ವಾಷಿಂಗ್ಟನ್: ಅಮರಿಕಾ-ಇರಾನ್ ಯುದ್ಧ ಜಗತ್ತಿನ ನಿದ್ದೆ ಕೆಡಿಸಿದ್ದು, ಒಬ್ಬರ ಮೇಲೆ ಒಟ್ಟರು ದಾಳಿ ನಡೆಸುತ್ತಲೇ ಇದ್ದಾರೆ. ಯಾವುದಕ್ಕೂ ಯಾರಿಗೂ ಕೇರ್ ಮಾಡದ ಈ ದೇಶಗಳು ಮೊಂಡತಕ್ಕೆ ಬಿದ್ದು ಕದನಕ್ಕೆ ಕೈ ಹಾಕಿದ್ದಾರೆ.
ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಂತ ಆಪ್ತ ಒಡನಾಡಿ ಹಾಗೂ ಹಿರಿಯ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಅವರು ಹಠಾತ್ ಸಾವನ್ನಪ್ಪಿದ್ದಾರೆ. ಈ ನಿಧನಕ್ಕೆ ಈಗ ಹಲವು ಅನುಮಾನಗಳು ಹುಟ್ಟಿಕೊಂಡಿದೆ.
ಸೆನೆಟರ್ ಲಿಂಡ್ಸೆ ಗ್ರಹಾಂ ಅವರು ಜುಲೈ 11ರ ಶನಿವಾರ ಸಂಜೆ ವಾಷಿಂಗ್ಟನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದರು. ಆದರೆ ಲಿಂಡ್ಸೆ ಗ್ರಹಾಂ ಅವರ ಸಾವಿನ ಹಿಂದೆ ರಷ್ಯಾ ಅಥವಾ ಇರಾನ್ ಕೈವಾಡವಿರಬಹುದು ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿವೆ.
ಉಕ್ರೇನ್ ಪ್ರವಾಸದಲ್ಲಿದ್ದ ಅವರು, ಪ್ರವಾಸ ಮುಗಿಸಿ ಮರಳಿದ ಸ್ಪಲ್ಪ ಸಮಯದಲ್ಲಿಯೇ ನಿಧನರಾಗಿರುವುದು ಜಾಗತಿಕ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ. ಟ್ರಂಪ್ ಅವರ ‘ಮಾಗಾ’ ಬೆಂಬಲಿಗರು ಹತ್ಯೆಯ ಶಂಕೆ ಹಾಗೂ ಪಿತೂರಿ ಸಿದ್ಧಾಂತಗಳ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ಇತ್ತ ತಮ್ಮ ಆಪ್ತ ಮಿತ್ರನ ಅಗಲಿಕೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಸ್ನೇಹಿತ ಯಾವಾಗಲೂ ದೇಶಕ್ಕಾಗಿ ಶ್ರಮಿಸುತ್ತಿದ್ದ ನಿಜವಾದ ಅಮೆರಿಕನ್ ದೇಶಭಕ್ತ. ನಾನು ಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿ ಹಾಗೂ ಸೆನೆಟರ್‌ಗಳಲ್ಲಿ ಒಬ್ಬರಾದ ಲಿಂಡ್ಸೆ ಗ್ರಹಾಂ ಇನ್ನಿಲ್ಲ, ಲಿಂಡ್ಸೆ ಅವರ ಅನುಪಸ್ಥಿತಿ ನಮ್ಮನ್ನು ಬಹುವಾಗಿ ಕಾಡಲಿದೆ ಎಂದಿದ್ದಾರೆ.
ಸಾವಿಗೂ ಮುನ್ನ ಗ್ರಹಾಂ ಉಕ್ರೇನ್‌ಗೆ ಭೇಟಿ ನೀಡಿದ ಅವರು, ರಷ್ಯಾದ ತೈಲ, ಅನಿಲ ರಫ್ತಿನ ಮೇಲೆ ಕಠಿಣ ಆರ್ಥಿಕ ನಿರ್ಬಂಧ ಹೇರಬೇಕೆಂದು ಒತ್ತಾಯಿಸಿದ್ದರು. ಉಕ್ರೇನ್‌ನಿಂದ ಮರಳಿದ ಕೆಲವೇ ಗಂಟೆಗಳಲ್ಲಿ ಅವರು ಸಾವನ್ನಪ್ಪಿದ್ದು, ಇದರ ಸಮಯದ ಬಗ್ಗೆ ಟ್ರಂಪ್ ಬೆಂಬಲಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಈ ಮುನ್ನ ಇರಾನ್ ದೇಶ ಲಿಂಡ್ಸೆ ಗ್ರಹಾಂ ಅವರಿಗೆ ಜೀವ ಬೆದರಿಕೆ ಏರಿತ್ತು. ಇದಷ್ಟಲ್ಲದೇ ಗ್ರಹಾಂ ನಿಧನರಾಗುತ್ತಿದ್ದಂತೆ ಇರಾನ್ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಈ ಸುದ್ದಿಯನ್ನು ಭರ್ಜರಿಯಾಗಿ ಸಂಭ್ರಮಿಸಿದ್ದಾರೆ. ಮತ್ತು ಇದೇ ಸುದ್ದಿಯನ್ನು ಪ್ರಸಾರ ಮಾಡಿ ಆನಂದಿಸಿದ್ದಾರೆ. ಇವರ ಸಂಭ್ರಮ ಅಮೆರಿಕ ಕೊಪಕ್ಕೆ ಗುರಿಯಾಗಿದೆ. ಇರಾನ್ ಅವರನ್ನು ಸಾಯಿಸಿರಬಹುದಾ? ಎನ್ನುವ ಶಂಕೆಯನ್ನು ಹೊರ ಹಾಕಿದೆ.
ಒಟ್ಟಿನಲ್ಲಿ ಲಿಂಡ್ಸೆ ಗ್ರಹಾಂ ಸಾವು ಅಮೆರಿಕ ದೇಶಕ್ಕೆ ನೋವನ್ನುಂಟು ಮಾಡಿದ್ದು, ಇತ್ತ ಇರಾನ್‌ಗೆ ಸಂತಸವನ್ನು ನೀಡಿದೆ. ಇರಾನ್ ಖುಷಿಗೆ ಅಮೆರಿಕ ಯಾವ ರೀತಿಯ ಉತ್ತರ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಭಾರತ ಮತ್ತು ಲಿಂಡ್ಸೆ ಗ್ರಹಾಂ ನಂಟು ಹೇಗಿತ್ತು ಗೊತ್ತಾ?
ಭಾರತದ ಜತೆಗಿನ ಜಾಗತಿಕ ರಾಜತಾಂತ್ರಿಕ ವ್ಯವಹಾರಗಳಲ್ಲಿ ಲಿಂಡ್ಸೆ ಗ್ರಹಾಂ ಪ್ರಮುಖ ಪಾತ್ರ ಸ್ಥಾನ ಪಡೆದುಕೊಂಡಿದ್ದರು.ಭಾರತವು ರಷ್ಯಾ ತೈಲವನ್ನು ಖರೀದಿಸುವ ಮೂಲಕ ವ್ಲಾಡಿಮಿರ್ ಪುಟಿನ್ ಅವರ ಯುದ್ಧಕ್ಕೆ ಆರ್ಥಿಕ ನೆರವು ನೀಡುತ್ತಿದೆ ಎಂದು ಆರೋಪಿಸಿದ್ದರು. ರಷ್ಯಾದಿಂದ ಭಾರತ ಕಚ್ಚಾ ತೈಲ ಖರೀದಿಸುವುದನ್ನು ಅವರು ತೀವ್ರವಾಗಿ ವಿರೋಧಿಸಿದ್ದರು. ಗ್ರಹಾಂ, ಭಾರತದ ರಫ್ತುಗಳ ಮೇಲೆ ಶೇ. 500 ರಷ್ಟು ಸುಂಕ ವಿಧಿಸುವುದಾಗಿ ಈ ಹಿಂದೆ ಎಚ್ಚರಿಕೆ ನೀಡಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.





