ಚಂದ್ರನಿಂದ ಸೂರ್ಯನವರೆಗೆ ಭಾರತದ ಕೀರ್ತಿ ಪತಾಕೆ : L೧ ಎಂದರೇನು? ಆದಿತ್ಯ ಎಂದರೇನು? ಇಲ್ಲಿದೆ ನೋಡಿ

ಸೆಪ್ಟೆಂಬರ್ 2, 2023 ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಚಿರಸ್ಥಾಯಿಯಾದ ದಿನ.ಚಂದ್ರಯಾನ-3 ರ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಸಿದ ಖುಷಿ ಮಾಸುವ ಮುನ್ನವೇ ಇಸ್ರೋ ಸೂರ್ಯನತ್ತ ನೆಗೆದಿತ್ತು.ಭಾರತದ ಮೊದಲ ಸೌರ ವೀಕ್ಷಣಾಲಯ ಆದಿತ್ಯ-L1 ಅನ್ನು 2 ಸೆಪ್ಟೆಂಬರ್ 2023ರಂದು ಬೆಳಿಗ್ಗೆ 11:50 IST ಗೆ PSLV-XL C57 ರಾಕೆಟ್ ಮೂಲಕ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಇದನ್ನು ಇಸ್ರೋದ ವರ್ಕ್‌ಹಾರ್ಸ್ ಎನ್ನಲಾಗುವ 44.4 ಮೀಟರ್ ಎತ್ತರದ PSLV ರಾಕೆಟ್ ಹೊತ್ತೊಯ್ದಿತ್ತು.

ಉಡಾವಣೆಯಾದ ಸುಮಾರು ಒಂದು ಗಂಟೆಯ ನಂತರ ಅದು ಭೂಮಿಯ ಕಕ್ಷೆಯನ್ನು ಸೇರಿತು. ನಂತರ 16 ದಿನಗಳ ಕಾಲ ಭೂಮಿಯ ಸುತ್ತ 5 ಕಕ್ಷೆ ಏರಿಕೆ ಕುಶಲತೆಗಳನ್ನು ಮಾಡಿ, 125 ದಿನಗಳ ಸುದೀರ್ಘ ಪಯಣದ ಬಳಿಕ ಅದು ತನ್ನ ಗುರಿ ತಲುಪಿತು. ಆದಿತ್ಯ-L1 6 ಜನವರಿ 2024ರಂದು ಸಂಜೆ 4:17ಕ್ಕೆ L1 ಪಾಯಿಂಟ್ ನಲ್ಲಿ ಯಶಸ್ವಿಯಾಗಿ ನೆಲೆಯೂರಿತು.

L1 ಎಂದರೇನು? ಆದಿತ್ಯ ಎಂದರೇನು? : ಆದಿತ್ಯ ಎಂದರೆ ಸಂಸ್ಕೃತದಲ್ಲಿ ಸೂರ್ಯ. L1 ಎಂದರೆ ಲಾಗ್ರಾಂಜ್ ಪಾಯಿಂಟ್ 1. ಭೂಮಿ ಮತ್ತು ಸೂರ್ಯನ ನಡುವೆ ಗುರುತ್ವಾಕರ್ಷಣೆ ಸಮತೋಲನವಾಗುವ 5 ಸ್ಥಳಗಳಿವೆ, ಅವುಗಳಿಗೆ ಲಾಗ್ರಾಂಜ್ ಪಾಯಿಂಟ್ಸ್ ಎನ್ನುತ್ತಾರೆ. ಆದಿತ್ಯ ಇರುವುದು ಮೊದಲ ಪಾಯಿಂಟ್ ನಲ್ಲಿ.

ಇದು ಭೂಮಿಯಿಂದ ಸೂರ್ಯನತ್ತ ಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿ ಹಾಲೋ ಕಕ್ಷೆಯಲ್ಲಿ ಸುತ್ತುತ್ತದೆ. ಇದು ಭೂಮಿ-ಸೂರ್ಯನ ಅಂತರದ ಕೇವಲ 1% ಮಾತ್ರ. ಈ ಹಾಲೋ ಕಕ್ಷೆಯಲ್ಲಿ ಇರಿಸಿದ ಉಪಗ್ರಹಕ್ಕೆ ನಿರಂತರವಾಗಿ ಯಾವುದೇ ಗ್ರಹಣವಿಲ್ಲದೆ ಸೂರ್ಯನನ್ನು ನೋಡುವ ಪ್ರಮುಖ ಲಾಭವಿದೆ. ಇದರಿಂದ ಸೌರ ಚಟುವಟಿಕೆ ಮತ್ತು ಅದರ ಬಾಹ್ಯಾಕಾಶ ಹವಾಮಾನದ ಮೇಲಿನ ಪರಿಣಾಮವನ್ನು ನೈಜ ಸಮಯದಲ್ಲಿ ಗಮನಿಸಬಹುದು.
ಅದೇ ಕಾರಣಕ್ಕೆ “L1 ಪಾಯಿಂಟ್ ಸುತ್ತಲಿನ ಹಾಲೋ ಕಕ್ಷೆಯಲ್ಲಿರುವ ಉಪಗ್ರಹವು ಯಾವುದೇ ಮರೆಮಾಚುವಿಕೆ/ಗ್ರಹಣಗಳಿಲ್ಲದೆ ನಿರಂತರವಾಗಿ ಸೂರ್ಯನನ್ನು ವೀಕ್ಷಿಸುವ ಪ್ರಮುಖ ಪ್ರಯೋಜನವನ್ನು ಹೊಂದಿದೆ” ಎಂದು ಇಸ್ರೋ ಹೇಳಿದೆ.

ವಿಶ್ವದಲ್ಲೇ 5ನೇ, ಏಷ್ಯಾದಲ್ಲಿ ಮೊದಲು:ಇಸ್ರೋ ಪ್ರಕಾರ, ಆದಿತ್ಯ-L1 ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯವಾಗಿದೆ. ಇದಕ್ಕೂ ಮೊದಲು ಅಮೆರಿಕದ ನಾಸಾ, ಯುರೋಪಿನ ESA ಮಾತ್ರ ಸೌರ ಮಿಷನ್ ಮಾಡಿದ್ದವು. ಭಾರತ 5ನೇ ದೇಶ. ಈ ನೌಕೆಯಲ್ಲಿ 7 ಅತ್ಯಾಧುನಿಕ ಪೇಲೋಡ್ ಗಳಿವೆ. “ಇದು ಸೂರ್ಯನ ವಿವರವಾದ ಅಧ್ಯಯನಕ್ಕಾಗಿ 7 ವಿಭಿನ್ನ ಪೇಲೋಡ್‌ಗಳನ್ನು ಹೊತ್ತೊಯ್ಯುತ್ತದೆ, ಅವುಗಳಲ್ಲಿ ನಾಲ್ಕು ಸೂರ್ಯನಿಂದ ಬರುವ ಬೆಳಕನ್ನು ಗಮನಿಸುತ್ತವೆ ಮತ್ತು ಇತರ ಮೂರು ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ನಿಯತಾಂಕಗಳನ್ನು ಅಳೆಯುತ್ತವೆ”.

ಇದರಲ್ಲಿ ಪ್ರಮುಖವಾದ್ದು VELC – Visible Emission Line Coronagraph. ಇದು ಸೂರ್ಯನ ಹೊರ ವಾತಾವರಣವಾದ ಕರೋನಾವನ್ನು ದಿನಕ್ಕೆ 1440 ಫೋಟೋಗಳನ್ನು ತೆಗೆದು ಕಳುಹಿಸುತ್ತದೆ. SUIT, SoLEXS, HEL1OS ಸೌರ ಜ್ವಾಲೆಗಳನ್ನು ಅಧ್ಯಯನ ಮಾಡುತ್ತಿವೆ.

ನಮಗೆ ಏನು ಉಪಯೋಗ? :ಸೂರ್ಯನಲ್ಲಿ ಸ್ಫೋಟವಾದಾಗ ಹೊರಬರುವ ಸೌರ ಮಾರುತಗಳು ಭೂಮಿಯ 50ಕ್ಕೂ ಹೆಚ್ಚು ಉಪಗ್ರಹಗಳು, GPS, ವಿಮಾನಯಾನ, ವಿದ್ಯುತ್ ಗ್ರಿಡ್ ಗಳನ್ನು ಹಾಳು ಮಾಡಬಹುದು. ಆದಿತ್ಯ-L1 ಇದನ್ನು 2 ದಿನ ಮುಂಚಿತವಾಗಿಯೇ ಎಚ್ಚರಿಸುತ್ತದೆ. ಇದು ನಮ್ಮ ರಾಷ್ಟ್ರೀಯ ಭದ್ರತೆಯೂ ಹೌದು ಚಂದ್ರಯಾನ-3 ರ ನಂತರ 10 ದಿನದಲ್ಲೇ ಸೂರ್ಯನ ಮಿಷನ್ ಉಡಾವಣೆ ಮಾಡಿದ ಇಸ್ರೋ, ಟಿಪ್ಪು ಸುಲ್ತಾನ್ ತಾರಾಮಂಡಲ ಪೇಟೆಯಲ್ಲಿ ಹಚ್ಚಿದ ರಾಕೆಟ್ ಕಿಡಿಯು ಇಂದು ಸೂರ್ಯನವರೆಗೆ ತಲುಪಿದೆ ಎಂಬುದನ್ನು ಸಾಬೀತುಪಡಿಸಿದೆ.ಇಂದು ಆದಿತ್ಯ-L1 ಗೆ 3 ವರ್ಷ. ಭಾರತ ಇನ್ನು ಹಿಂಬಾಲಕನಲ್ಲ, ದಾರಿ ತೋರುವವನು ಎಂದು ಜಗತ್ತಿಗೆ ತೋರಿಸಿದ ಈ ಸುದಿನವಾಗಿದೆ ಎಂದು ಕೆ ಎಸ್ ಜಯಶಂಕರ್ ಹೇಳಿದ್ದಾರೆ.

ಈ ಎಲ್ಲಾ ಆಧಾರಗಳು ISRO ಅಧಿಕೃತ ವೆಬ್‌ಸೈಟ್ (isro.gov.in/Aditya_L1.html) ಮತ್ತು Wikipedia / The Hindu ವರದಿಗಳಿಂದ ತೆಗೆದುಕೊಳ್ಳಲಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others