ಯಾರ ಇದ್ದರೇನಂತೆ ನಾವು ಯಾರಿಗೂ ಹೆದರುವುದಿಲ್ಲ- ಬೆನ್ ಡಕೆಟ್ ಹೀಗೆ ಹೇಳಿದ್ದು ಯಾರಿಗೆ? ಇಲ್ಲಿದೆ ನೋಡಿ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇದ್ದರೇನಂತೆ, ನಾವು ಯಾರಿಗೂ ಹೆದರುವುದಿಲ್ಲ ಎಂದು ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗ ಬೆನ್ ಡಕೆಟ್ ಹೇಳಿದ್ದಾರೆ.

ಭಾರತ -ಇಂಗ್ಲೆಂಡ್ ಮಧ್ಯೆ ಏಕದಿನ ಸರಣಿ ಶುರುವಿಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಕೆಟ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್​ಪ್ರೀತ್ ಬುಮ್ರಾ ಅವರಂತಹ ದಿಗ್ಗಜ ಆಟಗಾರರು ಭಾರತ ತಂಡಕ್ಕೆ ಮರಳಿರುವುದು ದೊಡ್ಡ ಸವಾಲೇ ಸರಿ. ಆದರೆ ಇದಕ್ಕೆ ಹೆದರಿ ಇಂಗ್ಲೆಂಡ್ ತನ್ನ ಆಕ್ರಮಣಕಾರಿ ಶೈಲಿ ಬದಲಾಯಿಸಿಕೊಳ್ಳುವುದಿಲ್ಲ ಎಂದು ಮಾತಿನ ಮೂಲಕ ತಮ್ಮ ಬಲವನ್ನು ವ್ಯಕ್ತಪಡಿಸಿದ್ದಾರೆ.

ಈ ಬೆನ್ ಡಕೆಟ್ ನೀಡಿರುವ “ನಾವು ಯಾರಿಗೂ ಹೆದರುವುದಿಲ್ಲ” ಎಂಬ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದಷ್ಟಲ್ಲದೆ ನಾವು ಎದುರಾಳಿ ಯಾರು ಎಂದು ನೋಡಿ ನಮ್ಮ ಗೇಮ್ ಪ್ಲಾನ್ ಬದಲಾಯಿಸುವುದಿಲ್ಲ, ಬದಲಾಗಿ ನಮ್ಮ ಆಟವನ್ನು ಅವರಗಿಂತ ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇವೆ” ಎಂದು ಡಕೆಟ್ ಸ್ಪಷ್ಟಪಡಿಸಿದ್ದಾರೆ. ಇದೇ ಕಾರಣಕ್ಕಾಗಿ ಅವರು ವಿರಾಟ್-ರೋಹಿತ್ ಹೆಸರಿಗೆ ಹೆದರಿ ರಕ್ಷಣಾತ್ಮಕ ಆಟಕ್ಕೆ ಶರಣಾಗಲು ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ.

“ನಾವು ಅವರನ್ನೂ ಶಾರ್ಟ್ ಬಾಲ್ ಮೂಲಕ ಪರೀಕ್ಷಿಸುತ್ತೇವೆ. ಒಂದು ವೇಳೆ ಅವರು ಅದನ್ನು ಚೆನ್ನಾಗಿ ಆಡಿದರೆ ನಮ್ಮ ತಂತ್ರ ಬದಲಾಯಿಸುತ್ತೇವೆ, ಇಲ್ಲದಿದ್ದರೆ ಬೌನ್ಸರ್ ಅಸ್ತ್ರ ಮುಂದುವರಿಯಲಿದೆ” ಎಂದು ಟೀಮ್ ಇಂಡಿಯಾ ದಿಗ್ಗಜರಿಗೆ ಡಕೆಟ್ ಸವಾಲು ಹಾಕಿದ್ದಾರೆ.

ಟಿ20 ಸರಣಿಯಲ್ಲಿ ಇಂಗ್ಲೆಂಡ್ ಬೌಲರ್‌ಗಳು ಭಾರತದ ಯುವ ಬ್ಯಾಟರ್‌ಗಳ ವಿರುದ್ಧ ಸತತವಾಗಿ ಬೌನ್ಸರ್ ಹಾಗೂ ಶಾರ್ಟ್-ಪಿಚ್ ಎಸೆತಗಳನ್ನು ಬಳಸಿ ಗೆಲವನ್ನು ಸಾಧಿಸಿದ್ದರು. ಆದರೆ ಇದೀಗ ಆಟಕ್ಕೆ ಟ್ವಿಸ್ಟ್‌ ಬಂದಿದೆ. ಒಂದು ವೇಳೆ ಗೇಮ್‌ ಗೆ ಹಿರಿಯ ಆಟಗಾರರಾದ ರೋಹಿತ್ ಮತ್ತು ವಿರಾಟ್ ಬಂದರೂ ಇಂಗ್ಲೆಂಡ್ ತನ್ನ ಈ ತಂತ್ರ ಕೈಬಿಡುವುದಿಲ್ಲ ಎಂದು ಡಕೆಟ್ ಸುಳಿವು ಕೊಟ್ಟಿದ್ದಾರೆ.

ಎದುರಾಳಿ ಯಾರೇ ಇದ್ದರೂ ತಮ್ಮದೇ ಆದ ಆಕ್ರಮಣಕಾರಿ ಶೈಲಿಯಲ್ಲಿ ಆಡುವುದು ಇಂಗ್ಲೆಂಡ್‌ನ ಮೈಂಡ್‌ಸೆಟ್ ಆಗಿದೆ. ಈ ಕಾರಣಕ್ಕೆ ಬೆನ್ ಡಕೆಟ್ ಈ ರೀತಿ ಹೇಳಿದ್ದಾರೆ.

ಏಕದಿನ ಸರಣಿಗೂ ಮುಂಚೆ ನಡೆದ 5 ಪಂದ್ಯಗಳ ಟಿ20 ಸರಣಿಯಲ್ಲಿ ಹ್ಯಾರಿ ಬ್ರೂಕ್ ನೇತೃತ್ವದ ಇಂಗ್ಲೆಂಡ್ ತಂಡ ಭಾರತವನ್ನು 4-0 ಅಂತರದಿಂದ ಸಂಪೂರ್ಣವಾಗಿ ಸೋಲಿಸಿತ್ತು. ಇಲ್ಲಿ ಇಂಗ್ಲೆಡ್‌ ಗೆಲವಿನ ನಗೆ ಬೀರಿತ್ತು ಈ ವಿಜಯ ಆತಿಥೇಯ ಇಂಗ್ಲೆಂಡ್ ತಂಡದ ಆತ್ಮವಿಶ್ವಾಸವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದೆ. ಯುವ ಭಾರತೀಯ ಪಡೆಯನ್ನು ಸುಲಭವಾಗಿ ಸೋಲಿಸುವುದರಿಂದ ಅದೇ ನಿಯಮವನ್ನು ಏಕದಿನ ಮಾದರಿಯಲ್ಲೂ ಮುಂದುವರಿಸಬಹುದು ಎಂಬ ಮನೋಭಾವ ಇಂಗ್ಲೆಂಡ್ ಆಟಗಾರರಲ್ಲಿದೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇತ್ತೀಚಿನ ಟಿ20 ಸರಣಿಯಲ್ಲಿ ಆಡಿರಲಿಲ್ಲ. ಅಲ್ಲದೆ ಅವರು ಇತರ ಸ್ವರೂಪಗಳಿಂದ ನಿವೃತ್ತಿ ಪಡೆದಿರುವುದರಿಂದ ನೇರವಾಗಿ ಏಕದಿನ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಬ್ರೇಕ್‌ ನಂತರ ಮೈದಾನಕ್ಕೆ ಇಳಿಯುವಾಗ ಆಟಗಾರರು ಆರಂಭದಲ್ಲಿ ಲಯ ಕಂಡುಕೊಳ್ಳಲು ಕಷ್ಟಪಡುತ್ತಾರೆ. ಇಂಗ್ಲೆಂಡ್ ತಂಡ ಇದನ್ನೇ ಬಂಡವಾಳ ಮಾಡಿಕೊಳ್ಳಲು ಆಲೋಚಿಸುತ್ತಿದೆ. ಭಾರತದ ಹಿರಿಯ ಆಟಗಾರರು ಮೈದಾನದಲ್ಲಿ ಸೆಟ್ ಆಗುವ ಮುನ್ನವೇ ಅವರ ಮೇಲೆ ಒತ್ತಡ ಹೇರುವುದು ಇಂಗ್ಲೆಂಡ್‌ನ ಪ್ಲಾನ್ ಆಗಿದೆ.

ಬೆನ್ ಡಕೆಟ್ ಅವರ ಹೇಳಿಕೆಯನ್ನು ಕೇವಲ “ಅಹಂಕಾರ” ಎಂದು ತಳ್ಳಿಹಾಕುವಂತಿಲ್ಲ. ಏಕೆಂದರೆ ಇಂಗ್ಲೆಂಡ್ ಪ್ರಸ್ತುತ ಅತ್ಯಂತ ಬಲಿಷ್ಠ ಫಾರ್ಮ್‌ನಲ್ಲಿದೆ. ಆದರೆ, ಭಾರತ ತಂಡಕ್ಕೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್​ಪ್ರೀತ್ ಬುಮ್ರಾ ಅವರ ಮರಳುವಿಕೆ ಭಾರತ ತಂಡಕ್ಕೆ ಆನೆ ಬಲ ತಂದಿದೆ. ಇನ್ನು ಗೆಲವು ಯಾರ ಕೈ ಸೇರುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

Share it :

Leave a Reply

Your email address will not be published. Required fields are marked *