ಪ್ರಿಯ ರಾಹುಲ್ ಗಾಂಧಿಯವರೇ, ದೂಷಿಸಲು ಇವಿಎಂ ಇಲ್ಲ, ಸರ್ಕಾರಿ ಯಂತ್ರ ನಿಮ್ಮ ಪಾರ್ಟಿಯ ಕೈಯಲ್ಲೇ ಇತ್ತು : ನಿಖಿಲ್ ಕುಮಾರಸ್ವಾಮಿ

ಬೆಂಗಳೂರು : ಕರ್ನಾಟಕದ ನಾಲ್ಕು ವಿಧಾನ ಪರಿಷತ್ ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ NDA ಮೈತ್ರಿಕೂಟದ ಅಭ್ಯರ್ಥಿ ಎಪಿ ರಂಗನಾಥ್ ಗೆಲುವನ್ನು ಸಾಧಿಸಿದ್ದಾರೆ. ಇದರ ಬೆನ್ನಲ್ಲೇ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಇದು ಬ್ಯಾಲಟ್ ಪೇಪರ್ ನಲ್ಲಿ ನಡೆದ ಚುನಾವಣೆ ಎಂದು ನಿಖಿಲ್ ಕುಮಾರಸ್ವಾಮಿ ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ. ಆಮೂಲಕ, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಇವಿಎಂ ಹ್ಯಾಕ್, ಜ್ಞಾನೇಶ್ ಕುಮಾರ್ ವಜಾಗೆ ಆಗ್ರಹಿಸುತ್ತಿರುವ ವಿಪಕ್ಷಗಳಿಗೆ ಪರೋಕ್ಷವಾಗಿ ನಿಖಿಲ್, ಟಾಂಗ್ ಕೊಟ್ಟಿದ್ದಾರೆ.

ಈ ಐತಿಹಾಸಿಕ ಗೆಲುವಿಗಾಗಿ ಅಹೋರಾತ್ರಿ ಶ್ರಮಿಸಿದ ಮೈತ್ರಿಕೂಟದ ಎರಡೂ ಪಕ್ಷಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಮುಖ್ಯವಾಗಿ NDA ಮೈತ್ರಿಕೂಟದ ಮೇಲೆ ನಂಬಿಕೆಯಿಟ್ಟು ಮತ ನೀಡಿದ ಗೌರವಾನ್ವಿತ ಶಿಕ್ಷಕರ ಸಮುದಾಯಕ್ಕೆ ನನ್ನ ಧನ್ಯವಾದಗಳು. ವಿಶೇಷವಾಗಿ, ಎರಡೂ ಪಕ್ಷಗಳ ಪ್ರತಿಯೊಬ್ಬ ಕಾರ್ಯಕರ್ತ ಬಂಧುಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ನಾವು ಎರಡೂ ಪಕ್ಷಗಳು ಒಂದಾಗಿ, ಹೆಗಲಿಗೆ ಹೆಗಲು ಕೊಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಕ್ಕೆ ಈ ಫಲಿತಾಂಶ ಲಭಿಸಿದೆ. ಕಾರ್ಯಕರ್ತರ ಈ ಅಪಾರ ಶ್ರಮ ಮತ್ತು ಒಗ್ಗಟ್ಟೇ ನಮ್ಮ ಗೆಲುವಿನ ನೈಜ ಶಕ್ತಿ ಎಂದು ನಿಖಿಲ್ ಕುಮಾರಸ್ವಾಮಿ ಖುಷಿ ವ್ಯಕ್ತ ಪಡಿಸಿದ್ದಾರೆ.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಎಪಿ ರಂಗನಾಥ್ ಗೆದ್ದ ಬೆನ್ನಲ್ಲೇ ರಾಹುಲ್ ಗಾಂಧಿ ಅವರನ್ನು ಸಂಬೋಧಿಸಿ ಟ್ವೀಟ್ ಮಾಡಿದ್ದಾರೆ. “ಪ್ರಿಯ ರಾಹುಲ್ ಗಾಂಧಿಯವರೇ, ದೂಷಿಸಲು ಇವಿಎಂ ಇಲ್ಲ, ಸರ್ಕಾರಿ ಯಂತ್ರ ನಿಮ್ಮ ಪಾರ್ಟಿಯ ಕೈಯಲ್ಲೇ ಇತ್ತು. ಚುನಾವಣೆಯು ಬ್ಯಾಲಟ್ ಪೇಪರ್’ಮೂಲಕವೇ ನಡೆಯಿತು.

ಆದರೂ, ಬೆಂಗಳೂರು ಶಿಕ್ಷಕ ಕ್ಷೇತ್ರದ MLC ಚುನಾವಣೆಯಲ್ಲಿ NDA ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ನಿಮ್ಮದೇ ಸರ್ಕಾರದ ಮೂಗಿನ ಕೆಳಗೆ, ಸುಶಿಕ್ಷಿತ ಶಿಕ್ಷಕರು ಬ್ಯಾಲಟ್ ಪೇಪರ್ ನಲ್ಲೇ ಮತ ಚಲಾಯಿಸಿರುವಾಗ, ಇವತ್ತಿನ ನೆಪವೇನು, ಬ್ಯಾಲಟ್ ಪೇಪರ್ ಕಳ್ಳತನವೇ ಎಂದು ನಿಖಿಲ್ ಪ್ರಶ್ನಿಸಿದ್ದಾರೆ.

Share it :

Leave a Reply

Your email address will not be published. Required fields are marked *