಾಗ ತಗುಲಿದ ಶಾಕ್ ನಮ್ಮ ಮೆಟ್ರೋ ಪಿಲ್ಲರ್‌ಗಳಿಗೆ ಆಕರ್ಷಕ ಬೆಳಕಿನ ವ್ಯವಸ್ಥೆ (Pillars Lighting Works) ಕಲ್ಪಿಸುವ ಕಾಮಗಾರಿಯನ್ನು ‘ಎಂ/ಎಸ್ ಎಂ.ಆರ್. ಎಲೆಕ್ಟ್ರಿಕಲ್ಸ್’ ಎಂಬ ಖಾಸಗಿ ಸಂಸ್ಥೆಗೆ ವಹಿಸಲಾಗಿತ್ತು. ಈ ಸಂಸ್ಥೆಯ […]

9ನೇ ತರಗತಿ ಪುಸ್ತಕದಲ್ಲಿ ದೇಶದ ಚುನಾವಣಾ ವ್ಯವಸ್ಥೆ, ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಹೊಸ ಪಾಠ ಸೇರ್ಪಡೆಗೊಳಿಸಿದ NCERT

ನವದೆಹಲಿ: ದೇಶದ ಶಾಲಾ ವಿದ್ಯಾರ್ಥಿಗಳಿಗೆ ಭಾರತದ ಪ್ರಜಾಪ್ರಭುತ್ವ ಮತ್ತು ಮತದಾನ ಪ್ರಕ್ರಿಯೆಯ ಬಗ್ಗೆ ಆರಂಭಿಕ ಹಂತದಲ್ಲೇ ಪ್ರಾಯೋಗಿಕ ಅರಿವು ಮೂಡಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಭಾರತೀಯ ಚುನಾವಣಾ ಆಯೋಗದ (ECI) ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ಹೊಸ ವಿವರಗಳನ್ನು ಸೇರಿಸಲಾಗಿದೆ. ಪ್ರಜಾಪ್ರಭುತ್ವದ ಅಡಿಪಾಯ ತಿಳಿಸಿಕೊಡುವ ಪ್ರಯತ್ನ ‘ಅಂಡರ್‌ಸ್ಟ್ಯಾಂಡಿಂಗ್ ಸೊಸೈಟಿ: […]