ರಾಜ್ಯದಲ್ಲಿ ಗುಟ್ಕಾ ಬ್ಯಾನ್ ಎಚ್ಚರಿಕೆ ನೀಡಿದ ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು : ಕಿಂಚಿತ್ ಅಮಲು ಪದಾರ್ಥ ಬೆರಕೆ ಮಾಡಿದರೂ ಕರ್ನಾಟಕದಲ್ಲಿ ಎಲ್ಲ ರೀತಿಯ ಪಾನ್ ಮಸಾಲಾ, ಗುಟ್ಕಾ ಮಾರಾಟ ನಿಷೇಧ ಮಾಡುವುದಾಗಿ ಸಿಎಂ ಡಿ ಕೆ ಶಿವಕುಮಾರ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಣದಲ್ಲಿ ಏರ್ಪಡಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 31 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಪಾನ್ ಮಸಾಲಾ, ಗುಟ್ಕಾ, ಅಡಿಕೆ ಮತ್ತಿತರ ಪದಾರ್ಥಗಳಲ್ಲಿ ಅಮಲು ಬರುವ ವಸ್ತುಗಳನ್ನು ಬೆರಕೆ ಮಾಡಿ […]

ಬೆಂಗಳೂರಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು : “ಬೆಂಗಳೂರಿಗೆ ಹೆಬ್ಬಾಗಿಲಿನಂತೆ ಹೆಬ್ಬಾಳ ಆಗೋಗಿದೆ. ಹೆಬ್ಬಾಳ ಭಾಗದ ಸಂಚಾರ ದಟ್ಟಣೆಗೆ ಒಂದಷ್ಟು ಮುಕ್ತಿ ನೀಡಿದ್ದೇವೆ. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಮುಂದಿನ ದಿನಗಳಲ್ಲಿ ಬಗೆಹರಿಸುವುದೇ ನಮ್ಮ ಉದ್ದೇಶ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು. ಮೇಖ್ರಿ ವೃತ್ತದಿಂದ ಹೆಬ್ಬಾಳ ಜಂಕ್ಷನ್ ವರೆಗೂ ಸುರಂಗ ರಸ್ತೆ ನಿರ್ಮಾಣಕ್ಕೆ ಸಿಎಂ ಡಿ ಕೆ ಶಿವಕುಮಾರ್ ಅವರು ಹೆಬ್ಬಾಳ ಜಂಕ್ಷನ್ ನಲ್ಲಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.  “2.5 ಕಿಲೋ ಮೀಟರ್ ಉದ್ದದ ಕಟ್ ಅಂಡ್ ಕವರ್ ಟನಲ್ ಇದಾಗಿದ್ದು. […]

ಅಭಿವೃದ್ಧಿ ಬಿಟ್ಟರೆ ಬೇರೆ ರಾಜಕಾರಣ ನನಗೆ ಗೊತ್ತಿಲ್ಲ : ಜಿ.ಟಿ.ದೇವೇಗೌಡ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಮುಖ್ಯ ಗುರಿ. ಜನರು ಅಭಿವೃದ್ಧಿಗಾಗಿ ನನ್ನ ಜೊತೆ ಇದ್ದಾರೆ. 2028ರ ಚುನಾವಣೆಯಲ್ಲೂ ಸ್ಪರ್ಧೆ ಮಾಡಿ, ನಿಮ್ಮ ಜೊತೆ ಇರುತ್ತೇವೆ ಎಂದು ಜನರು ಹೇಳುತ್ತಿದ್ದಾರೆ. ಅಭಿವೃದ್ಧಿ ಬಿಟ್ಟರೆ ಬೇರೆ ರಾಜಕಾರಣ ನನಗೆ ಗೊತ್ತಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನನಗೆ ಮೊಬೈಲ್ ಸರಿಯಾಗಿ ಬಳಸಲು ಬರುವುದಿಲ್ಲ ನನ್ನ ಪಿಎಗಳು ಕರೆಗಳನ್ನು ಮಾಡಿಕೊಡುತ್ತಾರೆ. ನಾನು ಟಿವಿಯನ್ನೂ ನೋಡಿಲ್ಲ. ಇನ್‌ಸ್ಟಾಗ್ರಾಂನೋಡುವುದಿಲ್ಲ. ಎಸ್‌ಎಂಎಸ್ ಓದಲು ಕೂಡ ಬರುವುದಿಲ್ಲಆದ್ದರಿಂದ ಕುಮಾರಸ್ವಾಮಿ ಅವರು […]

ಪ್ರದೀಪ್ ಈಶ್ವರ್‌ಗೆ ಚಪ್ಪಲಿ ಎಸೆತ ಪ್ರಕರಣ – 150 ಮಂದಿ ವಿರುದ್ಧ ತನಿಖೆ : ನಾಲ್ಕು ಜನ ಅಂದರ್‌

ಚಿಕ್ಕಬಳ್ಳಾಪುರ: ಮೋಟಿವೇಶ್‌ ಸ್ಪೀಚ್‌ಗೆ ಪ್ರಸಿದ್ಧಿಯಾಗಿದ್ದ ಶಾಸಕ ಪ್ರದೀಪ್ ಈಶ್ವರ್‌ ಒಂದಿಲ್ಲ ಒಂದು ಸಮಸ್ಯೆಯಲ್ಲಿ ಸಿಲುಕಿಹಾಕಿಕೊಂಡಿರುತ್ತಲೇ ಇರುತ್ತಾರೆ. ಇದೀಗ ಶಾಸಕ ಪ್ರದೀಪ್ ಈಶ್ವರ್‌ ಮೇಲೆ ಚಪ್ಪಲಿ ಎಸೆದಿದ್ದಾರೆ. ಚಿಕ್ಕಬಳ್ಳಾಪುರದ ಜಿಲ್ಲೆಯಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಶಾಸಕ ಪ್ರದೀಪ್ ಈಶ್ವರ್‌ ಭಾಷಣ ಮಾಡುತ್ತಿದ್ದರು. ಈ ವೇಳೆ ಅವರ ಭಾಷಣಕ್ಕೆ ಅಡ್ಡಿಪಡಿಸಿ ಗದ್ದಲ ಎಬ್ಬಿಸಿ ಚಪ್ಪಲಿ ಎಸೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಲ್ಕು ಜನ ಪ್ರಮುಖ ಆರೋಪಿಗಳನ್ನು ಅರೆಸ್ಟ್‌ ಮಾಡಲಾಗಿದೆ. ಈ ವಿಚಾರದ ಬಗ್ಗೆ ಇದೀಗ ಎಸ್‌ಪಿ ಕುಶಾಲ್ […]

ಹೊಸಕೋಟೆ: ಮಾದಕ ದ್ರವ್ಯ ವಿರೋಧಿ ಸಪ್ತಾಹ ಅಂಗವಾಗಿ ಮ್ಯಾರಥಾನ್ – ಕಾರ್ಯಕ್ರಮದಲ್ಲಿ ಖಾಕಿ ಭರ್ಜರಿ ನೃತ್ಯ

ಬೆಂಗಳೂರು: ಗ್ರಾಮಾಂತರ ಜಿಲ್ಲಾ ಪೊಲೀಸ್ ಹೊಸಕೋಟೆ ಉಪ ವಿಭಾಗದ ವತಿಯಿಂದ ಮಾಧಕ ವಸ್ತುಗಳ ವಿರೋಧಿ ಸಪ್ತಾಹ ಕಾರ್ಯಕ್ರಮ ಕೈಗೊಳ್ಳಲಾಯಿತು. ಮಾದಕ ದ್ರವ್ಯ ವಿರೋಧಿ ಸಪ್ತಾಹ ಅಂಗವಾಗಿ ಮ್ಯಾರಥಾನ್ ಹಮ್ಮಿಕೊಂಡಿದ್ದು, ಹೊಸಕೋಟೆ ನಗರದ ಚನ್ನಬೈರೇಗೌಡ ಕ್ರೀಡಾಂಗಣದಿಂದ ಮ್ಯಾರಥಾನ್ ನಡೆಸಲಾಯಿತುʻ ಈ ಕಾರ್ಯಕ್ರಮದಲ್ಲಿ ನಟ ಕೋಮಲ್ ಭಾಗವಹಿಸಿದ್ದು, ನಟ ಕೋಮಲ್ ಹಾಗೂ ಎಸ್ಪಿ ಚಂದ್ರಕಾಂತ್ ಸೇರಿ ಮ್ಯಾರಥಾನ್ ಗೆ ಚಾಲನೆ ನೀಡಿದರು. ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಪ್ರಮುಖ ಕಾರಣ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ, ಮಾದಕ ವಸ್ತುಗಳಿಂದ ನಮ್ಮ […]

ನೈಜ್ಯ ಪ್ರೀತಿ ಅರಸಿ ಹೋದವರಿಗೆ ಸಿಕ್ಕಿದ್ದೇನು? ಪ್ರೇಮದಲ್ಲಿ ವೈಫಲ್ಯ ಕಂಡವರು ಇದನ್ನೊಮ್ಮೆ ಓದಿ

ಕಾಸಿನ ಕುದುರೆ ಏರಿ ಓಡುತ್ತಿರುವವರು ನಾವೆಲ್ಲಾ, ಹೀಗಿರುವಾಗ ಪ್ರೀತಿ-ಪ್ರೇಮ ಹುಡುಕಿದರೆ ಸಿಗುತ್ತದೆಯೇ? ಇಲ್ಲ ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಗಾದೆ ಮರೆಯಾಗಿ, ಹಣವಿದ್ದರೆ ಮಾತ್ರ ಪ್ರತಿಯೊಂದು ದೊರಕುವುದು ಎನ್ನುವ ಸನ್ನಿವೇಶಕ್ಕೆ ನಾವೆಲ್ಲಾ ಬಂದು ತಲುಪಿದ್ದೇವೆ. ಮೊದಲಿನ ಕಾಲದಲ್ಲಿ ಪ್ರೇಮ ಮೂಡುವುದು ನೋಟದಿಂದಾಗಿತ್ತು ಅಲ್ಲಿ ಸೌಂದರ್ಯವಿರಲಿಲ್ಲ, ಸಾರ್ಥವಿರಲಿಲ್ಲ ಪ್ರೇಮ ಮಾತ್ರ ಪಯಣದಲ್ಲಿತ್ತು. ಆದರೇ ಇವತ್ತು ನಾವೆಲ್ಲಾ ಸ್ವಾರ್ಥಿಗಳಾಗಿದ್ದು, ಭಾವನೆಗಳನ್ನು ಸಾಯಿಸಿಬಿಟ್ಟಿದ್ದೇವೆ. ಕೆಟ್ಟ ಕಾಯಕಗಳಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದೇವೆ. ಈ ನಮ್ಮ ನೀಚ ಉದ್ದೇಶಕ್ಕೆ ಬಲಿಯಾಗುತ್ತಿರುವವರು ಅಮಾಯಕರು, ಮುಗ್ಧತೆಯ ಮನಸ್ಸುಗಳು, […]

ಮತ್ತೆ ಶುರುವಾಯ್ತು ಮಧ್ಯಪ್ರಾಚ್ಯದಲ್ಲಿ ಯುದ್ಧ; ಕದನ ವಿರಾಮ ಉಲ್ಲಂಘಿಸಿದ್ದಕ್ಕೆ ಅಟ್ಯಾಕ್ – ಇರಾನ್ ಮೇಲೆ ದಾಳಿ ನಡೆಸಿದ ದೊಡ್ಡಣ್ಣ

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ ಇದರ ಪರಿಣಾಮ ಬೇರೆ ದೇಶಗಳ ಮೇಲೆ ಬೀರುತ್ತಿದ್ದು, ಆದರೂ ಯಾರಿಗೂ ತಲೆಕೆಡಿಸಿಕೊಳ್ಳದೆ ಎನು ಆಗುತ್ತದೆಯೋ ಆಗಲಿ ಎಂದು ವಿದೇಶಿಗಳು ಸಾಗುತ್ತಿವೆ. ದೊಡ್ಡಣ್ಣ ಎಂದು ಕರೆಸಿಕೊಂಡ ಅಮೆರಿಕ ಒಂದೊಮ್ಮೆ ಶಾಂತಿಗೆ ನಾವು ಸಿದ್ಧ ಎನ್ನುತ್ತಿದ್ದು, ಈ ನಿರ್ಧಾರದ ಬೆನ್ನಲ್ಲೇ ಮತ್ತೆ ಯುದ್ಧ ಘೋಷನೆ ಮಾಡುವುದಾಗಿದೆ. ಕದನ ವಿರಾಮ ಉಲ್ಲಂಘಿಸಿದ್ದಕ್ಕಾಗಿ ಇರಾನ್‌ ಮೇಲೆ ಸತತ ಎರಡನೇ ರಾತ್ರಿಯೂ ಅಮೆರಿಕ ದಾಳಿ ನಡೆಸಿದೆ. ಹಾರ್ಮುಜ್‌ ಜಲಸಂಧಿಯ ಮೂಲಕ ಹಾದುಹೋಗುವ ಮತ್ತೊಂದು ತೈಲ ಟ್ಯಾಂಕರ್‌ ಮೇಲೆ […]

ಕೀಲುಗಳ ಆರೋಗ್ಯ ಹೆಚ್ಚಿಸಲು ಈ ಪುಡ್ ನಿಮ್ಮ ಆಹಾರದ ಜೊತೆಗಿರಲಿ

ವಯಸ್ಸಾಗುತ್ತಿದ್ದಂತೆ ದೇಹದ ಮೂಳೆಗಳು ಮತ್ತು ಕೀಲುಗಳ (Joints) ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ. ತಪ್ಪು ಆಹಾರ ಪದ್ಧತಿ ಮತ್ತು ದೈಹಿಕ ಶ್ರಮದ ಕೊರತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೂ ಕೀಲು ನೋವಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕೀಲುಗಳನ್ನು ದೀರ್ಘಕಾಲದವರೆಗೆ ಗಟ್ಟಿಯಾಗಿ ಮತ್ತು ಆರೋಗ್ಯವಾಗಿಡಲು ನಮ್ಮ ದೈನಂದಿನ ಆಹಾರದಲ್ಲಿ ಕೆಲವು ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇರಿಸಿಕೊಳ್ಳುವುದು ಅತ್ಯಗತ್ಯ. ಕೀಲುಗಳ ಬಲವನ್ನು ಹೆಚ್ಚಿಸುವ ಅಂತಹ 6 ಪ್ರಮುಖ ಆಹಾರಗಳು ಇಲ್ಲಿವೆ: 1. ಒಮೆಗಾ-3 ಸಮೃದ್ಧವಾಗಿರುವ ಕೊಬ್ಬಿನ ಮೀನುಗಳು (Fatty Fish) […]

ಭೈರಮಂಗಲ ಸಭೆಗೆ ಬರದ ಸಿಎಂ ಡಿಕೆಶಿ; ಒಬ್ಬರೇ ರೈತರೊಂದಿಗೆ ಸಂವಾದ ನಡೆಸಿದ ತೆರಳಿದ HDK

ಬಿಡದಿ : ಬಿಡದಿ ಹೋಬಳಿಯ ಫಲವತ್ತಾದ ಕೃಷಿ ಭೂಮಿ ಲೂಟಿ ಹೊಡೆಯಲು ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನೇಕ ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾದು ಕುಳಿತು ಸಂಚು ರೂಪಿಸಿದ್ದರು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು. ಬಿಡದಿಯ ಬೈರಮಂಗಲದಲ್ಲಿ ರೈತರ ಸಮ್ಮುಖದಲ್ಲಿ ಚರ್ಚೆಗೆ ಬರುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಕೇಂದ್ರ ಸಚಿವರು ಪತ್ರ ಬರೆದು ವಿನಂತಿ ಮಾಡಿದ್ದರು. ಆದರೆ ಚರ್ಚೆಗೆ ಮುಖ್ಯಮಂತ್ರಿಗಳು ಗೈರು ಹಾಜರಾಗಿದ್ದರು. ಹಿನ್ನೆಲೆಯಲ್ಲಿ ಕೇಂದ್ರ ಸಚಿವರು […]

ರಾಜ್ಯದಲ್ಲಿ ಭೂ ಮಾಲೀಕರ ತ್ಯಾಗ ಸ್ಮರಣೆಗೆ ವಾಲ್ ಆಫ್ ಗ್ರ್ಯಾಟಿಟ್ಯೂಡ್: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು : “ಕೈಗಾರಿಕಾ ಪ್ರದೇಶ, ಶಾಲೆಗಳು, ಕೆರೆ, ರಸ್ತೆ ನಿರ್ಮಾಣ ಸೇರಿದಂತೆ ಜನಪರ ಯೋಜನೆಗಳಿಗೆ ಯಾವುದೇ ತಕರಾರು ಮಾಡದೇ ಜಾಗ ನೀಡುವ ಭೂ ಮಾಲೀಕರ ಹೆಸರನ್ನು ವಾಲ್ ಆಫ್ ಗ್ರಾಟಿಟ್ಯೂಡ್ (ಕೃತಜ್ಞತಾ ಫಲಕ) ನಲ್ಲಿ ಸೇರಿಸಲು ಸರ್ಕಾರ ತೀರ್ಮಾನಿಸಿದೆ. ಆ ಮೂಲಕ ಭೂ ಮಾಲೀಕರ ತ್ಯಾಗ ಸ್ಮರಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೂತನವಾಗಿ ನಿರ್ಮಿಸುತ್ತಿರುವ ಕೆಂಪೇಗೌಡ ಬಡಾವಣೆಯಲ್ಲಿ ಶನಿವಾರ ನಡೆದ 517 ನೇ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು […]