ಕುಚ್‌ ಕುಚ್‌ ಲವ್‌: ಓಡಿ ಹೋಗಿ ಮದುವೆಯಾದ್ರು ಆಂಟಿ-ಅಂಕಲ್, ಸಿಂಗಲ್ಸ್‌ ಯುವಕರೇ ಇದನ್ನೊಮ್ಮೆ ಓದಿ

ನಮ್ಮ ಯುವಕರು ಒಂಟಿಜೀವನಕ್ಕೆ ಹೊಂದಿಕೆಯಾಗಿಬಿಟ್ಟಿದ್ದು,೩೦-೩೫ ಆದರೂ ಮದುವೆಯ ಬಗ್ಗೆ ಆಸಕ್ತಿ ಕಡಿಮೆ. ಇಷ್ಟಲ್ಲದೇ ಜವಾಬ್ದಾರಿ ಮೂಟೆ ಹೊತ್ತು ಹಗಲು ರಾತ್ರಿ ಹಣದ ಬಗ್ಗೆ ಯೋಚನೆ ಮಾಡಿ, ಪ್ರೀತಿ-ಪ್ರೇಮ ಪಕ್ಕಕ್ಕೆ ತಳ್ಳುತ್ತಿದ್ದಾರೆ. ಈ ಡಿಜಿಟಲ್‌ ಯುಗದಲ್ಲಿ ಯುವ ಜನತೆಗೆ ಸಂಪೂರ್ಣವಾಗಿ ಪ್ರೇಮದ ವ್ಯಾಮೋಹ ಕಡಿಮೆಯಾಗಿದೆ, ಇತ್ತ ಆಂಟಿ-ಅಂಕಲ್‌ಗಳ ನಡುವೆ ಪ್ರೀತಿಯ ಚಿಗರು ಬೆಳೆಯುತ್ತಿದೆ.

ಹೌದು ಸದ್ಯಕ್ಕೆ ನಮ್ಮ ಸಮಾಜದಲ್ಲಿ ಅನೈತಿಕ-ಪ್ರೀತಿ-ಪ್ರೇಮ ಈ ರೀತಿಯ ಸಂಬಂಧಗಳು ಕಂಡು ಬರುತ್ತಿರುವುದು ಮದುವೆಯಾದವರ ಬದುಕಿನಲ್ಲಿ, ಮದುವೆಯ ಜೀವನದಲ್ಲಿ ಹೊಂದಾಣಿಕೆ ಇಲ್ಲವೆಂದರೆ ನೇರವಾಗಿ ಮತ್ತೊಬ್ಬರ ಮೊರೆ ಹೋಗುವುದು ಇದರಿಂದ ಕೊಲೆಗಳು ಮತ್ತು ಎಷ್ಟೋ ಸಂಸಾರಗಳು ಹಳ್ಳ ಸೇರಿರುತ್ತವೆ. ಇದು ತಪ್ಪೋ ಸರಿಯೋ ಅವರವರ ಮನಸ್ಥಿಗೆ ಬಿಟ್ಟಿದ್ದು.

ಈ ವಿಚಾಯಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಆಂಟಿ-ಅಂಕಲ್‌ ಲವ್‌ ಸ್ಟೋರಿವೊಂದು ಸದ್ದು ಮಾಡುತ್ತಿದೆ. ಹೋಟೆಲ್ ಆಂಟಿ ಜೊತೆ ಅಂಕಲ್ ಎಸ್ಕೇಪ್ ಆಗಿ ಮದುವೆಯಾಗಿರುವ ಘಟನೆ ನಾಗಮಂಗಲ ತಾಲ್ಲೂಕಿನ ಶಿಕಾರಿಪುರದಲ್ಲಿ ನಡೆದಿದೆ.ಆಂಟಿ ಪವಿತ್ರ, ಅಂಕಲ್ ಯೇಸುದಾಸ್ ಓಡಿ ಮದುವೆಯಾಗಿದ್ದಾರೆ. ಇತ್ತ ಪವಿತ್ರಗೆ ಹಲವು ವರ್ಷದ ಹಿಂದೆಯೇ ವಿಜಯ್ ಕುಮಾರ್ ಎಂಬಾತನ ಜೊತೆ ಮದುವೆಯಾಗಿತ್ತು. ಪವಿತ್ರ, ವಿಜಯ್‌ಗೆ ಎರಡು ಮಕ್ಕಳು ಸಹ ಇದ್ದಾರೆ. ಅತ್ತ ಯೇಸುದಾಸ್‌ಗೂ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಪವಿತ್ರ ಹೋಟೆಲ್ ನಡೆಸುತ್ತಿದ್ದಳು ಇಲ್ಲಿಯೇ
ಊಟಕ್ಕೆಂದು ಯೇಸುದಾಸ್ ಬರುತ್ತಿದ್ದ ಈ ಸಮಯದಲ್ಲಿ ಲವ್ನಲ್ಲಿ ಬಿದ್ದಿದ್ದಾರೆ.

ಈ ಲವ್ವು ಅತೀಯಾಗಿ ವಾರದ ಹಿಂದೆ ಆಂಟಿ-ಅಂಕಲ್ ಎಸ್ಕೇಪ್ ಆಗಿದ್ದಾರೆ. ಎಸ್ಕೇಪ್ ನಂತರ ಮದುವೆಯಾಗಿ ಪೋಟೋ ತೆಗೆಸಿಕೊಂಡಿಕೊಂಡಿದ್ದಾರೆ. ಇಲ್ಲಿ ಪವಿತ್ರ ತನ್ನ ಗಂಡನಿಗೆ ಮತ್ತೊಂದು ಮದುವೆಯಾದ ಪೋಟೋ ಕಳುಹಿಸಿದ್ದಾಳೆ. ಅತ್ತ ಯೇಸುದಾಸ್ ಕೂಡ ತನ್ನ ಹೆಂಡತಿಗೆ ಪವಿತ್ರ ಜೊತೆ ಮದುವೆಯಾದ ಪೋಟೋ ಶೇರ್ ಮಾಡಿದ್ದಾನೆ. ಈ ಮಾಹಿತಿ ತಿಳಿದ ಪವಿತ್ರ ಗಂಡ ವಿಜಯ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಕ್ಕಳಿಗಾಗಿ ಹೆಂಡತಿಯನ್ನ ವಾಪಸ್ ಕರೆಸುವಂತೆ ದೂರು ಸಲ್ಲಿಸಿದ್ದಾರೆ. ಅತ್ತ ಯೇಸುದಾಸ್‌ಗಾಗಿ ಆತನ ಪತ್ನಿಯೂ ದೂರು ನೀಡಿದ್ದಾರೆ. ಈ ಘಟನೆ ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲ್ಲಿ ಸತ್ಯ ಏನು ಅಂದ್ರೆ, ಪ್ರೀತಿ ಮಾಡಬೇಕಾದ ವಯಸ್ಸಿನವರು ಕೆಲಸ ಮಾಡಿ ಬಿಡುವಿಲ್ಲದೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇದರ ಗ್ಯಾಪ್‌ಲ್ಲಿ, ಈಗಾಗಲೇ ಮದುವೆಯಾದವರು ಪ್ರೇಮದ ಬಲೆಯಲ್ಲಿ ಸೇರೆಯಾಗುತ್ತಿರುವುದು ವಿಪರ್ಯಾಸವಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others