ಕೆಇಎಯಿಂದ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ರಾಜ್ಯದ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿ ಪ್ರಕ್ರಿಯೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತವಾಗಿ ಚಾಲನೆ ನೀಡಿದೆ. 2026ನೇ ಸಾಲಿನ ಯುಜಿಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆಯ ಸವಿವರವಾದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ವೆರಿಫಿಕೇಶನ್ ಸ್ಲಿಪ್ ಅನ್ನು ಜಾಲತಾಣದಿಂದ ಪಡೆದುಕೊಳ್ಳಲು ಲಿಂಕ್ ಕಲ್ಪಿಸಲಾಗಿದೆ.

ಇಂದಿನಿಂದಲೇ (ಜೂನ್ 20) ವಿದ್ಯಾರ್ಥಿಗಳು ತಮ್ಮ ಇಷ್ಟದ ಕಾಲೇಜು ಹಾಗೂ ಕೋರ್ಸ್‌ಗಳ ಆಯ್ಕೆಯನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳ ವಿವರ:

  • ಆಪ್ಷನ್ ಎಂಟ್ರಿ ಅವಧಿ: ಜೂನ್ 20ರ ಮಧ್ಯಾಹ್ನ 11:30ರಿಂದ ಜೂನ್ 30ರ ಬೆಳಗ್ಗೆ 10:00 ಗಂಟೆಯವರೆಗೆ ವಿದ್ಯಾರ್ಥಿಗಳು ತಮ್ಮ ಆದ್ಯತೆಗಳನ್ನು ಲಾಕ್ ಮಾಡಲು ಕಾಲಾವಕಾಶವಿದೆ.
  • ನೀಟ್ ವಿದ್ಯಾರ್ಥಿಗಳಿಗೆ ಸೂಚನೆ: ನೀಟ್ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ಜೂನ್ 22ರಿಂದ ತಮ್ಮ ಆಪ್ಷನ್ ಎಂಟ್ರಿ ಪ್ರಕ್ರಿಯೆಯನ್ನು ಆರಂಭಿಸಬೇಕಾಗುತ್ತದೆ.
  • ಮಾಕ್ ಅಲಾಟ್‌ಮೆಂಟ್: ವಿದ್ಯಾರ್ಥಿಗಳು ದಾಖಲಿಸಿದ ಆಯ್ಕೆಗಳ ಆಧಾರದ ಮೇಲೆ ಜುಲೈ 6ರ ಬೆಳಗ್ಗೆ 11:00 ಗಂಟೆಯ ನಂತರ ಅಣಕು ಸೀಟು ಹಂಚಿಕೆಯ ರಿಸಲ್ಟ್ ಹೊರಬೀಳಲಿದೆ.
  • ಆಯ್ಕೆಗಳ ಪರಿಷ್ಕರಣೆ: ಮಾಕ್ ರಿಸಲ್ಟ್ ನೋಡಿದ ಬಳಿಕ ಬದಲಾವಣೆ ಬಯಸುವವರಿಗೆ ಜುಲೈ 6ರ ಮಧ್ಯಾಹ್ನ 2:00 ಗಂಟೆಯಿಂದ ಜುಲೈ 9ರ ಬೆಳಗ್ಗೆ 10:00 ಗಂಟೆಯವರೆಗೆ ತಮ್ಮ ಆಯ್ಕೆಗಳನ್ನು ಸೇರಿಸಲು ಅಥವಾ ತೆಗೆದುಹಾಕಲು 3 ದಿನಗಳ ಕಾಲಾವಕಾಶ ಸಿಗಲಿದೆ.
  • ಮೊದಲ ಸುತ್ತಿನ ಅಂತಿಮ ಫಲಿತಾಂಶ: ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಜುಲೈ 15ರ ಬೆಳಗ್ಗೆ 11:00 ಗಂಟೆಯ ನಂತರ ಮೊದಲ ಸುತ್ತಿನ ನಿಜವಾದ ಸೀಟು ಹಂಚಿಕೆಯ ಪಟ್ಟಿಯನ್ನು ಕೆಇಎ ಪ್ರಕಟಿಸಲಿದೆ.

ಯಾವೆಲ್ಲಾ ಕೋರ್ಸ್‌ಗಳಿಗೆ ಸೀಟ್ ಮ್ಯಾಟ್ರಿಕ್ಸ್ ಲಭ್ಯ?

ಎಂಜಿನಿಯರಿಂಗ್, ವೆಟರಿನರಿ, ಬಿ.ಎಸ್ಸಿ (ಕೃಷಿ, ತೋಟಗಾರಿಕೆ, ಅರಣ್ಯ ವಿಜ್ಞಾನ, ರೇಷ್ಮೆ ಕೃಷಿ), ಬಿ.ಟೆಕ್ (ಬಯೋ ತಂತ್ರಜ್ಞಾನ, ಫುಡ್ ಟೆಕ್ನಾಲಜಿ), ಬಿ.ಎಫ್.ಎಸ್ಸಿ ಹಾಗೂ ಬಿ.ಎಸ್ಸಿ ನರ್ಸಿಂಗ್ ಸೇರಿದಂತೆ ಹಲವು ಕೋರ್ಸ್‌ಗಳ ಸೀಟುಗಳ ಲಭ್ಯತೆಯ ವಿವರವನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.

ಆದರೆ ಆರ್ಕಿಟೆಕ್ಚರ್, ಫಾರ್ಮಸಿ ಹಾಗೂ ಯೋಗ ಮತ್ತು ನ್ಯಾಚುರೋಪತಿ ಕೋರ್ಸ್‌ಗಳ ಸೀಟ್ ಮ್ಯಾಟ್ರಿಕ್ಸ್ ಇಲಾಖೆಗಳಿಂದ ಇನ್ನು ಬಾರದ ಹಿನ್ನೆಲೆಯಲ್ಲಿ, ಅವುಗಳನ್ನು ಸ್ವೀಕರಿಸಿದ ತಕ್ಷಣ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ. ಆಪ್ಷನ್ ಎಂಟ್ರಿಯ ಹಂತ ಹಂತದ ಮಾಹಿತಿ ಹಾಗೂ ಗೊಂದಲಗಳಿಗೆ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿರುವ ಮಾಹಿತಿ ಕೈಪಿಡಿಯನ್ನು (Information Booklet) ರೆಫರ್ ಮಾಡಬಹುದು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post