Yathindra Siddaramaiah
ಬೆಂಗಳೂರು: ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ,ಎಸ್‌ಐಆರ್ ದುರ್ಬಳಕೆ ಮಾಡಿಕೊಂಡಿಲ್ಲ, ರಾಮನಗರದಲ್ಲಿ ಮಾತ್ರ ಹಾಗಾಗಿದೆ, ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಎಸ್‌ಐಆರ್ ಲೋಪದ ಬಗ್ಗೆ ವಿಪಕ್ಷಗಳ ದೂರು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದೂ ಕೂಡ ಎಸ್‌ಐಆರ್ ಬಗ್ಗೆ ಮಾಹಿತಿ ಕೊಡೋಕೆ ಒಂದು ಕಡೆ ಸೇರಿದ್ದಾರೆ ಅಷ್ಟೆ. ಇದಕ್ಕೆ ಎಸ್‌ಐಆರ್ ಮಿಸ್ ಯೂಸ್ ಅಂತ ವಿಪಕ್ಷಗಳು ಆರೋಪ ಮಾಡ್ತಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯನ್ನ ಎಲೆಕ್ಷನ್ ಕಮೀಷನ್ ನಡೆಸುತ್ತಿದೆ ಎಂದರು.
ಎಸ್‌ಐಆರ್ ಪ್ರಕ್ರಿಯೆಯನ್ನು ಯಾವುದೇ BLOಗಳು ಮಿಸ್ ಯೂಸ್ ಮಾಡಿಕೊಂಡಿಲ್ಲ. ರಾಮನಗರದಲ್ಲಿ ಮಾತ್ರ ಆ ರೀತಿ ಆಗಿದೆ. ಇದರಲ್ಲಿ ಯಾವುದೇ ರೀತಿ ಅವ್ಯವಹಾರ ಆಗಿಲ್ಲ. ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ. ಸುಮ್ಮನೆ ವಿಪಕ್ಷಗಳು ಗೊಂದಲ ಮೂಡಿಸುತ್ತಿವೆ ಎಂದು ಕಿಡಿಕಾರಿದ್ದಾರೆ
ಈ ತಿಂಗಳೊಳಗೆ ಕ್ಯಾಬಿನೆಟ್ ವಿಸ್ತರಣೆ ಆಗಬಹುದು. ನಾನು ಹೆಚ್ಚುವರಿ ಖಾತೆ ಕೇಳಲ್ಲ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ರ್ಮಾನ ಮಾಡುತ್ತದೆ. ಹೈಕಮಾಂಡ್ ಯಾವಾಗ ಕರೆಯುತ್ತಾರೆ ಆಗ ನಾಯಕರು ಹೋಗ್ತಾರೆ. ಆಗ ವಿಸ್ತರಣೆ ಆಗುತ್ತದೆ. ಎಂದು ಸ್ಪಷ್ಟಪಡಿಸಿದ್ದಾರೆ.
ಯತೀಂದ್ರ ಖಾತೆ ಬದಲಾವಣೆ ಮಾಡುವಂತೆ ನೈಜ ಹೋರಾಟಗಾರ ವೇದಿಕೆಯಿಂದ ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ತನಿಖೆ ಮುಗಿದಿದೆ. ತನಿಖೆ ಮುಗಿದಿರೋದ್ರಿಂದ ನಾವು ಹಸ್ತಕ್ಷೇಪ ಮಾಡೋದೇನಿದೆ. ಖಾತೆ ಬದಲಾವಣೆ ಮಾಡೋ ಅವಶ್ಯಕತೆ ಇಲ್ಲ. ಸಾರ್ವಜನಿಕ ವಲಯದಲ್ಲಿ ಇಂತಹ ಟೀಕೆ ಬರುತ್ತೆ. ಎದುರಿಸಬೇಕು ಎಂದರು.
ಮುಡಾ ಕೇಸ್ ದೂರು ನನ್ನ ಮೇಲೆ ಇರೋದಲ್ಲ. ತಂದೆ-ತಾಯಿ ಮೇಲೆ ಕೇಸ್ ಹಾಕಿದ್ರು. ಈಗಾಗಲೇ ಲೋಕಾಯುಕ್ತ ತನಿಖೆ ವರದಿ ಕೊಟ್ಟಿದೆ. ಆ ವರದಿಯನ್ನ ಜನಪ್ರತಿನಿಧಿಗಳ ನ್ಯಾಯಾಲಯ ಒಪ್ಪಿದೆ ಎಂದು ತಿಳಿಸಿದ್ದಾರೆ.





