ಸಿದ್ದರಾಮಯ್ಯ ಕೊಟ್ಟ ಆಡಳಿತ ಇಡೀ ದೇಶಕ್ಕೆ ಮಾದರಿ : ಡಿ.ಕೆ ಶಿವಕುಮಾರ್‌

DK Sivakumar

ಬೆಂಗಳೂರು: ರಾಜ್ಯದಲ್ಲಿ ನಿಲ್ಲಿಸಿರುವ ವಿದ್ಯಾರ್ಥಿ ಚುನಾವಣೆಯನ್ನು ಈ ವರ್ಷದಿಂದಲೇ ಪ್ರಾರಂಭಿಸುತ್ತೇವೆ ಎಂದು ಸಿಎಂ ಡಿ.ಕೆ ಶಿವಕುಮಾರ್‌ ತಿಳಿಸಿದ್ದಾರೆ.

ಈ ವೇಳೆ ತಾವು ಅಧಿಕಾರ ವಹಿಸಿಕೊಂಡ ದಿನವನ್ನು ನೆನಪಿಸಿಕೊಂಡರು. ನನಗೆ 2020ರ ಮಾ.10 ರಂದು ಸೋನಿಯಾ ಗಾಂಧಿ ಪಕ್ಷದ ಅಧಿಕಾರ ನೀಡಿದ್ದರು. ಆಗ ಇಷ್ಟೊಂದು ದೊಡ್ಡದಾಗಿ ಕಾರ್ಯಕ್ರಮ ಮಾಡೋಕೆ ಆಗಿರಲಿಲ್ಲ. ಜೂಮ್ ಕಾಲ್‌ನಲ್ಲೇ ನಾನು ಅಧಿಕಾರ ಸ್ವೀಕರಿಸಿದೆ. ನಿಮ್ಮ ವಿಶ್ವಾಸ, ಸಹಕಾರದಿಂದ ಸೇವೆ ಮಾಡಿದ್ದೇನೆ. ನಾನು ಮನುಷ್ಯ, ನನ್ನ ಕೈಯಲ್ಲಿ ಅನೇಕ ತಪ್ಪು ಆಗಿರಬಹುದು ಎಂದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ, ಅಧಿಕಾರ ಹಸ್ತಾಂತರಿಸಿ ಅವರು ಮಾತಾಡಿದರು. ಈ ವೇಳೆ ವಿದ್ಯಾರ್ಥಿ ಚುನಾವಣೆ ಆರಂಭಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕೋವಿಡ್ ಕಾಲದಲ್ಲಿ ಮನೆಯಿಂದ ಹೊರಗೆ ಹೋಗೋಕೆ ಆಗಿರಲಿಲ್ಲ. ಜೂಮ್‌ ಮೀಟಿಂಗ್ ಮೂಲಕವೇ ಅನೇಕ ಸಮಸ್ಯೆ ಪರಿಹರಿಸಿದ್ದೇವೆ.‌ ಕೋಟಿ ಕೋಟಿ ಹಣ ವೆಚ್ಚ ಮಾಡಿ ಫುಡ್ ಕಿಟ್ ಕೊಟ್ಟಿದ್ದೇವೆ. ಕೆಲವರು ಯಾದಗಿರಿ ವರೆಗೂ ಬಸ್‌ನಲ್ಲಿ ಹೋಗಬೇಕಿತ್ತು. ಆಗ ಕೆಪಿಸಿಸಿ ವತಿಯಿಂದ 1 ಕೋಟಿ ರೂ. ಚೆಕ್ ಕೊಟ್ಟೆ. ರೈಲು, ಬಸ್‌ನಲ್ಲಿ ಹೋಗುವುದಕ್ಕೆ ವ್ಯವಸ್ಥೆ ಮಾಡಿದ್ದು, ಅವತ್ತು ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಆಕ್ಸಿಜನ್‌ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಿದ್ದೇವೆ ಎಮದು ಸೂಚಿಸಿದರು.

ಇದೇ ಸಮಯದಲ್ಲಿ ಮಾಜಿ ಸಿಎಂ ಸಿದ್ದು ಕುರಿತು ಮಾತನಾಡಿದ್ದಾರೆ. ಕೋವಿಡ್ ಕಾಲದಲ್ಲಿ ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಗಿತ್ತು ಅಂದು ನಾನು ಸಿದ್ದರಾಮಯ್ಯ ಅವರು ಸೇರಿ ಸಂಕಲ್ಪ ಮಾಡಿದ್ದೆವು. ಖರ್ಗೆ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ವೇಣುಗೋಪಾಲ್ ಅವರು ಪಕ್ಷದ ಕಾರ್ಯದರ್ಶಿಯಾಗಿ ಸಾಕ್ಷಿಯಾಗಿದ್ದರು.‌ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರು ನನಗೆ ಆಶೀರ್ವಾದ ಮಾಡಿದರು. ಶುಭ ಘಳಿಗೆಯಲ್ಲಿ ಅಂದು ನಾನು ಅಧಿಕಾರ ಸ್ವೀಕರಿಸಿದ್ದೆ ಎಂದು ಹಳೆಯ ಸನ್ನಿವೇಶಗಳನ್ನು ಡಿಕೆಶಿ ನೆನಸಿಕೊಂಡರು.

ಸಿದ್ದರಾಮಯ್ಯ ಕೊಟ್ಟ ಆಡಳಿತ ಇಡೀ ದೇಶಕ್ಕೆ ಒಂದು ಮಾದರಿಯಾಗಿದೆ. ಈಗ ಬಿಕೆ ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹರಿಪ್ರಸಾದ್ ಜತೆ ಇಡೀ ಸರ್ಕಾರ ಇರುತ್ತದೆ. 2028ರಲ್ಲಿ ಮತ್ತೊಮ್ಮೆ ನಾವು ಅಧಿಕಾರಕ್ಕೆ ಏರಬೇಕು ಎಂದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post