ಯಾವುದೇ ಮತದಾರ, ಮತ ರದ್ದು ಆಗಬಾರದು ಇದು ನಮ್ಮ ಉದ್ದೇಶ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

 Priyank Kharge

ಬೆಂಗಳೂರು: ಯಾವುದೇ ಮತದಾರ ಮತ ರದ್ದು ಆಗಬಾರದು. ಇದು ನಮ್ಮ ಉದ್ದೇಶ. ಆತಂಕ ನಮಗೆ ಇಲ್ಲ. ಸಾಮಾನ್ಯ ಪ್ರಜ್ಞೆಯಿಂದ ಬಿಜೆಪಿ ಅವರು ಮಾತಾಡಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಉಡಾಫೆ ಉತ್ತರ ಕೊಡೋದು ಬೇಡ. ಅರ್ಹರಿಗೆ ಮತ ರದ್ದು ಆಗಬಾರದು. ಪಶ್ಚಿಮ ಬಂಗಾಳದಲ್ಲಿ, ಕೇರಳದಲ್ಲಿ ಗೊಂದಲ ಆಯ್ತು. ನಾವು ಕೇಳಿದ 12 ಪ್ರಶ್ನೆಗೆ ಅವರು ಉತ್ತರ ಕೊಟ್ಟಿಲ್ಲ. ಅನುಮಾನ ಬಂದಾಗ ನಾವು ಚುನಾವಣೆ ಆಯೋಗಕ್ಕೆ ಕೇಳಬೇಕಾ? ಬಿಜೆಪಿಗೆ ಕಚೇರಿಗೆ ಕೇಳಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ.

ಚುನಾವಣೆ ಆಯೋಗ SIR ಕುರಿತು ನಾವು ಎತ್ತಿರೋ ಪ್ರಶ್ನೆ ಉತ್ತರ ಕೊಟ್ಟಿಲ್ಲ ಅಂತ ಚುನಾವಣೆ ಆಯೋಗದ ವಿರುದ್ಧ ಕಿಡಿಕಾರಿದ ಅವರು, ಇಂದಿನಿಂದ SIR ಪ್ರಾರಂಭ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಆಯೋಗಕ್ಕೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಆದ ವಿಷಯ ತಿಳಿಸಿದ್ದೇನೆ. ಸೌಜನ್ಯಕ್ಕಾದರೂ ನಮ್ಮ ಪ್ರಶ್ನೆಗೆ ಆಯೋಗ ಉತ್ತರ ನೀಡಿಲ್ಲ. ನಾವು ಲೀಗಲ್ ಆಗಿರೋ ಪ್ರಶ್ನೆಗಳನ್ನೇ ಕೇಳಿದ್ದೇವೆ. SIRಗೆ ನಮ್ಮ ವಿರೋಧ ಇಲ್ಲ. ಆದರೆ, ಪಾರದರ್ಶಕತೆ ಇರಲಿ. ಅರ್ಹರ ಮತ ರದ್ದು ಆಗಬಾರದು. ಕೇಂದ್ರ ಚುನಾವಣೆ ಆಯೋಗಕ್ಕೂ ಸಿಇಓಗೆ ಪತ್ರ ಕೊಟ್ಟಿದ್ವಿ. ಉತ್ತರ ಬಂದಿಲ್ಲ ಎಂದು ತಿಳಿಸಿದ್ದಾರೆ.

ಮುಂದೆ ಇದನ್ನ ಕಾನೂನಾತ್ಮಕವಾಗಿ ಹೇಗೆ ತಗೋಬೋದು ನೋಡ್ತೀವಿಇಸಿ ಬಗ್ಗೆ ಕೇಳಿದ್ರೂ, RSS ಬಗ್ಗೆ ಕೇಳಿದ್ರೆ ಬಿಜೆಪಿ ಅವರು ಮಾತಾಡ್ತಾರೆ. ಅವರ ಪಕ್ಷದ ಬಗ್ಗೆ ಕೇಳಿದ್ರೆ‌ ಮಾತಾಡಲ್ಲ. ಅಡ್ಡ ಮತದಾನ ಬಗ್ಗೆ, ಸದಾನಂದ ಗೌಡ ಆಡಿಯೋ ಬಗ್ಗೆ ಮಾತಾಡಿದ್ರೆ ಉತ್ತರ ಕೊಡೊಲ್ಲ. ಸದಾನಂದಗೌಡರೇ ನೀವು ದೂರು ಕೊಟ್ಟರೆ ಪರಿಶೀಲನೆ ಮಾಡಿ ಯಾರ ಧ್ವನಿ ಅಂತ ಹೇಳ್ತೀನಿ. ನಾನೇ ಈಗ ಗೃಹ ಸಚಿವ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಡಿಲಿಮಿಟೇಷನ್ ಮಾಡಲು 2/3 ಮೆಜಾರಿಟಿಗಾಗಿ ಎಸ್ಪಿ, ಡಿಎಂಕೆ ಸೇರಿ ಹಲವರು ಪಕ್ಷಗಳಿಗೆ ಹೊಡೆಯುತ್ತಿದ್ದಾರೆ. ಮೆಜಾರಿಟಿ ಬಂದರೆ ಡಿಲಿಮಿಟೇಷನ್ ಕಾಯ್ದೆ ತರೋದು ಇವರ ಹುನ್ನಾರಯಾರಿಗೆ ಬೇಕು ಅವರ ಮತ ಕಟ್ ಮಾಡೋಕೆ ಮಾಡ್ತಾ ಇದ್ದಾರೆ. ಅಸ್ಸಾಂನಲ್ಲಿ ಡಿಲಿಮಿಟೇಷನ್ ಮಾಡ್ತಾರೆ ಎಂದು ಆರೋಪಿಸಿದರು.

ಮತಗಳು ರದ್ದು ಆಗೋ ಆತಂಕ ಇದೆಯಾ ಎಂಬ ಪ್ರಶ್ನೆಗೆ, ವ್ಯವಸ್ಥಿತವಾಗಿ ಚುನಾವಣಾ ಆಯೋಗ ಇದನ್ನ ಮಾಡ್ತಿದೆ. ಕೇಂದ್ರ ಸರ್ಕಾರ ಚುನಾವಣೆ ಆಯೋಗವನ್ನ ಕೈಗೊಂಬೆ ಮಾಡಿಕೊಂಡಿದೆ. ಚೀಫ್ ಎಲೆಕ್ಷನ್ ನೇಮಕ ಮಾಡುವ ಪ್ಯಾನಲ್‌ನಲ್ಲಿ ಸಿಜೆ ತೆಗೆದ್ರು. ಕೇಂದ್ರದ ಮಂತ್ರಿಯನ್ನ ಸೇರಿಸಿದ್ರು. 80 ಎಂಪಿಗಳನ್ನ ಅಮಾನತು ಮಾಡಿ ಚುನಾವಣಾ ಆಯೋಗಕ್ಕೆ ಪ್ರಶ್ನೆ ಮಾಡದಂತೆ ಅಧಿಕಾರ ಕೊಟ್ಟರು ಎಂದು ಸೂಚಿಸಿದರು.

ಅದಾದ ಮೇಲೆ SIR ಮಾಡ್ತಾ ಇದ್ದಾರೆ. ಬೆಂಗಾಲ್, ಬಿಹಾರ್, ಸೇರಿ ಹಲವರು ಕಡೆ SIR ತಂದರು. ಅನೇಕ ಕಡೆ ಮತ ತೆಗೆದರು. ಮತ ರದ್ದು ಆಗಿರೋರು ಟ್ರುಬ್ಯುನಲ್ ಮುಂದೆ ಹೋಗಿ ಅಂತ ಟ್ರಿಬ್ಯುನಲ್ ಮಾಡಿದ್ರು. ಟ್ರಿಬ್ಯುನಲ್ ಅಧ್ಯಕ್ಷರು ರಾಜೀನಾಮೆ ಕೊಟ್ಟರು. ಇದು ನಿಮ್ಮ ಹಕ್ಕು ಕಸಿಯಲು ಮಾಡ್ತಾ ಇದ್ದಾರೆ ಅಂತ ಆರೋಪ ಮಾಡಿದ್ದಾರೆ.

Share it :

Leave a Reply

Your email address will not be published. Required fields are marked *