ಭಾರತೀಯ ಸೇನೆ ಅಗ್ನಿಪತ್ ಯೋಜನೆ ಅಡಿಯಲ್ಲಿ, ಅಗ್ನಿವೀರ ಸೈನಿಕನಾದ ಹಿರೇ ಹೆಗ್ಡಾಳ್ ಗ್ರಾಮದ ಯುವಕ

ವಿಜಯನಗರ ಜಿಲ್ಲೆ ಕೂಡ್ಲಿಗಿ : ಭಾರತೀಯ ಸೇನೆ ಅಗ್ನಿಪತ್ ಯೋಜನೆ ಅಡಿಯಲ್ಲಿ , ಅಗ್ನಿವೀರ ಸೈನಿಕನಾಗಿ , ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮದ ಯುವಕ ಕೆ.ಅಜಯ್ ಕುಮಾರ್ ನೇಮಕವಾಗಿದ್ದು. ಸ್ವಗ್ರಾಮದಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿದೆ , ನೇಮಕವಾದ ನಂತರ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ ಸೇನಿಕನಿಗೆ. ತನ್ನೂರಲ್ಲಿ ಭವ್ಯ ಸ್ವಾಗತ ಮಾಡಿದ್ದು , ಗ್ರಾಮಸ್ಥರಿಂದ ಭಾರೀ ಅದ್ಡೂರಿ ಮೆರವಣಿಗೆ ಜರುಗಿತು. ಗ್ರಾಮದ ಯುವಕರಲ್ಲಿ ಸಂಚಲನ ಮೂಡಿಸಿದೆ , ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದ್ದು ಕುಣಿದು ಕುಪ್ಪಳಿಸಿ ವಾದ್ಯವೃಂಧಗಳ ಮೂಲಕ ಮೆರವಣಿಗೆ ಮಾಡಿ ಹರ್ಷ ವ್ಯೆಕ್ತಪಡಿಸಿದ್ದಾರೆ.

ಭಾರತೀಯ ಸೇನೆಯ ಅಗ್ನಿಪತ್ ಯೋಜನೆ ಅಡಿಯಲ್ಲಿ , ಅಗ್ನಿವೀರ ಸೈನಿಕನಾಗಿ ಆಯ್ಕೆಯಾಗಿರುವ ಈ ಯುವಕ. ಗ್ರಾಮದ ಕುಂಬಾರ ದೇವಿರಮ್ಮ ಕೊಟ್ರೇಶ್ ದಂಪತಿಗಳ ಪುತ್ರನಾಗಿದ್ದು , ತಮ್ಮ ಮಗ ಕೆ. ಅಜಯ್ ಕುಮಾರ್ ಭಾರತೀಯ ಸೇನೆಯಲ್ಲಿ. ಅಗ್ನಿಪತ್ ಯೋಜನೆ ಅಡಿಯಲ್ಲಿ ಅಗ್ನಿವೀರ ಸೈನಿಕನಾಗಿ ಆಯ್ಕೆಯಾಗಿದ್ದು , ತಮಗೆ ಅತೀವ ಸಂತಸ ತಂದಿದೆ ಎಂದು ಅಜಯ ರವರ ಪೋಷಕರು ಹಾಗೂ ಕುಟುಂಬ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ನೇಮಕವಾದ ನಂತರದಲ್ಲಿ ಮೊದಲ ಭಾರಿ ಗ್ರಾಮಕ್ಕೆ ಆಗಮಿಸಿದ್ದ ಕೆ.ಅಜಯ್ ಕುಮಾರಗೆ , ಅದ್ದೂರಿಯಾಗಿ ವಾದ್ಯಗಳ ಮೊಳಗಿಸಿ ಮೆರವಣಿಗೆ ಮುಖಾಂತರ ಅಭಿನಂದನೆ ಸಲ್ಲಿಸಿ ಸಂಭ್ರಮಿಸಿದರು. ಅವರ ಆಗಮನದಿಂದಾಗಿ ಗ್ರಾಮದ ಯುವಕರಲ್ಲಿ , ವಿನೂತನವಾದ ಚೈತನ್ಯದ ಚಿಲುಮೆ ಉದ್ಭಬಿಸಿದೆ. ಯುವಕರು ಕುಣಿದು ಕುಪ್ಪಳಿಸಿದ್ದು , ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಯುವಕರ ದಂಡು ಅಜಯಕುಮಾರರ ಸ್ನೇಹಿತರು ಸಂಬಂಧಿಗಳು ಸಹಪಾಟಿಗಳು , ಗ್ರಾಮದ ಮದ್ಯಭಾಗದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ

. ಗ್ರಾಮದ ಶ್ರೀ ಕೋಡಿಬಸವೇಶ್ವರನ ದೇವಸ್ಥಾಧ ಆವರಣದಲ್ಲಿ , ಸಂಭ್ರಮದ ಕಅಭಿನಂದನಾ ಕಾರ್ಯಕ್ರಮ ಆಯೋಜಿದ್ದರು. ಸೈನಿಕ ಕೆ.ಅಜಯಕುಮಾರ್ ದೇವರ ದರ್ಶನ ಪಡೆದು , ಯುವಕರು ಮಹಿಳೆಯರು ಪಾಲ್ಗೊಂಡಿದ್ದ ಅದ್ದೂರಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಊರಿನ ಹಿರಿಯರು ಅಜಯ್ ಕುಮಾರ್ ರವರ ಸ್ನೇಹಿತರು , ಗ್ರಾಮಸ್ಥರೆಲ್ಲರೂ ಸೇರಿ ಸೌಹಾರ್ಧತೆಯಿಂದ ಸ್ವಯಂ ಪ್ರೇರಣೆಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮದ ಮಹಿಳೆಯರು ಮುತ್ತೈದೆಯರು ಸಾಮೂಹಿಕವಾಗಿ ಕಳಸ ಹಿಡಿದುಕೊಂಡು , ಶ್ರೀ ಕೋಡಿ ಬಸವೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಕೆ.ಅಜಯ್ ಕುಮಾರ್ ಗೆ ಕಳಸ ಬೆಳಗಿ ಹರಸಿ ಅಭಿನಂದಿಸಿ ಹಾರೈಸಿದರು.

ಹೀರೇಹೆಗ್ಡಾಳ್ ಗ್ರಾಮದ ಸಕಲ ಗ್ರಾಮಸ್ಥರು ಯುವ ಪ್ರತಿಭೆ ಅಗ್ನಿವೀರ್ ಸೈನಿಕ ಕೆ.ಅಜಯ್ ಕುಮಾರ್ ಗೆ , ಸಮಸ್ತ ಗ್ರಾಮಸ್ಥರು ಅಭಿನಂದಿಸಿ ಗೌರವ ಸನ್ಮಾನ ಮಾಡಿ ಶುಭ ಹಾರೈಸಿದ್ದಾರೆ. ಗ್ರಾಮದ ಹಿರಿಯರು ಮುಖಂಡರು ಯುವಕರು ಜನಪ್ರತಿನಿಧಿಗಳು , ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದೆನೆಗಳನ್ನು ಸಲ್ಲಿಸಿದ್ದಾರೆ. ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ನಿರ್ನಾಣವಾಗಿದ್ದು , ಸಿಹಿ ಖಾದ್ಯದೊಂದಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post