ಇಂಡಿಯಾ,ಅಫ್ಘಾನಿಸ್ತಾನ ಮಧ್ಯೆ ೩ ಪಂದ್ಯ ಏಕದಿನ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಚೆನ್ನೈನಲ್ಲಿ ನಡೆಯಿತು. ಪಂದ್ಯದಲ್ಲಿ ಆಟದಲ್ಲಿ ಅಫ್ಘಾನಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಅಫ್ಘಾನಿಸ್ತಾನ 2-0 ಅಂತರದಲ್ಲಿ ಸರಣಿ ಕಳೆದುಕೊಂಡಿತ್ತು.
ಈ ಕಾರಣಕ್ಕೆ ಮೂರನೇ ಪಂದ್ಯ ಗೆದ್ದು ವೈಟ್ ವಾಶ್ ಮುಖಭಂಗದಿಂದ ಪಾರಾಗುವ ಸಲುವಾಗಿ ಅಫ್ಘನ್ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು.ಇತ್ತ ಚಿದಂಬರಂ ಮೈದಾನದಲ್ಲಿ ಅಫ್ಘನ್ ಬ್ಯಾಟಿಂಗ್ ವಿಭಾಗವನ್ನು ಕಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಪವರ್ ಪ್ಲೇ ಮುಗಿಯುವುದಕ್ಕೂ ಮುನ್ನವೇ ಪ್ರಮುಖ 4 ವಿಕೆಟ್ ಭಾರಿಸುವಲ್ಲಿ ಮುಂದಾಗಿದ್ದಾರೆ.
ಪವರ್ ಪ್ಲೇನಲ್ಲಿ ಅಂದರೆ ಮೊದಲ 10 ಓವರ್ಗಳಲ್ಲಿ 5 ಓವರ್ಗಳನ್ನು ಬೌಲ್ ಮಾಡಿದ ಪ್ರಸಿದ್ಧ್ ಕೃಷ್ಣ ಕೇವಲ 6 ರನ್ ನೀಡಿ ಪ್ರಮುಖ 4 ವಿಕೆಟ್ ಹೊಡೆದರು. ಪ್ರಸಿದ್ಧ್ ಬೌಲ್ ಮಾಡಿದ ಈ 5 ಓವರ್ಗಳಲ್ಲಿ 2 ಓವರ್ಗಳು ಮೇಡನ್ ಆಗಿದ್ದವು. ಪ್ರಸಿದ್ಧ್ ಮಾರಕ ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ ತಂಡ ಮೊದಲ 10 ಓವರ್ಗಳಲ್ಲಿ ಕೇವಲ 37 ರನ್ ಕಲೆಹಾಕಲಷ್ಟೇ ಆಗಿತ್ತು.
ತಂಡದ ನಾಲ್ಕು ಜನ ಅಗ್ರ ಬ್ಯಾಟ್ಸ್ಮನ್ಗಳಲ್ಲಿ ಮೂವರು ಆಟಗಾರರು ಒಂದಂಕಿಗೆ ವಿಕೆಟ್ ಒಪ್ಪಿಸಿದರೆ, ಒಬ್ಬ ಬ್ಯಾಟ್ಸ್‌ಮನ್ ಮಾತ್ರ 11 ರನ್ ಕಲೆಹಾಕಿ ಎರಡಂಕಿ ಮೊತ್ತ ಮಿರಿಸಿದ್ದರು. ಒಟ್ಟಿನಲ್ಲಿ ಕನ್ನಡಿಗ ಪ್ರಸಿದ್ಧ್ ಅಬ್ಬರಕ್ಕೆ ಅಫ್ಘನ್ ನೆಲಕಚ್ಚಿತ್ತು ಎನ್ನಬಹುದು.





