ಭಾರತ ಮತ್ತು ಸೀಶೆಲ್ಸ್ ನಡುವಿನ ಸಂಬಂಧ ಚಟ್ನಿ, ಸಮೋಸಾಗೆ ಸಾಕ್ಷಿ : ಪ್ರಧಾನಿ ನರೇಂದ್ರ ಮೋದಿ

 PM Narendra Modi

ವಿಕ್ಟೋರಿಯಾ : ಭಾರತ ಪ್ರಧಾನಿ ನರೇಂದ್ರ ಮೋದಿಯವರು ದೇಶ-ವಿದೇಶಗಳ ಮಟ್ಟದಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಪ್ರವಾಸ ಮಾಡುತ್ತಲೇ ಇರುತ್ತಾರೆ. ಅಲ್ಲದೇ ಕೆಲವೊಮ್ಮೆ ವಿದೇಶಿಗರ ಮನಸ್ಸನ್ನು ಗೆಲ್ಲುವಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. ಸದ್ಯಕ್ಕೆ ಮೋದಿ ಸೀಶೇಲ್ಸ್‌ ದೇಶವನ್ನು ಹಾಡಿ ಹೊಗಳಿದ್ದಾರೆ.

ಭಾರತ ಮತ್ತು ಸೀಶೆಲ್ಸ್ ನಡುವಿನ ಸಂಬಂಧ ಕೇವಲ ರಾಜತಾಂತ್ರಿಕ ಮಟ್ಟಕ್ಕೆ ಸೀಮಿತವಾಗಿಲ್ಲ. ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧ ಚಟ್ನಿ ಮತ್ತು ಸಮೋಸಾಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸೀಶೆಲ್ಸ್‌ನ ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೂಲಸೌಕರ್ಯ ಅಭಿವೃದ್ಧಿ, ರಕ್ಷಣಾ ಸಹಕಾರ, ತಾಂತ್ರಿಕ ನೆರವು, ಸಾಲ ಸೌಲಭ್ಯ ಹಾಗೂ ಅನುದಾನದ ಮೂಲಕ ಭಾರತ, ಸೆಶೆಲ್ಸ್‌ನ ಪ್ರಮುಖ ಅಭಿವೃದ್ಧಿ ಪಾಲುದಾರ ದೇಶವಾಗಿದೆ. ಭಾರತ ಮತ್ತು ಸೀಶೆಲ್ಸ್ ನಡುವೆ ಸಮುದ್ರ ಭದ್ರತೆ, ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಯೋಜನೆಗಳು, ಕೌಶಲ್ಯ ಅಭಿವೃದ್ಧಿ ಹಾಗೂ ಹವಾಮಾನ ಬದಲಾವಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉತ್ತಮ ಸಹಕಾರವಿದೆ ಎಂದರು.

ಭಾರತೀಯ ಮಹಾಸಾಗರ ಪ್ರದೇಶದ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತ ಕಾರ್ಯನಿರ್ವಹಿಸುತ್ತಿದ್ದು, ಸೀಶೆಲ್ಸ್ ಪ್ರಮುಖ ಕಾರ್ಯತಂತ್ರದ ಹಾಗೂ ಸಾಂಸ್ಕೃತಿಕ ಪಾಲುದಾರ ರಾಷ್ಟ್ರವಾಗಿದೆ. ಎರಡೂ ದೇಶಗಳ ಸ್ನೇಹದಲ್ಲಿ ಭಾರತೀಯ ಸಮುದಾಯ, ಆಹಾರ ಪದ್ಧತಿ ಹಾಗೂ ಸಾಂಸ್ಕೃತಿಕ ಪರಂಪರೆ ಪ್ರಮುಖ ಸೇತುವೆಯಾಗಿ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತ ಮತ್ತು ಸೀಶೆಲ್ಸ್ ನಡುವಿನ ಸಂಬಂಧದ ಬಗ್ಗೆ ವಿವರಿಸಿದರು. ಸೀಶೆಲ್ಸ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಸಮುದಾಯದ ಮೂಲಕ ಭಾರತದ ಆಹಾರ ಸಂಸ್ಕೃತಿ ಅಲ್ಲಿಗೂ ತಲುಪಿದೆ. ಚಟ್ನಿ ಮತ್ತು ಸಮೋಸಾದಂತಹ ಭಾರತೀಯ ಆಹಾರಗಳು ಎರಡೂ ದೇಶಗಳ ಹಂಚಿಕೊಂಡಿರುವ ಸಂಸ್ಕೃತಿ ಹಾಗೂ ಜನರ ನಡುವಿನ ಸ್ನೇಹದ ಸಂಕೇತವಾಗಿವೆ ಎಂದು ತಿಳಿಸಿದ್ದಾರೆ.

Share it :

Leave a Reply

Your email address will not be published. Required fields are marked *