ನವದೆಹಲಿ: ಗ್ಯಾರಂಟಿಗಳ ಸುಳ್ಳು ಆಶ್ವಾಸನೆ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿ ಮರೆತು ಕೇವಲ ಭ್ರಷ್ಟಾಚಾರ ಮತ್ತು ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.
ಅರ್ಧ ರಾಜ್ಯದಲ್ಲಿ ನಡೆದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಜ್ಞಾವಂತ, ಕರ್ನಾಟಕ ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ (MLC Election) ಎನ್ಡಿಎ (NDA) ಭರ್ಜರಿ ಜಯಭೇರಿ ಬಾರಿಸಿದ್ದು, 2028ರ ಚುನಾವಣೆಗಿದು ಇದು ಶುಭ ಸೂಚನೆಯಾಗಿದೆ.ವಿಧಾನ ಪರಿಷತ್ ಚುನಾವಣೆಯಲ್ಲಿನ ಎನ್ಡಿಎ ಜಯಭೇರಿ ಶಿಕ್ಷಕ ಮತ್ತು ಪದವೀಧರ ಮತದಾರರು ಪಕ್ಷದ ಮೇಲಿಟ್ಟಿರುವ ವಿಶ್ವಾಸದ ಪ್ರತೀಕವಾಗಿದೆ ಎಂದಿರುವ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್ಡಿಎ ಸದಾ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ, ಮತದಾರರ ಹಿತಾಸಕ್ತಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಸ್ಟಿಂಗ್ ಆಪರೇಶನ್ನಂತಹ ನಾಚಿಕೆಗೇಡಿನ ಕೃತ್ಯಕ್ಕೆ ಕೈಹಾಕಿದೆ. ಪ್ರಜ್ಞಾವಂತ ಮತದಾರರಾಗಿರುವ ರಾಜ್ಯದ ಶಿಕ್ಷಕರು ಹಾಗೂ ಪದವೀಧರರು ಇದೆಲ್ಲದರ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದಾರೆ. ಈ ಚುನಾವಣಾ ಫಲಿತಾಂಶವೇ ಇದಕ್ಕೆ ನಿದರ್ಶನ ಎಂದರು
ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ತಬ್ಧಗೊಂಡಿವೆ. ರೈತರಿಗೆ ಕನಿಷ್ಠ ಬೆಳೆ ಪರಿಹಾರ ಸಹ ಕೊಡಲು ಸಾಧ್ಯವಾಗದ ರೀತಿಯಲ್ಲಿ ಖಜಾನೆ ಬರಿದು ಮಾಡಿರುವುದನ್ನು ಮನಗಂಡಿರುವ ವಿದ್ಯಾವಂತ ಸಮಾಜವು ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ತಿರಸ್ಕರಿಸಿ, ಪ್ರಧಾನಿ ಮೋದಿ ನೇತೃತ್ವದ ಅಭಿವೃದ್ಧಿ ಪರ ಆಡಳಿತಕ್ಕೆ ಹಾಗೂ ಎನ್ಡಿಎ ಮೈತ್ರಿಕೂಟಕ್ಕೆ ಅಭೂತಪೂರ್ವ ಬೆಂಬಲ ಸೂಚಿಸಿದೆ ಎಂದು ಹರಿಹಾಯ್ದರು.
ಈ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಮೇಲೆ ಮಿತಿ ಮೀರಿದ ಬೆಲೆ ಏರಿಕೆ ಹೇರಿ ರಾಜ್ಯವನ್ನು ಬಲು ದುಬಾರಿಯತ್ತ ಕೊಂಡೊಯ್ದಿದೆ. ಭ್ರಷ್ಟಾಚಾರ, ತುಷ್ಟೀಕರಣ, ವಾಲ್ಮೀಕಿ ನಿಗಮ, ಕೆಪಿಎಸ್ಸಿ ಹೀಗೆ ಸಾಲು ಸಾಲು ಹಗರಣಗಳಲ್ಲೇ ಹುದುಗಿ ಈಗ ಜನರಿಂದಲೂ ತಿರಸ್ಕೃತಗೊಳ್ಳುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ಸಿಗರು ವೋಟ್ ಚೋರಿ ಎಂದು ಅದೆಷ್ಟೇ ಬೊಬ್ಬೆ ಹೊಡೆದರೂ ಪ್ರಜ್ಞಾವಂತ ಮತದಾರರೇ ಇದೀಗ ಅದಕ್ಕೆ ಪ್ರತ್ಯುತ್ತರ ಕೊಟ್ಟಿದ್ದಾರೆ. ಹಾಗಿದ್ದರೂ ಕಾಂಗ್ರೆಸ್ ನಾಯಕರು ಹಾಗೂ ಅಭ್ಯರ್ಥಿಗಳು ಮತ್ತೂ ವೋಟ್ ಚೋರಿಯ ನೆಪ ಹೇಳಿ ಸೋತ ಮುಖ ಒರೆಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಗ್ಯಾರೆಂಟಿಗಳ ಭರವಸೆ ನೀಡಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಕಳೆದ ಮೂರೂವರೆ ವರ್ಷದಲ್ಲಿ ಖಜಾನೆ ಖಾಲಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಿದ್ದೇನೂ ಇಲ್ಲ. ಕಾಂಗ್ರೆಸಿನ ದುರಾಳಿತದ ಬಗ್ಗೆ ಜನ ಭ್ರಮನಿರಸರಾಗಿದ್ದಾರೆ ಎನ್ನುವುದಕ್ಕೆ ವಿಧಾನ ಪರಿಷತ್ ಚುನಾವಣೆಯೇ ಸಾಕ್ಷಿ ಎಂದರು.
ಶಿಕ್ಷಕ ಮತ್ತು ಪದವಿಧರ ಮತದಾರರು ಕಾಂಗ್ರೆಸ್ ಅನ್ನು ಸಂಪೂರ್ಣ ತಿರಸ್ಕರಿಸಿದ್ದಾರೆ. ಅಂದರೆ ರಾಜ್ಯದಲ್ಲಿ ಸಂಪೂರ್ಣ ಆಡಳಿತ ವಿರೋಧಿ ಅಲೆ ಇರುವುದು ಇದರಿಂದಲೇ ಸ್ಪಷ್ಟವಾಗಿದೆ. ಮುಂಬರುವ 2028ರ ಚುನಾವಣೆಯಲ್ಲೂ ಎನ್ಡಿಎ ದಾಖಲೆಯ ಗೆಲುವಿಗೆ ಇದು ದಿಕ್ಸೂಚಿಯಾಗಿದೆ ಎಂದರು.




