ಚಿಕ್ಕು ಮದುವೆ : ಮೈಸೂರು ಹುಡುಗ ಮಂಡ್ಯ ಹುಡುಗಿ ಲವ್‌ ಮಾರೇಜ್‌- ಶುಭ ಹಾರೈಸಿದ ಸಿನಿ ಮಂದಿ

ಅದ್ದೂರಿ ಆರತಕ್ಷೆಯಲ್ಲಿ ಮಿಂಚಿದ ಚಿಕ್ಕು ಮತ್ತು ಪಾವನ, ಹೌದು ಕೊನೆಗೂ ನಮ್ಮ ಕಾಮಿಡಿ ಸ್ಟಾರ್ ಚಿಕ್ಕಣ್ಣ ಮದುವೆಯಾಗಿದ್ದಾರೆ. ಮನ ಮೆಚ್ಚಿದ ಮಂಡ್ಯ ಹುಡುಗಿ ಪಾವನ ಅವರನ್ನು ಕೈ ಹಿಡಿದಿದ್ದಾರೆ.ಚಿಕ್ಕಣ್ಣನ ಹುಟ್ಟೂರಾದ ಮೈಸೂರಿನ ಮಹದೇವಪುರದಲ್ಲಿ ಹಲ್ದಿ ಮತ್ತು ಮೆಹಂದಿ ಸಮಾರಂಭಗಳಂತಹ ವಿವಾಹ ಪೂರ್ವ ಆಚರಣೆಗಳು ನಡೆದವು, ನಂತರ ಭವ್ಯವಾದ ಸ್ವಾಗತ ಮತ್ತು ವಿವಾಹ ಆಚರಣೆಗಳು ಜರುಗಿದೆ.

ಹಾಸ್ಯನಟ ಚಿಕ್ಕಣ್ಣ ಹಾಗೂ ಮಂಡ್ಯ ಮೂಲದ ಪಾವನಾ ಅವರ ವಿವಾಹ ಅದ್ಧೂರಿಯಾಗಿ ನೆರವೇರಿದೆ. ಇಂದು ಬೆಳಗ್ಗೆ 10.45 ರಿಂದ 11.25ರ ಶುಭಮುಹೂರ್ತದಲ್ಲಿ ತುಲಾ ಲಗ್ನದಲ್ಲಿ ಚಿಕ್ಕಣ್ಣ ಅವರು ಪಾವನಾ ಅವರ ಕೊರಳಿಗೆ ಮಾಂಗಲ್ಯಧಾರಣೆ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ವಿವಾಹ ಸಮಾರಂಭ ನೆರವೇರಿದ್ದು, ಚಿಕ್ಕಣ್ಣ–ಪಾವನಾ ಜೋಡಿಗೆ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಶುಭ ಹಾರೈಸಿದ್ದಾರೆ. ವಿವಾಹ ಸಂಭ್ರಮದಲ್ಲಿ ಸಾಕಷ್ಟು ರೀತಿ ಜನ ಸೇರಿದ್ದು ಸಿನಿ ಮಂದಿಯು ಸಹ ಭಾಗಿಯಾಗಿದ್ದರು.ಮೈಸೂರು ಹುಡುಗ ಮಂಡ್ಯ ಹುಡುಗಿಯ ಈ ಜೋಡಿಗೆ ಚಿತ್ರ ಲೋಕ ಶುಭ ಹಾರೈಸಿದೆ.

ಹಾಸ್ಯದ ಮೂಲಕ ಕನ್ನಡಿಗರ ಮನಗೆದ್ದ ಚಿಕ್ಕಣ್ಣ ಇದೀಗ ಪಾವನಾ ಅವರೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ. ನವದಂಪತಿಗೆ ಸಿನಿರಂಗ ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಇನ್ನೂ, ಚಿಕ್ಕಣ್ಣ ಅವರ ಮದುವೆಗೂ ಮುನ್ನ ನಿನ್ನೆ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಈ ಸಮಾರಂಭದಲ್ಲಿ ಡಾಲಿ ಧನಂಜಯ್, ತಾರಾ ಅನುರಾಧ, ಶ್ರೀಮುರಳಿ, ರಂಗಾಯಣ ರಘು, ಮೇಘನಾ ಗಾಂವ್ಕರ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others