ಬೆಂಗಳೂರು: ಆಗಸ್ಟ್ 28ರ ಒಳಗೆ ಬಾಕಿ ಇರೋ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ ಮಾಡೋದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಬಲ್ಕಿಸ್ ಬಾನು ಪ್ರಶ್ನೆಯೊಂದನ್ನು ಮಾಡಿದ್ದರು. ಇವರೆಗೂ 100% ಶೂ, ಸಾಕ್ಸ್ ವಿತರಣೆ ಆಗಿಲ್ಲ. 16 ಲಕ್ಷ ವಿದ್ಯಾರ್ಥಿಗಳಿಗೆ ಇನ್ನು ಶೂ, ಸಾಕ್ಸ್ ಕೊಟ್ಟಿಲ್ಲ. ಟೆಂಡರ್ ಪಡೆದಿರೋರು ಶೂ ಸಾಕ್ಸ್ ಕೊಟ್ಟಿಲ್ಲ.ಶಾಲೆ ಜೂನ್ನಲ್ಲಿ ಪ್ರಾರಂಭ ಆಗಿದೆ.
ಶಾಲೆಗೆ ಮಕ್ಕಳು ಜಾಸ್ತಿ ಬರುವಂತೆ ಮಾಡಲು ಸರ್ಕಾರ ಶೂ, ಸಾಕ್ಸ್ ಕೊಡ್ತಾ ಇದ್ದೇವೆ. ಇನ್ನು 100% ವಿತರಣೆ ಆಗಿಲ್ಲ. ಇದರ ಬಗ್ಗೆ ಕ್ರಮ ಆಗಬೇಕು. ಟೆಂಡರ್ ದಾರನ ಮೇಲೆ ಕ್ರಮ ಆಗಬೇಕು. ಇಂಡೆಂಟ್ ಕೊಡದ ಅಧಿಕಾರಿಗಳ ವಿರುದ್ದ ಕ್ರಮ ಆಗಬೇಕು ಅಂತ ಹೇಳಿದ್ದಾರೆ.
ಈ ವಿಚಾರಕ್ಕೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇಂಡೆಂಟ್ ಕೊಡೋದು ತಪ್ಪು ಮಾಡ್ತಾರೆ. ಹೀಗಾಗಿ ಸಮಸ್ಯೆ ಆಗಿದೆ. ಆಗಸ್ಟ್ 28ರ ಒಳಗೆ ರಾಜ್ಯಾದ್ಯಂತ ಎಲ್ಲಾ ಶಾಲೆಗೂ ಬಾಕಿ ಶೂ ಸಾಕ್ಸ್ ವಿತರಣೆ ಮಾಡ್ತೀವಿ ಎಂದರು.
ಹಿಂದಿನ ಸರ್ಕಾರಗಳಲ್ಲಿ ಜನವರಿ ಆದ್ರೂ ಶೂ,ರಾಜ್ಯ ಮಟ್ಟದಲ್ಲಿ ಇದನ್ನ ಮಾಡಿರೋದ್ರೀಂದ ಸ್ವಲ್ಪ ಸಮಯ ಆಗಿದೆ. ಶಾಲಾ ಹಂತದಲ್ಲಿ ಶೂ ಸೈಜ್ ಕೊಡೋದು ತಡವಾದಾಗ ಸಮಸ್ಯೆ ಆಗುತ್ತದೆ. ಮುಂದಿನ ವರ್ಷದಿಂದ ಸಮಸ್ಯೆ ಇಲ್ಲದಂತೆ ಶೂ, ಸಾಕ್ಸ್ ಕೊಡ್ತೀವಿ ಎಂದು ಹೇಳಿದ್ದಾರೆ.
104 ಕೋಟಿ ಹಣ ಬಾಕಿ ಇದೆ. ಆದಷ್ಟು ಬೇಗ ಶೂ, ಸಾಕ್ಸ್ ವಿತರಣೆ ಮಾಡ್ತೀವಿ. ಶೂ, ಸಾಕ್ಸ್ ವಿತರಣೆಗೆ ನೋಡಲ್ ಆಫೀಸ್ ಇಟ್ಟು ಸಮಸ್ಯೆಯನ್ನ ಸರಿ ಮಾಡ್ತೀವಿ ಅಂತ ಭರವಸೆ ನೀಡಿದ್ರು.
ಸಾಕ್ಸ್ ಕೊಡ್ತಾ ಇರಲಿಲ್ಲ. ಜೊತೆಗೆ ಕ್ವಾಲಿಟಿ ಶೂ, ಸಾಕ್ಸ್ ಕೊಡ್ತಾ ಇರಲಿಲ್ಲ. ನಾವು ಬಂದ ಮೇಲೆ ಕ್ವಾಲಿಟಿ ಶೂ, ಸಾಕ್ಸ್ ಕೊಡ್ತಾ ಇದ್ದೇವೆ. ಈ ವರ್ಷ ರಾಜ್ಯ ಮಟ್ಟದ ಟೆಂಡರ್ ಕೊಡಲಾಗಿದೆ. ಟೆಂಡರ್ ಅವರು ತಡ ಮಾಡಿರೋದಕ್ಕೆ ಅವರಿಗೆ ಫೈನ್ ಹಾಕಿದ್ದೇವೆ ಎಂದು ಹೇಳಿದ್ದಾರೆ.





