ಆಗಸ್ಟ್ 23 ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿದ್ದು,LVM-3 ರಾಕೆಟ್ ಮತ್ತು ಚಂದ್ರಯಾನ-3 ಲ್ಯಾಂಡರ್ ಕೇವಲ 2023ರ ಸಾಧನೆಯಲ್ಲ. ಅದರ ಬೇರು 230 ವರ್ಷಗಳ ಹಿಂದೆ ನಮ್ಮ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇದೆ ಎಂಬುದಕ್ಕೆ ಐತಿಹಾಸಿಕ ಆಧಾರಗಳಿವೆ.
ವಿಶ್ವದ ಮೊದಲ ಕಬ್ಬಿಣದ ರಾಕೆಟ್ ಹುಟ್ಟಿದ್ದು ಶ್ರೀರಂಗಪಟ್ಟಣದಲ್ಲಿ ಎನ್ನಲಾಗಿದೆ. 18ನೇ ಶತಮಾನದವರೆಗೆ ಜಗತ್ತಿನೆಲ್ಲೆಡೆ ರಾಕೆಟ್ ಎಂದರೆ ಬಿದಿರಿನ ಕೊಳವೆಯ ಪಟಾಕಿ. ಆದರೆ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರು ಮೊದಲ ಬಾರಿಗೆ ಕಬ್ಬಿಣದ ಕೊಳವೆ ಬಳಸಿ ಯುದ್ಧ ರಾಕೆಟ್ ತಯಾರಿಸಿದರು.ಆಧಾರ:ಬ್ರಿಟಿಷ್ ಇತಿಹಾಸಕಾರ ಕರ್ನಲ್ ಫ್ರೆಡೆರಿಕ್ ಬೇಯ್ಲಿ ತನ್ನ ದಿನಚರಿಯಲ್ಲಿ ಬರೆಯುತ್ತಾನೆ – “1780ರ ಪೊಳ್ಳಿಲೂರು ಕದನದಲ್ಲಿ ಮೈಸೂರು ರಾಕೆಟ್‌ಗಳು ನಮ್ಮ ಪಡೆಗಳನ್ನು ಛಿದ್ರಗೊಳಿಸಿದವು.
ಎಂಸೈಕಲೋಪೆಡಿಯಾ ಬ್ರಿಟನಿಕಾನಲ್ಲಿ ದಾಖಲಾಗಿದೆ – “ದಿ ಫಸ್ಟ್ ಐರನ್ ಕಾಸೆಡ್ ರಾಕಿಟ್ಸ್ ವರ್ ಡೆವಲಪೆಡ್ ಬೈ ಟೀಪು ಸುಲ್ತಾನ್ ಆಫ್ ಮೈಸೂರ್ ಇನ್ 1780s” (ಬ್ರಿಟನಿಕಾ – ಮೈಸೂರ್ ರಾಕಿಟ್ಸ್) 1799ರ ನಾಲ್ಕನೇ ಮೈಸೂರು ಯುದ್ಧದ ನಂತರ ಬ್ರಿಟಿಷರು ಶ್ರೀರಂಗಪಟ್ಟಣದಿಂದ 600ಕ್ಕೂ ಹೆಚ್ಚು ರಾಕೆಟ್‌ಗಳನ್ನು ಮತ್ತು 9,000 ರಾಕೆಟ್‌ಗಳ ಬಿಡಿಭಾಗಗಳನ್ನು ಲಂಡನ್‌ಗೆ ಕೊಂಡೊಯ್ದರು ಎಂದು ಬ್ರಿಟಿಷ್ ರಾಯಲ್ ಆರ್ಟಿಲರಿ ಮ್ಯೂಸಿಂಮ್ ದಾಖಲೆಯಲ್ಲಿ ಇದೆ.
ಈ ರಾಕೆಟ್‌ಗಳ ವೈಜ್ಞಾನಿಕ ವಿಶೇಷತೆ: 2.5 ಕಿ.ಮೀ ವ್ಯಾಪ್ತಿ, ಕಬ್ಬಿಣದ ದಹನ ಕೋಣೆ, ಕತ್ತಿಯಂತಹ ಚೂಪಾದ ಬ್ಲೇಡ್ ಅಳವಡಿಕೆ.ಈ ತಂತ್ರಜ್ಞಾನವೇ ಆಧುನಿಕ ರಾಕೆಟ್‌ಗೆ ಮೂಲ – ಲಂಡನ್‌ಗೆ ಹೋದ ಮೈಸೂರು ರಾಕೆಟ್‌ಗಳನ್ನು ಅಧ್ಯಯನ ಮಾಡಿದ ಬ್ರಿಟಿಷ್ ವಿಜ್ಞಾನಿ ಸರ್ ವಿಲಿಯಂ ಕಾಂಗ್ರೀವ್ 1804ರಲ್ಲಿ ಕಾಂಗ್ರೆವೆ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದರು. ಇದನ್ನೇ ಬ್ರಿಟಿಷರು ನೆಪೋಲಿಯನ್ ಮತ್ತು ಅಮೆರಿಕ ವಿರುದ್ಧ ಬಳಸಿದರು.
ಆಧಾರ:ನಾಸಾ ತನ್ನ ಅಧಿಕೃತ ಇತಿಹಾಸ ಪುಟದಲ್ಲಿ ಹೇಳುತ್ತದೆ: “ಟೀಪು ಸುಲ್ತಾನ್ ಮೈಸೂರ್ ರಾಕಿಟ್ಸ್ ವರ್ ದಿ ಫಸ್ಟ್ ಸಕ್ಸಷಫುಲ್ ಐರನ್ ಕಾಸೆಡ್ ರಾಕಿಟ್ಸ್ , ಎ ಪ್ರೆಕ್ಯುರ್ಸೋರ್ ಟು ಮಾಡ್ರನ್ ರಾಕಿಟ್ರಿ ” (ನಾಸಾ ಹಿಸ್ಟರಿ ಆಫೀಸ್ – ಎ ಬ್ರಿಫ್ ಹಿಸ್ಟರಿ ಆಫ್ ರಾಕಿಟ್ರಿ) ಲಂಡನ್‌ನ ವಿಕ್ಟೋರಿಯಾ ಅಂಡ್ ಆಲ್ಬರ್ಟ್ ಮ್ಯೂಸಿಂಮ್ ಮತ್ತು ರಾಯಲ್ ಆರ್ಟಿಲರಿ ಮ್ಯೂಸಿಂಮ್, ವುವಿಚ್ ನಲ್ಲಿ ಇಂದಿಗೂ ಟಿಪ್ಪುವಿನ ರಾಕೆಟ್‌ಗಳನ್ನು “ದ ರಾಕೆಟ್ ದಟ್ ಇನ್ಸ್ಪೈರ್ಡ್ ಮಾಡ್ರನ್ ರಾಕಿಟ್ರಿ – ಫ್ರಮ್ ಮೈಸೂರ್ , ಇಂಡಿಯಾ ” ಎಂದು ಪ್ರದರ್ಶಿಸಲಾಗಿದೆ.
ಆಧುನಿಕ ರಾಕೆಟ್‌ನ ತಾತ್ವಿಕ ಜನ್ಮಸ್ಥಳ ಶ್ರೀರಂಗಪಟ್ಟಣ ಇಸ್ರೋ ಮತ್ತು ಕಲಾಂ ಅವರೇ ಒಪ್ಪಿಕೊಂಡ ಸಂಪರ್ಕ – ಭಾರತದ ರಾಕೆಟ್ ವಿಜ್ಞಾನಕ್ಕೆ ಈ ಸಂಪರ್ಕವನ್ನು ಸ್ವತಃ ಇಸ್ರೋದ ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ.
ಆಧಾರ: ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮ್ಮ ‘ವಿಂಗ್ಸ್ ಆಫ್ ಫೈರ್’ (ಅಗ್ನಿಯ ರೆಕ್ಕೆಗಳು) ಪುಸ್ತಕದ ಪುಟ 9 ರಲ್ಲಿ ಬರೆಯುತ್ತಾರೆ “ಐ ವಾಸ್ ಇನ್ಸ್ಪೈರ್ಡ್ ಬೈ ಟೀಪು ಸುಲ್ತಾನ್ ರಾಕೆಟ್ ಟೆಕ್ನಾಲಜಿ , ವಿಚ್ ವಾಸ್ ದಿ ಫಸ್ಟ್ ಆಫ್ ಇಟ್ಸ್ ಕೈಂಡ್ ಇನ್ ದ ವರ್ಲ್ಡ್ .” 2017ರಲ್ಲಿ ಬೆಂಗಳೂರಿನಲ್ಲಿ ನಡೆದ ಅರೋ ಇಂಡಿಯಾ ಶೋ ನಲ್ಲಿ ಕಲಾಂ ಅವರು ಹೇಳಿದರು. “1792ರಲ್ಲಿ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಬಳಸಿದ ರಾಕೆಟ್ ತಂತ್ರಜ್ಞಾನವೇ ಇಂದು ಇಸ್ರೋದ ಮೂಲ ಸ್ಫೂರ್ತಿಯಾಗಿದೆ.
ಹಾಗೆಯೇ ಇಸ್ರೋದ ಮಾಜಿ ಅಧ್ಯಕ್ಷರಾದ ಡಾ. ರಾಧಾಕೃಷ್ಣನ್ ಅವರು 2014ರಲ್ಲಿ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿ, ಟಿಪ್ಪುವಿನ ರಾಕೆಟ್ ನಮೂನೆಯನ್ನು ವೀಕ್ಷಿಸಿ, “ಇದು ಭಾರತೀಯ ರಾಕೆಟ್ ವಿಜ್ಞಾನದ ಗಂಗೋತ್ರಿ” ಎಂದು ಹೇಳಿದ್ದಾರೆ. (ದಿ ಹಿಂದು , 18,ನವೆಂಬರ್,2014)
ಆಗಸ್ಟ್ 23 ಮತ್ತು ಶ್ರೀರಂಗಪಟ್ಟಣದ ಕೊಂಡಿಯಾಗಿದ್ದು, 2023ರ ಆಗಸ್ಟ್ 23ರಂದು ಚಂದ್ರಯಾನ-3 ಯಶಸ್ವಿಯಾದಾಗ, ಪ್ರಧಾನಿ ಮೋದಿ ಅವರು ಲ್ಯಾಂಡಿಂಗ್ ಸ್ಥಳಕ್ಕೆ “ಶಿವಶಕ್ತಿ ಪಾಯಿಂಟ್”ಎಂದು ಹೆಸರಿಟ್ಟರು. ಈ ದಿನ ವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಲು ಕಾರಣವಾಗಿದೆ.
ಭಾರತ ದಕ್ಷಿಣ ಧ್ರುವದಲ್ಲಿ ಇಳಿದ ವಿಶ್ವದ ಮೊದಲ ದೇಶ ಎಂಬುದಾಗಿದೆ.
ಆದರೆ ಈ ಸಾಧನೆಯ ಹಿಂದೆ ಇರುವ LVM-3 ರಾಕೆಟ್‌ನ ಇಂಧನ ತಂತ್ರಜ್ಞಾನ, ದಹನ ಕೋಣೆ ತಂತ್ರಜ್ಞಾನದ ಮೂಲ ತತ್ವವನ್ನು ಮೊದಲು ಪ್ರಯೋಗ ಮಾಡಿದ್ದು ಶ್ರೀರಂಗಪಟ್ಟಣದ ಕುಶಲಕರ್ಮಿಗಳು ಆಗಿದ್ದಾರೆ.
ಆಗ-ಕಬ್ಬಿಣದ ಕೊಳವೆ, ಗನ್ ಪೌಡರ್ ಮತ್ತು ಬಿದಿರಿನ ಕೋಲು ಇಂದು-ಅಲ್ಯೂಮಿನಿಯಂಟೈಟಾನಿಯಂ ಕೊಳವೆ, ಕ್ರಯೋಜೆನಿಕ್ ಇಂಧನ,ಮತ್ತು ನ್ಯಾವಿಗೇಶನ್ ಸಿಸ್ಟಂ. ತತ್ವ ಒಂದೇ, ತಂತ್ರಜ್ಞಾನ ಮುಂದುವರಿದಿದೆ.
ಕನ್ನಡ ನಾಡಿನ ಶ್ರೀರಂಗಪಟ್ಟಣದ ಕೋಟೆಯಲ್ಲಿ ಹೊತ್ತಿಕೊಂಡ ಒಂದು ಸಣ್ಣ ಕಿಡಿ, ಲಂಡನ್ ಮೂಲಕ ಪ್ರಪಂಚ ಸುತ್ತಿ, ಮತ್ತೆ ಬೆಂಗಳೂರಿನ ಇಸ್ರೋ ಮೂಲಕ ಚಂದಿರನ ಮೇಲೆ “ಚಂದ್ರಯಾನ-3” ಮತ್ತು ತ್ರಿವರ್ಣ ಧ್ವಜವಾಗಿ ಬೆಳಗುತ್ತಿದೆ.ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ನಾವು ಹೆಮ್ಮೆಯಿಂದ ಹೇಳಬಹುದು “ಆಧುನಿಕ ರಾಕೆಟ್‌ಗೆ ಜನ್ಮ ನೀಡಿದ್ದು ನಮ್ಮ ಶ್ರೀರಂಗಪಟ್ಟಣ ಎಂದು ಕೆ.ಎಸ್.ಜಯಶಂಕರ್ ತಿಳಿಸಿದ್ದಾರೆ.





