ಬೆಂಗಳೂರು: ಗ್ರಾಮಾಂತರ ಜಿಲ್ಲಾ ಪೊಲೀಸ್ ಹೊಸಕೋಟೆ ಉಪ ವಿಭಾಗದ ವತಿಯಿಂದ ಮಾಧಕ ವಸ್ತುಗಳ ವಿರೋಧಿ ಸಪ್ತಾಹ ಕಾರ್ಯಕ್ರಮ ಕೈಗೊಳ್ಳಲಾಯಿತು. ಮಾದಕ ದ್ರವ್ಯ ವಿರೋಧಿ ಸಪ್ತಾಹ ಅಂಗವಾಗಿ ಮ್ಯಾರಥಾನ್ ಹಮ್ಮಿಕೊಂಡಿದ್ದು, ಹೊಸಕೋಟೆ ನಗರದ ಚನ್ನಬೈರೇಗೌಡ ಕ್ರೀಡಾಂಗಣದಿಂದ ಮ್ಯಾರಥಾನ್ ನಡೆಸಲಾಯಿತುʻ
ಈ ಕಾರ್ಯಕ್ರಮದಲ್ಲಿ ನಟ ಕೋಮಲ್ ಭಾಗವಹಿಸಿದ್ದು, ನಟ ಕೋಮಲ್ ಹಾಗೂ ಎಸ್ಪಿ ಚಂದ್ರಕಾಂತ್ ಸೇರಿ ಮ್ಯಾರಥಾನ್ ಗೆ ಚಾಲನೆ ನೀಡಿದರು. ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಪ್ರಮುಖ ಕಾರಣ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ, ಮಾದಕ ವಸ್ತುಗಳಿಂದ ನಮ್ಮ ಯುವಕರು ದೂರ ಸರಿದುಕೊಳ್ಳಬೇಕಿದೆ. ಈ ಮಾದಕ ವಸ್ತುಗಳ ಬಗ್ಗೆ ಜಾಗೃತಗಾಗಿ ಮ್ಯಾರಥಾನ್ ಆಯೋಜನೆ ಮಾಡಲಾಯಿತು.
ಈ ಸಭೆಯಲ್ಲಿ ಸಾಕಷ್ಟು ಜನರು ಭಾಗಿಯಾಗಿದ್ದು, ಪೊಲೀಸ್ ಅಧಿಕಾರಿಗಳು ಸಹ ಸೇರಿದ್ದರು, ಪೊಲೀಸ್ ಅಧಿಕಾರಿಗಳು ಮ್ಯಾರಥಾನ್ ನಲ್ಲಿ ಸ್ಟೇಜ್ ಮೇಲೆ ಸ್ಟೆಪ್ಸ್ ಹಾಕಿ ಮಿಂಚಿ ಹೊಸಕೋಟೆಯ ಜನ ಮನಸೆಳೆದರು. ಗಾಂಜಾ, ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಸೂಚನೆ ನೀಡಿದರು. ಮ್ಯಾರಥಾನ್ ನಲ್ಲಿ ನೂರಾರು ಜನ ಯುವಕರು ಮಕ್ಕಳು ಸಾರ್ವಜನಿಕರು ಹೊಸಕೋಟೆ ವಿಭಾಗದ ಪೊಲೀಸ್ ಸಿಬ್ಬಂದಿ ಭಾಗಿಯಾಗಿ ಮ್ಯಾರಥಾನ್ ನ್ನು ಸಂಭ್ರಮಿಸಿದರು.




