Krishna Bhairegowda
ಬೆಂಗಳೂರು: ನಗರದಲ್ಲಿ ಫುಟ್ ಪಾತ್ ಒತ್ತುವರಿ ತೆರವಿಗೆ ಜಿಬಿಎ ಹೊಸ ಹೆಜ್ಜೆ ಇಟ್ಟಿದ್ದು, ನಗರದ 2000 ಕಿಲೋ ಮೀಟರ್ ರಸ್ತೆಯನ್ನು ಆದ್ಯತೆ ಮೇರೆಗೆ ತೆಗೆದುಕೊಂಡು ಸುರಕ್ಷಿತ ಪಾದಾಚಾರಿ ಅಭಿಯಾನ ನಡೆಸಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಸೂಚಿಸಿದ್ದಾರೆ.
ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಯಾರೆಲ್ಲ ಒತ್ತುವರಿ ಮಾಡಿಕೊಂಡಿದ್ದಾರೋ ಅವರು ಫುಟ್ ಪಾತ್ ತೆರವುಗೊಳಿಸಲು ಜುಲೈ 1 ರವರೆಗೆ ಗಡುವು ನೀಡಲಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಸಚಿವ ಕೃಷ್ಣ ಭೈರೇಗೌಡ ಘೋಷಿಸಿದ ಹೊಸ ನಿಯಮ
- ಇನ್ನು ಮುಂದೆ ಫುಟ್ ಪಾತ್ ಮೇಲೆ ಜಾಹೀರಾತು ಬೋರ್ಡ್ ಇಟ್ಟರೆ ದಂಡ
- ಜುಲೈ 1ರ ನಂತರ ಫುಟ್ ಪಾತ್ ಒತ್ತುವರಿ ತೆರವುಗೊಳಿಸದೇ ಇದ್ದರೆ 250-10,000 ರೂ. ವರೆಗೂ ಭಾರೀ ದಂಡ
- ಅಂಗಡಿಗಳು ಒತ್ತುವರಿ ಮಾಡಿದ್ದರೆ ಆ ಅಂಗಡಿಗಳ ಪರವಾನಿಗೆ ರದ್ದು ಮಾಡಬಹುದು.
- ಪಾದಚಾರಿ ಮಾರ್ಗದಲ್ಲಿ ವಾಹನಗಳ ಪಾರ್ಕಿಂಗ್ ಮಾಡುವಂತೆ ಇಲ್ಲ.
- ಫುಟ್ ಪಾತ್ನಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್ ಮಾಡಬೇಕಾಗುತ್ತದೆ.
- ರಸ್ತೆ ಬದಿ, ಫುಟ್ ಪಾತ್ನಲ್ಲಿ ವಾರಸುದಾರರಿಲ್ಲದ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಜುಲೈ 1 ರಿಂದ ಬಿಡಾಡಿ ವಾಹನಗಳ ಮೇಲೆ ಸ್ಟಿಕರ್ ಅಂಟಿಸಿ ನೋಟಿಸ್ ನೀಡಲಾಗುತ್ತದೆ.
- ಜುಲೈ10 ರಿಂದ ಈ ಬಿಡಾಡಿ ವಾಹನಗಳನ್ನು ತೆರವುಗೊಳಿಸದೇ ಇದ್ದರೆ ಕ್ರಮಕೈಗೊಂಡು ಹರಾಜು ಹಾಕಲಾಗುವುದು.
- *ಸಿಗ್ನಲ್ನಿಂದ 75 ಮೀಟರ್ ದೂರದಲ್ಲಿ ಬಸ್ ನಿಲುಗಡೆ ಇರಬಾರದು ಎಂಬ ನಿಯಮಗಳನ್ನು ಸಚಿವರು ಘೋಷಿಸಿದ್ದಾರೆ.
ಈ ಮೇಲಿನ ಎಲ್ಲವೂ ಸಚಿವ ಕೃಷ್ಣ ಭೈರೇಗೌಡ ಘೋಷಿಸಿದ ಹೊಸ ನಿಯಮವಾಗಿದ್ದು, ಈ ನಿಮಯ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದು ಕಾದುನೋಡಬೇಕಿದೆ.





