ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲವಾ? : ಕೆ. ಸುಧಾಕರ್

ಚಿಕ್ಕಬಳ್ಳಾಪುರ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಲಾಜಿಕ್ ಇಲ್ಲದೆ ಮ್ಯಾಜಿಕ್ ಮಾಡಲು ಹೊರಟಿದ್ದಾರೆ, ಸ್ಟಿಂಗ್ ಆಪರೇಷನ್ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಗದಾ ಪ್ರಹಾರ ನಡೆಸಲಾಗುತ್ತಿದೆ ಎಂದು ಸಂಸದ ಕೆ. ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಸುಧಾಕರ್ ಮಾಹಿತಿ ನೀಡಿದರು. ಮುಖಂಡ ಸಂದೀಪ್ ರೆಡ್ಡಿ ಅವರು ಸಹ ರಾಜ್ಯೋತ್ಸವದ ದಿನವೇ ‘ನಾರಿ ಸೇವಾ ನಮನ’ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಡಾ.ಕೆ.ಸುಧಾಕರ್, ನಾವು ಮಾಡುತ್ತಿರುವುದು ರಾಜ್ಯೋತ್ಸವ ಕಾರ್ಯಕ್ರಮ. ರಾಜ್ಯೋತ್ಸವ ಬೇರೆ ದಿನ ಮಾಡಲು ಸಾಧ್ಯವಿಲ್ಲ. ಕಾಕತಾಳಿಯ ಎನ್ನುವಂತೆ ಅಂದೇ ಅವರ ಕಾರ್ಯಕ್ರಮವೂ ಇದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಸಂದೀಪ್ ರೆಡ್ಡಿ ಅವರು ಬಿಜೆಪಿಯಲ್ಲಿ ಇದ್ದೇನೆ ಎಂದು ಹೇಳುತ್ತಾರೆ. ಆದರೆ ನಮ್ಮ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ ಎಂದರು.

ನನ್ನ ಬಳಿ ಸಾವಿರಾರು ಕೋಟಿ ಹಣವಿದ್ದರೆ ಶಿವಶಂಕರ ರೆಡ್ಡಿಯೇ ತೆಗೆದುಕೊಳ್ಳಲಿ. ಅವರಿಗೆ ವೈಯಕ್ತಿಕವಾಗಿ ಮಾತನಾಡಿ ಅಭ್ಯಾಸ. ಕಾನೂನಬದ್ದವಾಗಿ ನಾನು ಯಾವ ರೀತಿ ವಹಿವಾಟು ನಡೆಸಬೇಕೊ ಆ ರೀತಿ ವಹಿವಾಟು ನಡೆಸುತ್ತಿದ್ದೇನೆ. ಇವರು ಸಚಿವರಾಗಿದ್ದಾಗ ಏನು ಮಾಡಿದ್ದಾರೆ ಎನ್ನುವುದು ಗೊತ್ತು. ಈತ ಸಾಚ ಅಲ್ಲ. ಮನೆಯಲ್ಲಿ ಕೂರಿಸಿದ್ದೇವೆ. ಮುಂದೆಯೂ ಮನೆಯಲ್ಲಿಯೇ ಶಾಶ್ವತವಾಗಿ ಇರುತ್ತಾರೆ ಎಂದು ತಿಳಿಸಿದರು.

ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲವಾ? ಅವರ ಇತಿಹಾಸ ಇಡೀ ರಾಜ್ಯದ ಜನತೆಗೆ ತಿಳಿದಿದೆ. ಕುಮಾರಸ್ವಾಮಿಗೆ ಮತ್ತು ಸ್ಟಿಂಗ್ ಆಪರೇಷನ್ ಗೂ ಏನು ಸಂಬಂಧ, ನಿಮ್ಮ ಪಾಪದ ಕೊಡ ತುಂಬುತ್ತಿದೆ. ಇನ್ನೂ ಒಂದು ವರ್ಷ ತಡೆದುಕೊಳ್ಳಿ ಎಂದಿದ್ದಾರೆ.

ಡಾ. ಅಂಬೇಡ್ಕರ್ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಕಾನೂನು ಪಾಲಿಸುತ್ತಿಲ್ಲ, ನಿಮಗೆ ಹೇಗೆ ಬೇಕೋ ಹಾಗೆ ಕಾನೂನು ಮಾಡುತ್ತಿದ್ದಾರೆ. ಸ್ಟಿಂಗ್ ಯಾಕೆ ನಡೆಯುತ್ತಿದೆ, ಎಲ್ಲಿ ನಡೆಯಿತು ಯಾರು ಮಾಡಿದ್ದು ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಸ್ಟಿಂಗ್ ಆಪರೇಷನ್ ಮಾಡಿ ಸಿದ್ದರಾಮಯ್ಯ ಅವರ ಇಮೇಜ್ ಗೆ ಧಕ್ಕೆ ತರಲು ಪ್ರಯತ್ನಸುತ್ತಿರುವವರು ಯಾರು ಎಂಬುದನ್ನು ಪತ್ತೆ ಹೆಚ್ಚಬೇಕು ಎಂದು ಆಗ್ರಹಿಸಿದರು.

ಕೇಂದ್ರ ಮಂತ್ರಿ ಆದರೂ ಬಿಡೋದಿಲ್ಲ, ತಪ್ಪು ಮಾಡಿದ್ರೆ ಅವರನ್ನು ಒಳಗೆ ಹಾಕುತ್ತೇವೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಧಾಕರ್, ಅವರು ಹೇಳಿದ್ದು ಸರಿಯಾಗಿದೆ, ಕಾನೂನಿಗಿಂತ ಯಾರು ದೊಡ್ಡವರಲ್ಲ, ತಪ್ಪು ಮಾಡಿದ್ದರೆ ಕೇಂದ್ರ ಮಂತ್ರಿ. ಸಂಸದ ಹಾಗೂ ಸಿಎಂ ಅವರನ್ನು ಬಂಧಿಸಬಹುದು. ತಪ್ಪು ಮಾಡಿದ್ರೆ ಇದೇ ಪ್ರಿಯಾಂಕ್ ಖರ್ಗೆ ಅವರನ್ನು ಸಹ ಒಳಗೆ ಹಾಕಬಹುದು ಎಂದು ಟಾಂಗ್ ನೀಡಿದರು.

Share it :

Leave a Reply

Your email address will not be published. Required fields are marked *