‘ಮೋದಿ ಮೋದಿ’ ಅಂತಾ ಕೂಗಿದ ಜನರು: ‘ಮೋದಿನೇ ಡಿಕೆ ಡಿಕೆ ಅಂತಿದ್ದಾರೆ.. ನೀವು ಮೋದಿ ಮೋದಿ ಅಂತಿದ್ದೀರಾ? ಡಿಕೆಶಿ ಟಾಂಗ್

ಬೆಂಗಳೂರು: ಮೋದಿ ಮೋದಿ’ ಅಂತಾ ಕೂಗಿದ ಜನರು: ‘ಮೋದಿನೇ ಡಿಕೆ ಡಿಕೆ ಅಂತಿದ್ದಾರೆ.. ನೀವು ಮೋದಿ ಮೋದಿ ಅಂತಿದ್ದೀರಾ? ಎಂದು ಸಿಎಂ ಡಿಕೆ ಶಿವಕುಮಾರ್‌ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿ ಆಯೋಜಿಸಿದ್ದ ಫ್ರೀಡಂ ಹಬ್ಬ ಸಮಾರಂಭದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡುವಾಗ ಜನರು, ‘ಮೋದಿ ಮೋದಿ’.. ಅಂತ ಕೂಗಿದ್ದರು ಈ ಕಾರಣಕ್ಕೆ ಡಿಕೆಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಸಮಾರಂಭದಲ್ಲಿ ಸಿಎಂ ಮಾತು ಆರಂಭಿಸುತ್ತಿದ್ದಂತೆ ಜನರು, ‘ಮೋದಿ ಮೋದಿ’ ಅಂತಾ ಕೂಗಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, ‘ಮೋದಿನೇ ಡಿಕೆ ಡಿಕೆ ಅಂತಿದ್ದಾರೆ.. ನೀವು ಮೋದಿ ಮೋದಿ ಅಂತಿದ್ದೀರಾ’ ಎಂದು ಜನರಿಗೆ ಟಾಂಗ್ ಕೊಟ್ಟರು. ಆಗ ಮತ್ತೆ ಜನರು, ‘ಡಿಕೆ ಡಿಕೆ’ ಅಂತ ಕೂಗಿದರು.
ಇಂದು ಮಧ್ಯಾಹ್ನ 15 ಸಾವಿರ ಮಂದಿ ವಿಧಾನಸೌಧಕ್ಕೆ ಬಂದಿದ್ದರು ಎನ್ನಲಾಗಿದೆ.

ಮೊದಲು ಜನ ಇಲ್ಲಿ ಬಂದು ಪೋಟೊ ತೆಗೆದುಕೊಂಡು, ಕಡಲೆಕಾಯಿ ತಿನ್ಕೊಂಡು ಹೋಗ್ತಿದ್ರು. ಈ ದೇಗುಲದಲ್ಲಿ ನೀವು ನಾವು ಸೇರಿದ್ದು ಒಂದು ಪುಣ್ಯ. ನನಗೆ ಭಾಷಣ ಮುಖ್ಯ ಅಲ್ಲ. ನಿಮ್ಮನ್ನು ಭೇಟಿ ಮಾಡಲು ಬಂದಿದ್ದೇನೆ ಎಂದರು.

ಅಭಿವೃದ್ಧಿಶೀಲ ರಾಷ್ಟ್ರ ಮಾಡಲು ಪ್ರಯತ್ನ ಮಾಡ್ತಾ ಇದ್ದೇವೆ. ಭಾರತ್ ಜೋಡೊದಲ್ಲಿ ನಿಮಗೆಲ್ಲಾ ಅವಕಾಶ ಇದೆ. ಆ ಸ್ಪರ್ಧೆಯಲ್ಲಿ ನೀವೆಲ್ಲಾ ಪಾಲ್ಗೊಳ್ಳಬೇಕು. ನೀವು ಭವಿಷ್ಯ ದೇಶದ ಶಕ್ತಿ.ಮುಂದೆ ಇನ್ನೂ ಹೆಚ್ಚಿನ ಕಾರ್ಯಕ್ರಮ ಮಾಡೋಣ. ಯಾರಿಗೂ ಯಾವುದೇ ತೊಂದರೆ ಆಗದೇ ರಕ್ಷಣೆ ಕೊಡಬೇಕು. ಎಲ್ಲಾ ನಿಲ್ಲಿಸಿ ನಮ್ಮ ಸರ್ಕಾರಕ್ಕೆ ಈ ರಾಜ್ಯಕ್ಕೆ ಆರ್ಶೀವಾದ ಮಾಡಿ ಅಂತಾ ಯುವಜನತೆ, ಜನರಲ್ಲಿ ಸಿಎಂ ಮನವಿ ಮಾಡಿದರು.

80ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆ ಕೋರುತ್ತೇನೆ. ಇದು ನವಯುಗ, ಇದು ನಿಮ್ಮ ಯುಗ, ನವ ಕರ್ನಾಟಕ, ನಿಮ್ಮ ಬೆಂಗಳೂರು. ನಮ್ಮ ಹಿರಿಯರು ಕೊಟ್ಟ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ನಾವು ಇದನ್ನ ಉಳಿಸಿಕೊಳ್ಳಬೇಕು. ಇಡೀ ದೇಶ ನಿಮ್ಮನ್ನ ನೋಡ್ತಾ ಇದೆ.

ಇನ್ನು ಹನೂರಿನಲ್ಲಿ ನಡೆದಿರುವ ಶೂಟೌಟ್ ಪ್ರಕರಣ ಬಗ್ಗೆ ಮಾತನಾಡಿ,ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿದ್ದು, ತನಿಖೆ ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾವೇರಿ ವನ್ಯಜೀವಿ ಅಭಯಾರಣ್ಯದ ಅಡಿಯಲ್ಲಿ ಬರುವ ಮೀಸಲು ಅರಣ್ಯ ಪ್ರದೇಶದಲ್ಲಿ ಬೆಳಿಗ್ಗೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ, ಬೇಟೆಯಾಡುವ ಬಗ್ಗೆ ಮಾಹಿತಿಯ ಮೇರೆಗೆ ಅರಣ್ಯ ಸಿಬ್ಬಂದಿ ನಾಲ್ವರು ವ್ಯಕ್ತಿಗಳ ಜೊತೆ ಚಕಮಕಿ ನಡೆಸಿದ್ದಾರೆ.

ಈ ಬಗ್ಗೆ ಬೆಳಗ್ಗೆ 5 ಗಂಟೆಗೆ ಮಾಹಿತಿ ಬಂದಿದೆ. ತನಿಖೆ ಬಳಿಕ ವಾಸ್ತವಾಂಶ ತಿಳಿಯುತ್ತದೆ. ಅರಣ್ಯ ಪ್ರದೇಶದಲ್ಲಿ ಶೂಟೌಟ್ ನಡೆದಿದ್ದು, ಅನೇಕ ಸಾಕ್ಷಿಗಳು ವಸ್ತುಗಳು, ಬಂದೂಕು ವಶಪಡಿಸಿಕೊಳ್ಳಲಾಗಿದೆ. ಮಾಧ್ಯಮಗಳು ಕೆಲವು ವಿಚಾರ ಪ್ರಸಾರ ಮಾಡುತ್ತಿವೆ. ಕೆಲವರನ್ನು ಬಂಧಿಸಲಾಗಿದ್ದು, ಶವ ಪರೀಕ್ಷೆಗೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others