ರಾಮಲೀಲಾ ಮೈದಾನದ ಜನಸಾಗರ ತೋರಿಸಲು ಕಾಂಗ್ರೆಸ್ AI ಫೋಟೋ ಬಳಕೆ- ಕಿರಣ್ ರಿಜಿಜು

ನವದೆಹಲಿ: ಇಂಡಿಯಾ ಒಕ್ಕೂಟದ Rallyಗೆ ‘ದೆಹಲಿಯ ರಾಮಲೀಲಾ ಮೈದಾನಕ್ಕೆ ಜನಸಾಗರವೇ ಹರಿದುಬಂದಿತು ಎಂದು ತೋರಿಸಲು ಕಾಂಗ್ರೆಸ್ ಪಕ್ಷ ಕೃತಕ ಬುದ್ಧಿಮತ್ತೆ ಫೋಟೋ ಬಳಸಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೇವಡಿ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಿಜಿಜು, Rally ಯಲ್ಲಿ ಜನಸಾಗರ ತೋರಿಸಲು ಬಯಸಿದ್ದ ಕಾಂಗ್ರೆಸ್ ಪಕ್ಷ, ಕನಿಷ್ಠಪಕ್ಷ ಆ AI ರಚಿತ ಫೋಟೋವನ್ನಾದರು ಸರಿಯಾಗಿ ಸಿದ್ಧಪಡಿಸಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ.

‘ಇಂಡಿಯಾ’ ಒಕ್ಕೂಟವು ಈ ಸಮಾವೇಶಕ್ಕೆ 10 ಲಕ್ಷ ಜನರು ಸೇರುತ್ತಾರೆ ಎಂದು ಹೇಳಿಕೊಂಡಿದ್ದನ್ನು ಪ್ರಶ್ನಿಸಿದ್ದ ಬಿಜೆಪಿ ಸಂಸದ ಸಂಬಿತ್ ಪಾತ್ರ, ಮೈದಾನದ ಗಮನಾರ್ಹ ಭಾಗವು ಖಾಲಿಯಾಗಿತ್ತು ಎಂದು ಆರೋಪಿಸಿದ್ದಾರೆ. ಮೈದಾನದಲ್ಲಿ ಹಾಕಲಾಗಿದ್ದ 28,000 ಕುರ್ಚಿಗಳ ಪೈಕಿ 5,000 ರಿಂದ 7,000 ಕುರ್ಚಿಗಳು ಮಧ್ಯಾಹ್ನ 3:30 ರಿಂದ 4 ಗಂಟೆಯ ನಡುವೆ ಖಾಲಿಯಾಗಿದ್ದವು ಎಂದು ಪಾತ್ರಾ ಹೇಳಿದ್ದಾರೆ. ಅಲ್ಲದೆ, ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಸುಮಾರು ಶೇಕಡಾ 40 ರಷ್ಟು ಭಾಗ ಖಾಲಿಯಾಗಿತ್ತು ಎಂದೂ ಅವರು ಆರೋಪಿಸಿದ್ದಾರೆ.

ರಾಮಲೀಲಾ ಮೈದಾನ ಜನರಿಂದ ತುಂಬಿತ್ತು ಎಂದು ತೋರಿಸಲು ಬಳಸಿದ ಆ ನಕಲಿ AI ಫೋಟೋವನ್ನು ಸಹ ಕಾಂಗ್ರೆಸ್ ಪಕ್ಷದ ‘ಸುಳ್ಳು ನಿರೂಪಣೆಗಳನ್ನು ಸೃಷ್ಟಿಸುವ ತಂಡ’ ಸರಿಯಾಗಿ ಮಾಡಿಲ್ಲ!” ಎಂದು ಅವರು ಬರೆದುಕೊಂಡಿದ್ದಾರೆ.

ಮತದಾರರ ಪಟ್ಟಿಗಳಲ್ಲಿನ ಅಕ್ರಮಗಳು ಮತ್ತು ‘ವಿಶೇಷ ತೀವ್ರ ಪರಿಷ್ಕರಣೆ’ ಪ್ರಕ್ರಿಯೆಯ ವಿರುದ್ಧ ಪ್ರತಿಭಟಿಸಲು ಈ rallyಯನ್ನು ಆಯೋಜಿಸಲಾಗಿತ್ತು. ಮಿಂಟೋ ರೋಡ್-ಕನ್ನಾಟ್ ಪ್ಲೇಸ್ ಜಂಕ್ಷನ್‌ನಿಂದ ಪ್ರಾರಂಭವಾದ ಈ ಮೆರವಣಿಗೆಯು ರಾಮ್‌ಲೀಲಾ ಮೈದಾನದ ಕಡೆಗೆ ಸಾಗಿತು. ಅಲ್ಲಿ ಸಾವಿರಾರು ಬೆಂಬಲಿಗರು ಜಮಾಯಿಸಿದ್ದರು.

Rally ಯಲ್ಲಿ ಸೇರಿದ ಜನರ ಸಂಖ್ಯೆಯ ಕುರಿತು ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದ ನಡೆಯುತ್ತಿರುವಾಗಲೇ ರಿಜಿಜು ಈ ಆರೋಪ ಮಾಡಿದ್ದಾರೆ.

ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ‘ಇಂಡಿಯಾ’ ಒಕ್ಕೂಟವು ನವೆಂಬರ್ 1 ರಂದು ರಾಮ್‌ಲೀಲಾ ಮೈದಾನದಲ್ಲಿ Rallyಯನ್ನು ಆಯೋಜಿಸಿತ್ತು. ಇದರಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದರು.

Share it :

Leave a Reply

Your email address will not be published. Required fields are marked *