ಒಂದರ ಮೇಲೆ ಒಂದು ಸಮಸ್ಯೆಯನ್ನು ಎದುರಿಸುತ್ತಿರುವ ನಟಿ ಕೃಷಿ ತಾಪಂಡರವರ ಸ್ಥಿತಿ ಕಂಡು ಕೆಲವರು ಪಾಪ ಹೆಣ್ಣು ಮಗು ಎಂದ್ರೆ ಇನ್ನು ಕೆಲವರು ಇಂತಹವರಿಗೆ ಹೀಗೆ ಆಗಬೇಕು ಎಂದು ಅವರ ಮನಸ್ಸನ್ನು ಘಾಸಿಗೊಳಿಸುತ್ತಿದ್ದಾರೆ. ಒಂದು ಗಂಡು ತಪ್ಪು ಮಾಡಿದ್ರೆ ಅದು ಬೆಳಕಿಗೆ ಬರುವುದು ಕಡಿಮೆ, ಬಂದರು ಸಹ ಅದು ಬಹಳ ದಿನಗಳವರಿಗೆ ಚಾಲ್ತಿಯಲ್ಲಿರುವುದಿಲ್ಲ. ಆದರೆ, ಹೆಣ್ಣು ಮಕ್ಕಳು ಸ್ಪಲ್ಪ ಎಡವಿದರೆ ಸಾಕು ಇಲ್ಲ ಸಲ್ಲದ ಸಂಕಟಗಳು ಸವಾಲನ್ನು ಎಸೆಯುತ್ತಿರುತ್ತವೆ. ಇದರ ನಡುವೆ ಗಟ್ಟಿ ಮನಸ್ಸು ಮಾಡಿಕೊಂಡು ಬದುಕುವವರ ಸಂಖ್ಯೆ ಕಡಿಮೆ ಇದ್ದು ಕೆಲವರು ಸಾವಿಗೂ ಶರಣಾಗಿದ್ದಾರೆ.
ಅದರಲ್ಲಿ ವಯಕ್ತಿಯ ವಿಚಾರಕ್ಕೆ ಕೈ ಹಾಕಿ ಕೇದುಕುವ ಮನಸ್ಥಿಗಳು ಜಾಸ್ತಿಯಾಗಿದ್ದು,ಹಲವರಂತೂ ಅವರಿವರ ಬಗ್ಗೆ ಅಪಪ್ರಚಾರ ಮಾಡುವುದನ್ನು ರೂಢಿ ಮಾಡಿಕೊಂಡು ಬಿಟ್ಟಿದ್ದಾರೆ. ಇವತ್ತು ನಮ್ಮ ಕಣ್ಣು ಮುಂದೆ ಸಾಕಷ್ಟು ನೋವುಗಳನ್ನು ಸಂಬಳಿಸುತ್ತಿರುವ ನಟಿಯರನ್ನು ಕಂಡಿದ್ದೇವೆ, ಸಮಸ್ಯೆಗಳ ಮೆಟ್ಟಿಲಿನಿಂದ ಸಾಧನೆಯನ್ನು ಕಂಡುಕೊಂಡವರ ಬಗ್ಗೆ ನೋಡಿದ್ದೇವೆ ಆದರೂ ಬೇರೆಯವರ ಬಗ್ಗೆ ಮಾತನಾಡಿ ಬೇಳೆ ಬೇಯಿಸಿಕೊಳ್ಳುವುದರಲ್ಲಿ ಏನು ಅರ್ಥವಿದೆ. ಇದೆಲ್ಲಾ ಈಗ ಸೈಡ್ ಗಿಟ್ಟು ನಟಿ ಕೃಷಿ ತಾಪಂಡ ಅವರ ಪ್ರಸ್ತುತ ಸ್ಥಿತಿ ಬಗ್ಗೆ ನೋಡಣ..
ಹೌದು ನಗಬೇಕು ಎನ್ನುವಷ್ಟರಲ್ಲಿಯೇ ಆಕೆಯ ಜೀವನದ ಮೇಲೆ ಬೀರುಗಾಳಿ ಸವಾರಿ ಮಾಡುತ್ತಲೇ ಇದೆ. ಹೆಣ್ಣು ಮಕ್ಕಳ ಮನಸ್ಸು ಮೃದು ಎಂದು ಹೇಳುವ ಸಮಾಜವೇ ಕೆಲವು ವೇಳೆಯಲ್ಲಿ ಮೃಗದ ರೀತಿಯಲ್ಲಿ ವರ್ತನೆ ಮಾಡುತ್ತಿರುತ್ತದೆ. ಹೀಗಿರುವಾಗ ಈಗ ಅಷ್ಟೇ ನಿಟ್ಟುಸಿರು ಬಿಡುತ್ತಿರುವ ನಟಿ ಕೃಷಿ ತಾಪಂಡ ಅವರಿಗೆ ಹಲವರು ಕೆಟ್ಟ ಕಮೆಂಟ್‌ಗಳಿಂದ ನಿಂದಿಸುತ್ತಲೇ ಇರುತ್ತಾರೆ.
ಇದೇ ವಿಚಾರವಾಗಿ, ಗೆಳೆಯ ವೈಶಾಕ್ ಸಾವಿನ ಬಳಿಕ ನಟಿ ಕೃಷಿ ತಾಪಂಡ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಭಾವುಕ ಮನ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ.
ನನ್ನ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಿಮಗೆ ಅದು ಒಂದು ಘಟನೆ ಆಗಿರಬಹುದು. ಆದರೆ ನನಗೆ ಒಂದು ಲಾಸ್. ಯಾರಾದರೂ ‘ಹೇಗಿದ್ದೀರಾ?’ ಎಂದು ಕೇಳಿದರೆ ಏನೂ ತೋಚುವುದಿಲ್ಲ. ನಾನು ಒಳಗಿನಿಂದ ಸಂಪೂರ್ಣವಾಗಿ ಒಡೆದು ಹೋಗಿದ್ದೇನೆ ಎಂದು ನೊಂದು ಪೋಸ್ಟ್ ಮಾಡಿದ್ದಾರೆ.
ಇಷ್ಟಪಟ್ಟು ಕಟ್ಟಿದ ಮನೆಯಲ್ಲಿ ಈಗ ವಾಸ ಮಾಡಲು ಸಾಧ್ಯವಿಲ್ಲ. ಅದರ ಬಾಡಿಗೆಯನ್ನು ನಾನೇ ಕಟ್ಟುತ್ತಿದ್ದೇನೆ, ಬದುಕಲು ದುಡಿಯಬೇಕು. ಹೆಣ್ಣಾಗಿ ಹುಟ್ಟಿದ್ದು ಶಾಪವೇನೋ ಎನಿಸುತ್ತದೆ. ಬೇರೆಯವರ ನೋವಿನ ಬಗ್ಗೆ ಚುಚ್ಚಿ ಮಾತನಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ನೋವಿನ ನಡುವೆಯೂ ಕೆಲಸದ ನಿಮಿತ್ತ ಪ್ರಮೋಷನಲ್ ವೀಡಿಯೋಗಳನ್ನು ಹಾಕಿದ್ದೆ. ಅದಕ್ಕೂ ಕಮೆಂಟ್ಸ್‌ಗಳನ್ನ ಹಾಕಿ ನಮ್ಮ ಬಗ್ಗೆ ಮಾತನಾಡ್ತಾರೆ. ಸೈಲೆಂಟ್ ಆಗಿದ್ರೆ ನಮ್ಮದೇ ತಪ್ಪು ಅನ್ನೋ ಹಾಗೆ ಮಾತನಾಡ್ತಾರೆ. ನಾವು ಸತ್ತರೆ ಹೇಡಿಗಳು ಎನ್ನುತ್ತಾರೆ, ಬದುಕಲು ಪ್ರಯತ್ನಿಸಿದರೂ ಮಾತನಾಡ್ತಾರೆ ಎಂದು ಬೇಸರ ಹೊರಹಾಕಿದ್ದಾರೆ.
ನಟಿಯ ಈ ಪೋಸ್ಟ್ ಓದುವವರಿಗೂ ನೋವನ್ನುಂಟು ಮಾಡುತ್ತದೆ ಕೆಲವರು ಪಾಪ ಹೆಣ್ಣು ಮಗು ಎಂದ್ರೆ ಇನ್ನು ಕೆಲವರು ಪಾಪಿ ಎನ್ನುತ್ತಿದ್ದಾರೆ. ಆದರೂ ನೊಂದಿರುವ ಮನಸ್ಸಿಗೆ ಕೆಟ್ಟ ಕಮೆಂಟ್‌ನಿಂದ ನೋವು ಮಾಡದೆ ಉತ್ತಮ ಮಾತು ಹೇಳಿ ಧೈರ್ಯ ನೀಡಬೇಕು ಎಂದು ಕೆಲವರು ಸಮಾಜೀಕ ಜಾಲತಾಣದ ಮೂಲಕ ನಟಿ ಕೃಷಿ ಪರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.





