ದೇವರ ಹೆಸರಿನಲ್ಲಿ ದುಡ್ಡು ಮಾಡುವುದು ಯಾಕೆ? ಕಾಸಿಲ್ಲದವರಿಗೆ ಭಗವಂತನ ದರ್ಶನವೇ ಇಲ್ವಾ? ಈ ಸ್ಟೋರಿ ಒಂದೊಮ್ಮೆ ಓದಿ…

ಹಣದ ಮುಂದೆ ಎಲ್ಲವೂ ಶೂನ್ಯವಾಗಿದ್ದು, ಕಾಸಿದ್ದರೆ ಕೈಲಾಸ ಎನ್ನುವ ಗಾದೆಗೆ ನಮ್ಮ ಜೀವನಕ್ಕೆ ಮುಡುಪಾಗಿ ಇಟ್ಟಿದ್ದೇವೆ. ದುಡ್ಡಿನ ಮುಂದೆ ನಾವೆಲ್ಲರೂ ದಡ್ಡರಾಗುತ್ತಿದ್ದು, ಕಾಸಿಗಾಗಿ ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದೇವೆ. ಮನುಷ್ಯ -ಮನುಷ್ಯನಿಗೆ ಮೋಸ ಮಾಡುತ್ತಾನೆ ಎಂದರೆ ಒಂದು ಕಡೆ ಒಪ್ಪಿಕೊಳ್ಳುವ ವಿಚಾರ, ಆದರೆ ಪ್ರಸ್ತುತ ನಾವು ಯಾವ ಸ್ಥಿತಿಗೆ ಬಂದು ತಲುಪಿದ್ದೇವೆ ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಹಣಕ್ಕಾಗಿ ದೇವರನ್ನು ಸಹ ನಾವು ಇಂದು ಬಿಡುತ್ತಿಲ್ಲ. ಧೈವದ ನಾಮದಲ್ಲಿ ಬೇರೆಯವರಿಗೆ ನಾಮ ಹಾಕುತ್ತೇವೆ.

ನಮ್ಮ ದೇಶದಲ್ಲಿ ದೇವರು,ದೈವಕ್ಕೆ ವಿಶೇಷ ಭಕ್ತಿ ಭಾವವಿದ್ದು, ಭಗವಂತ ಎಂದರೆ ಭಾವನೆ ಎಂದು ನಮ್ಮ ಭಾರತದಲ್ಲಿ ಬದುಕುತ್ತಿದ್ದೇವೆ. ಹೀಗಿರುವಾಗ ಆ ದೇವರನ್ನು ಸಹ ನಾವು ಇಂದು ದುಡ್ಡಿನ ಮೂಲಕ ಅಳತೆ ಮಾಡುತ್ತಿದ್ದೇವೆ.
ವ್ಯಾಪಾರ-ವ್ಯವಹಾರಕ್ಕಾಗಿ ದೇವರನ್ನು ಬಿಡುತ್ತಿಲ್ಲ.

ಸಂಕಷ್ಟಗಳಿಂದ ಸುಸ್ತಾದಾಗ ಜನ ನೇರವಾಗಿ ಸದ್ದಿಲ್ಲದೆ ದೇವಸ್ಥಾನದತ್ತ ಹೆಜ್ಜೆ ಹಾಕುತ್ತಾರೆ. ಇಲ್ಲಿ ದೇವಸ್ಥಾನದ ಪೂಜಾರಿಗಳು ಇರುತ್ತಿದ್ದು, ಇಲ್ಲಿ ಅವರು ಕೆಲವೊಂದಿಷ್ಟು ನಿಯಮಗಳನ್ನು ಕೈಗೊಂಡಿರುತ್ತಾರೆ. ದೇವರ ದರ್ಶನಕ್ಕಾಗಿ-೨೦೦-೩೦೦ ರೂಪಾಯಿ ತೆಗದುಕೊಳ್ಳುತ್ತಾರೆ. ಮತ್ತೊಂದು ಕಡೆ ನಿಮ್ಮ ಕಷ್ಟಗಳು ಮಾಯವಾಗಬೇಕು ಅಂದ್ರೆ ಹರಕೆ ಕಟ್ಟಿ ಎನ್ನುತ್ತಾರೆ ಇಲ್ಲಿಯೂ ಹರಕೆ ದುಡ್ಡನ್ನು ಪಡೆದುಕೊಳ್ಳುತ್ತಾರೆ.

ಇನ್ನೊಂದು ಕಡೆ ನೋಡುವುದಾರೆ, ಜನ ಅತೀ ಹೆಚ್ಚಾಗಿ ಸ್ವಲ್ಪ ಬೇಡಿಕೆ ಇರುವ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದು, ಆ ದೇವಸ್ಥಾನದಲ್ಲಿ ಜನ ಕಿಕ್ಕಿರಿದು ಸೇರಿರುತ್ತಾರೆ. ಭಾರೀ ಪ್ರಮಾಣದ ಜನ ಅಲ್ಲಿ ಇದ್ದು, ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಲ್ಲಬೇಕು ಅಲ್ಲವೇ? ನಿಂತಿರುತ್ತಾರೆ ಇಲ್ಲಿ ದೇವರ ದರ್ಶನ ಪಡೆಯುವುದಕ್ಕೆ ೧ ರಿಂದ ೨ ತಾಸು ಕಾಯಬೇಕಾಗುತ್ತದೆ. ಇದಕ್ಕೆ ಕಾರಣ ಜನ ಜಾಸ್ತಿ ಎನ್ನುತ್ತಾರೆ ಆದ್ರೆ ವಾಸ್ತವ ಬೇರೆ ಇರುತ್ತದೆ.

ಕಾಯಿಸುವಿಕೆಗೆ ನಮ್ಮ ಜನ ಪೂಜಾರಿಗಳನ್ನು ಬೈದುಕೊಳ್ಳುತ್ತಾರೆ ಆದರೂ ದೇವಸ್ಥಾನಕ್ಕೆ ಹೋಗುವುದು ನಿಲ್ಲಿಸುವುದಿಲ್ಲ. ಕೆಲವೊಂದು ಕಡೆ ಅತಿಯಾದ ಜನಸಂದಣಿಯಿಂದ ಸಾವನ್ನಪ್ಪಿರುವ ಉದಾಹರಣೆಗಳು ಸಾಕಷ್ಟಿದೆ. ಇದೆಲ್ಲಾ ಪಕ್ಕಕ್ಕೆ ಸರಿಸೋಣ ಹಾಗಾದ್ರೆ ಪೈಸಾ ಇಲ್ಲದವರಿಗೆ ಪ್ರವೇಶವಿಲ್ಲವೇ? ದುಡ್ಡು ಇಲ್ಲದೇ ಇರುವವರು ದೇವಸ್ಥಾನಕ್ಕೆ ಹೋಗಬಾರ್ದಾ? ನಮ್ಮ ಜನ ದೇವರ ವಿಷಯಕ್ಕೆ ಸಾಲ ಮಾಡಿ ಆದ್ರೂ ದರ್ಶನ ಪಡೆದುಕೊಳ್ಳುತ್ತಾರೆ.

ಇತ್ತೀಚೆಗೆ ಸೋಶಿಯಲ್‌ ಮೀಡಿಯಾ ಬಂದ ಮೇಲೆ ಅಂತೂ ದೇವಸ್ಥಾನಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಸತ್ಯ ತಿಳಿಯುವುದು ಒಳಿತಲ್ಲವಾ? ಭವಂತನಿಗೆ ಎಲ್ಲವೂ ತಿಳಿದಿರುತ್ತದೆ. ಮೋಸ ಮಾಡಿ ಜನರ ನಂಬಿಕೆಯನ್ನು ಕೊಲೆ ಮಾಡುತ್ತಿರುವವರು ಬಡವರ ಮೇಲೆ ಸ್ವಲ್ಪ ಕರುಣೆ ತೋರಬಹುದು ಅಲ್ಲವೇ!. ದೇವರು ಅರ್ಚಕರಿಗೆ ಮಾತ್ರವಲ್ಲ ಎಲ್ಲರಿಗೂ ಇರುತ್ತಾನೆ ಕಾಸಿಗಾಗಿ ಕರ್ಮಕ್ಕೆ ಬಲಿಯಾಗಬೇಡಿ..

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post