ನೈಜ್ಯ ಪ್ರೀತಿ ಅರಸಿ ಹೋದವರಿಗೆ ಸಿಕ್ಕಿದ್ದೇನು? ಪ್ರೇಮದಲ್ಲಿ ವೈಫಲ್ಯ ಕಂಡವರು ಇದನ್ನೊಮ್ಮೆ ಓದಿ

ಕಾಸಿನ ಕುದುರೆ ಏರಿ ಓಡುತ್ತಿರುವವರು ನಾವೆಲ್ಲಾ, ಹೀಗಿರುವಾಗ ಪ್ರೀತಿ-ಪ್ರೇಮ ಹುಡುಕಿದರೆ ಸಿಗುತ್ತದೆಯೇ? ಇಲ್ಲ ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಗಾದೆ ಮರೆಯಾಗಿ, ಹಣವಿದ್ದರೆ ಮಾತ್ರ ಪ್ರತಿಯೊಂದು ದೊರಕುವುದು ಎನ್ನುವ ಸನ್ನಿವೇಶಕ್ಕೆ ನಾವೆಲ್ಲಾ ಬಂದು ತಲುಪಿದ್ದೇವೆ. ಮೊದಲಿನ ಕಾಲದಲ್ಲಿ ಪ್ರೇಮ ಮೂಡುವುದು ನೋಟದಿಂದಾಗಿತ್ತು ಅಲ್ಲಿ ಸೌಂದರ್ಯವಿರಲಿಲ್ಲ, ಸಾರ್ಥವಿರಲಿಲ್ಲ ಪ್ರೇಮ ಮಾತ್ರ ಪಯಣದಲ್ಲಿತ್ತು. ಆದರೇ ಇವತ್ತು ನಾವೆಲ್ಲಾ ಸ್ವಾರ್ಥಿಗಳಾಗಿದ್ದು, ಭಾವನೆಗಳನ್ನು ಸಾಯಿಸಿಬಿಟ್ಟಿದ್ದೇವೆ. ಕೆಟ್ಟ ಕಾಯಕಗಳಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದೇವೆ.

ಈ ನಮ್ಮ ನೀಚ ಉದ್ದೇಶಕ್ಕೆ ಬಲಿಯಾಗುತ್ತಿರುವವರು ಅಮಾಯಕರು, ಮುಗ್ಧತೆಯ ಮನಸ್ಸುಗಳು, ಹೌದು ವೈಭೋಗ ಜೀವನವನ್ನು ಅನುಭವಿಸುತ್ತಿರುವ ನಾವೆಲ್ಲರೂ ಪ್ರೇಮದ ನೆನಪದಲ್ಲಿ ಅನೈತಿಕ ಸಂಬಂಧಕ್ಕೆ ಸೆರೆಯಾಗುತ್ತಿದ್ದೇವೆ. ಇದಕ್ಕೆ ಕಾರಣ ನಮೆಗೆಲ್ಲಾ ಗೊತ್ತೇ ಇದ್ದು, ಪ್ರಸ್ತುತ ಹಲವು ಯವಕರು ನೇರವಾಗಿ ಯುವತಿಯರಿಗೆ ಸೆಕ್ಸ್‌ ಅಲ್ಲಿ ಭಾಗಿಯಾಗುವುದಕ್ಕೆ ಬೇಡಿಕೆ ಇಡುತ್ತಾರೆ ಇದಕ್ಕೆ ಕೆಲ ಯುವತಿಯರು ಎಸ್‌ ಎನ್ನುತ್ತಾರೆ ಇನ್ನುಳಿದವರು ನೋ ಎನ್ನುತ್ತಾರೆ.

ಯೌವನದಲ್ಲಿ ಮನಸ್ಸು, ವಯಸ್ಸು ನಿಯಂತ್ರಿಸುವುದಕ್ಕೆ ಆಗುವುದಿಲ್ಲ. ಇವತ್ತಿನ ಯುಗದಲ್ಲಿ ಪ್ರೀತಿಯಲ್ಲಿ ಬಿಜಿಯಾದವರಿಗಿಂತ ಬ್ರೇಕ್‌ ಅಪ್‌ ಅಲ್ಲಿ ತೆಲಾಡುತ್ತಿರುವವರು ಜಾಸ್ತಿಯಾಗಿದ್ದಾರೆ. ಪ್ರೀತಿ ಏನೋ ಎಳೆಯ ವಯಸ್ಸಿನಲ್ಲಿ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಕಾರಣ ಧೈಹಿಕ ಬಾಧೆನೋ ನೈಜ್ಯ ಪ್ರೇಮವೋ ಗೊತ್ತಾಗುವುದಿಲ್ಲ ಆದರೇ, ಈ ವಿಚಾರಕ್ಕೆ ಮನೆಯವರಿಂದಲೋ, ವೈ ಮನಸ್ಸಿನಿಂದಲೋ ಪ್ರೇಮಿಗಳು ದೂರವಾಗಿ ಬಿಡುತ್ತಾರೆ. ಇದರ ನಡುವೆ ಇಬ್ಬರ ಮಧ್ಯೆ ಏನೆಲ್ಲಾ ಅಗಿ ಬಿಟ್ಟಿರುತ್ತದೆ. ಈ ವಿಷಯ ಇಲ್ಲಿಗೆ ನಿಲ್ಲುವುದಿಲ್ಲ ಬ್ರೇಕ್‌ ಅಪ್‌ ನಂತರ ಯುವಕ ಬೇರೆ ಹುಡುಗಿಯನ್ನು, ಯುವತಿಯೂ ಸಹ ಬೇರೆ ಹುಡುಗಿಯನ್ನು ಮದುವೆಯಾಗುತ್ತಾರೆ.

ಮದುವೆ ಜೀವನ ಆರಂಭದಲ್ಲಿ ಚೆನ್ನಾಗಿ ಇರುತ್ತಿದ್ದು, ವಿವಾಹದ ಹೊಸತರಲ್ಲಿ ದಂಪತಿಗಳ ಪೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಮೀರಿ ಮೀರಿ ಮಿಂಚುತ್ತಿರುತ್ತವೆ. ಆದರೇ ಈ ಉತ್ಸಾಹ, ಉಲ್ಲಾಸ ಸ್ವಲ್ಪ ದಿನಗಳಲ್ಲಿಯೇ ಮರೆಯಾಗಿ ಬಿಡುತ್ತದೆ. ಗಂಡ-ಹೆಂಡರ ನಡುವೆ ಕಲಾಪಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ನಂತರ ಇವರಿಗೆ ನೆನಪಿಗೆ ಬರುವುದು ಮಾಜಿ ಪ್ರೀಯತಮ-ಪ್ರೀಯತಮೆ ಇಲ್ಲಿಂದ ಮತ್ತೆ ಹಳೆಯ ಲವರ್‌ ಹತ್ತಿರ ಮಾತು ಕಥೆಗಳು ಪ್ರಾರಂಭವಾಗುತ್ತವೆ. ತದನಂತರ ಮಾತು ಪ್ರೀತಿಯಾಗುತ್ತಿದ್ದು, ಪ್ರೀತಿ ಕಾಮವಾಗಿ ಪರಿವರ್ತನೆ ಹೊಂದುತ್ತದೆ.

ಒಂದು ವೇಳೆ ಮಾಜಿ ಲವರ್‌ ಸಿಕ್ಕಿಲ್ಲ ಅಂದರೆ ಬೇರೆಯವರ ಹತ್ತಿರ ಪ್ರೀತಿಯನ್ನು ಹುಡುಕಲು ಆರಂಭಿಸುತ್ತಾರೆ. ಯಾತನೆಯಲ್ಲಿರುವ ಮನಸ್ಸುಗಳಿಗೆ ಮತ್ತೊಬ್ಬರು ಸಿಕ್ಕಿಯೇ ಬಿಡುತ್ತಾರೆ ಇಲ್ಲಿಯೇ ಅನೈತಿಕ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಇದು ತಪ್ಪು-ಸರಿ ಎನ್ನುವ ಮೊದಲು ಇದಕ್ಕೆ ನೆಮ್ಮದಿ ಎಂದು ನಾಮಕರಣ ಮಾಡುತ್ತಾರೆ. ವೈವಾಹಿಕ ಜೀವನದಲ್ಲಿ ಪ್ರೇಮದಲ್ಲಿ ನೆಮ್ಮದಿ ಇಲ್ಲದೆ ಇರುವುದಕ್ಕೆ ಇವೆಲ್ಲಾ ಕಾಣಿಸಿಕೊಳ್ಳುತ್ತಿದ್ದು, ಪ್ರೀತಿಗೆ ಕೊನೆ ಇರುವುದಿಲ್ಲ ಎಂದು ಪ್ರೇಮವನ್ನು ಸಿಕ್ಕ ಸಿಕ್ಕವರಲ್ಲಿ ಕಂಡುಕೊಳ್ಳುತ್ತಾರೆ.

ಸದ್ಯದ ಪ್ರೀತಿಯ ಉದ್ದೇಶ ಲೈಂಗಿಕವಾಗಿದ್ದು, ಇಲ್ಲಿ ನೆನಪುಗಳನ್ನು ಸುಟ್ಟುಹಾಕಿ ಭಾವನೆಗೆ ಬೆಂಕಿ ಸುರಿದು ಬದುಕುತ್ತಿದ್ದೇವೆ. ಈ ವಿಚಾರಕ್ಕೆ ಪ್ರೀತಿಯೇ ಪ್ರಪಂಚ ಎಂದು ಬದುಕುತ್ತಿರುವ ಅಮಾಯಕರು ಬಲಿಯಾಗುತ್ತಿರುವುದು ವಿಪರ್ಯಾಸ ಎನಿಸುತ್ತದೆ. ಇದೇ ರೀತಿಯ ಬದಕನ್ನು ರೂಢಿಸಿಕೊಂಡಿರುವ ನಮಗೆ ನೈಜ್ಯ ಪ್ರೀತಿ ಸಿಗುವುದಿಲ್ಲ ಸಿಕ್ಕರೆ ಅದು ಬೇರೆಯ ರೀತಿಯಲ್ಲಿಯೇ ಸಿಗುತ್ತದೆ. ಮುಂದಿನ ದಿನಗಳಲ್ಲಿ ನಾವು ಭಾವನೆ ಎನ್ನುವ ಪದವನ್ನು ಮರೆತರು ಮರೆಯಬಹುದು. ಇಲ್ಲಿ ಅನೈತಿಕ, ಪ್ರೇಮ ಪ್ರೀತಿ ಯಾವುದು ತಪ್ಪಲ್ಲ ಆದರೇ ಅಮಾಯಕರನ್ನು ಬಳಸಿಕೊಳ್ಳುವುದು ತಪ್ಪು ಅಲ್ಲವೇ? ನಿಮ್ಮದೇ ಮನಸ್ಥಿಯವರನ್ನು ಹುಡುಕಿ ನಿಮ್ಮ ಮನಬಂದತೆ ಬದುಕಿ.

ಬ್ರೇಕ್‌ ಅಪ್‌ ನಂತರ ಕೆಲ ಮುಗ್ಧರು ಮಾತನಾಡುವುದನ್ನೇ ನಿಲ್ಲಿಸುತ್ತಾರೆ. ಇನ್ನು ಕೆಲವರು ಊರೇ ಬಿಡುತ್ತಾರೆ ಇದೇ ವಿಚಾರಕ್ಕೆ ಸಾವುಗಳು ಸಂಭವಿಸಿವೆ ಮತ್ತೊಂದು ಕಡೆ ಯಾತನೆಯಿಂದ ಬದುಕಿ ತಮ್ಮ ಕುಟುಂಬದವರಿಗೆ ಕಿರಿ ಕಿರಿ ಮಾಡುತ್ತಾರೆ. ಮೋಸ ಮಾಡುವವರು ಎಂದುಕೊಳ್ಳುತ್ತಾರೆ ನಾನು ಅವಳ-ಅವನ ಭಾವನೆಗೆ ದಕ್ಕೆ ಕೊಟ್ಟೆ ಎಂದು ಆದ್ರೆ ನೀವು ಅವರ ಮನೆಯವರ ನೆಮ್ಮದಿ, ನಲಿವನ್ನ ಕಿತ್ತುಕೊಂಡಿರುತ್ತೀರಿ, ಯಾರಿಗೆ ಏನು ಆದ್ರೆ ನಮಗೇನು ಎನ್ನುವ ರೀತಿಯಲ್ಲಿ ಜೀವಿಸುತ್ತಿರುತ್ತೇವೆ ಅಲ್ಲವೇ ಅದು ತಪ್ಪು. ಇನ್ನು ಮುಗ್ಧ ಮನಸ್ಸುಗಳಿಗೆ ಹೇಳುವುದಾದ್ರೆ, ಮನಸ್ಸು ಗಟ್ಟಿಮಾಡಿ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಿ ಇಲ್ಲಿ ಎಲ್ಲರೂ ಸ್ವಾರ್ಥಿಗಳೇ ನೆಲೆಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others