Donald Trump :ಇರಾನ್‌ಗೆ ಸಹಾಯ ಮಾಡುವ ಮತ್ತು ವ್ಯವಹರಿಸುವ ಯಾವುದೇ ದೇಶಕ್ಕೆ ಅಗಾಧ ಆರ್ಥಿಕ ಶಿಕ್ಷೆ- ಟ್ರಂಪ್‌ ಎಚ್ಚರಿಕೆ

ವಾಷಿಂಗ್ಟನ್: ಇರಾನ್‌ ಮತ್ತು ಅಮೆರಿಕ ಯುದ್ಧ ಸ್ಥಿತಿ ಮತ್ತೇ ವಾಗ್ದಾಳಿ ಮೂಲಕ ಮುಂದುವರಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧವು 6ನೇ ತಿಂಗಳಿಗೆ ಸಮೀಪಿಸುತ್ತಿದ್ದು, ಇರಾನ್‌ಗೆ ಸಹಾಯ ಮಾಡುವ ಮತ್ತು ವ್ಯವಹರಿಸುವ ಯಾವುದೇ ದೇಶಕ್ಕೆ ಅಗಾಧ ಆರ್ಥಿಕ ಶಿಕ್ಷೆ ವಿಧಿಸುವುದಾಗಿ ಟ್ರಂಪ್‌ ಎಚ್ಚರಿಸು ಮಾಹಿತಿ ಬೆಳಕಿಗೆ ಬಂದಿದೆ.

ಇರಾನ್‌ಗೆ (Iran) ಸಹಾಯ ಮಾಡುವ ಅಥವಾ ಅದರ ಜೊತೆ ವ್ಯವಹಾರ ನಡೆಸುವ ದೇಶಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರ್ಥಿಕ ಬೆದರಿಕೆ ಒಡ್ಡಿದ್ದಾರೆ.

ದುರಂತವೆಂದರೆ, ಅವರು ಅದನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ, ಇಂದು ನಾನು ಯಾವುದೇ ದೇಶದ ವಿರುದ್ಧ ಇದುವರೆಗೆ ತೆಗೆದುಕೊಂಡ ಅತ್ಯಂತ ಕ್ರೂರ ಆರ್ಥಿಕ ಕಾರ್ಯಾಚರಣೆಯನ್ನು ಘೋಷಿಸುತ್ತಿದ್ದೇನೆ. ಇದು ಅಭೂತಪೂರ್ವ ಪ್ರಮಾಣದಲ್ಲಿ ಆರ್ಥಿಕ ಯುದ್ಧ, ಇಸ್ಲಾಮಿಕ್ ಗಣರಾಜ್ಯ ಇರಾನ್‌ಗೆ ಒಪ್ಪಂದ ಮಾಡಿಕೊಳ್ಳಲು ನನ್ನಷ್ಟು ದೊಡ್ಡ ಅವಕಾಶವನ್ನು ಯಾರೂ ನೀಡಿಲ್ಲ.ಎಂದು ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ಫೆಬ್ರವರಿಯಲ್ಲಿ ಯುದ್ಧ ಪ್ರಾರಂಭವಾಗುವ ಮೊದಲು, ಚೀನಾ, ಭಾರತ, ಟರ್ಕಿ, ಜರ್ಮನಿ, ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳು ಇರಾನ್‌ನ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿವೆ.

ತೈಲ ಕಳ್ಳಸಾಗಣೆ, ವಿನಿಮಯ ಮಾರ್ಗಗಳು, ನಗದು ವರ್ಗಾವಣೆ, ವಿನಿಮಯ ಕೇಂದ್ರಗಳು, ಹಡಗು ನೋಂದಣಿ ಇವೆಲ್ಲವನ್ನೂ ಈಗಲೇ ನಿಲ್ಲಿಸಬೇಕಾಗಿದೆ ಎಂದು ಇರಾನ್‌ ಜೊತೆ ವ್ಯವಹರಿಸುವ ದೇಶಗಳಿಗೆ ಟ್ರಂಪ್‌ ಖಡಕ್‌ ಸೂಚನೆ ಕೊಟ್ಟಿದ್ದಾರೆ.

ಯಾವುದೇ ದೇಶವು ತನ್ನ ಹಣಕಾಸು ಸಂಸ್ಥೆಗಳು, ವ್ಯವಹಾರಗಳು, ವಿಮಾನ ನಿಲ್ದಾಣಗಳು ಅಥವಾ ಸರ್ಕಾರಿ ಘಟಕಗಳು ಇರಾನ್‌ಗೆ ಯಾವುದೇ ರೀತಿಯ ಜೀವರಕ್ಷಕ ವ್ಯವಸ್ಥೆಯನ್ನು ಒದಗಿಸಲು ಅನುಮತಿಸಿದರೆ, ಅದು ಸ್ವತಃ ತೀವ್ರ ಆರ್ಥಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನಾನು ಘೋಷಿಸುತ್ತಿದ್ದೇನೆ ಎಂದಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others