ಪ್ರಿಯಾಂಕ್ ಖರ್ಗೆ ಅವರೇ ಸದಾಶಿವನಗರದಂತಹ ಏಷಾರಾಮಿ ಬಂಗಲೆಗಳಲ್ಲಿ ಬರೀ ರಾಜಕೀಯ ವ್ಯಕ್ತಿಗಳೇ ಇರೋದು : ಪ್ರತಾಪ್ ಸಿಂಹ

ಮೈಸೂರು: ಬೆಲೆ ಏರಿಕೆ ವಿಚಾರವಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ‘ದಗಾಕೋರ ಸರ್ಕಾರ’ ಎಂದು ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಇದೇ ವೇಳೆ ರಾಜ್ಯ ಗೃಹಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ, ‘ಪ್ರಿಯಾಂಕ್ ಅಣ್ಣ ನಿಮ್ ಅಪ್ಪನ್ನ ಗುರುಮಿಠ್ಕಲ್ ನಲ್ಲಿ ಗೆಲ್ಲಿಸಿದ್ದೇ ಹಳ್ಳಿಗುಗ್ಗುಗಳು.

ಇವತ್ತು ನಿಮ್ ಅಪ್ಪನ ಬಲದಿಂದ ಡಾಲರ್ಸ್ ಕಾಲನಿಯಲ್ಲಿ ಮನೆ ಮಾಡಿದ್ದೀರ. ನಿಮ್ ಅಪ್ಪ ಚಿತ್ತಾಪುರಕ್ಕೆ ಹಾರಿದ್ರು.. ಆ ಸೀಟ್ ಅನ್ನ ನೀನು ಕಿತ್ಕೊಂಡು, ನಿಮ್ ಅಪ್ಪನ್ನ ಪಾರ್ಲಿಮೆಂಟ್ ಗೆ ಕಳಿಸಿ ಈಗ ನೀನ್ ಬಂದು ಚಿತ್ತಾಪುರದಲ್ಲಿ ಮೂರು ಬಾರಿ ಗೆದ್ದಿದ್ದೀರಿ.

ಏನ್ ನೀವು ಚಿತ್ತಾಪುರನ ಚಿಕಾಗೋ ಮಾಡಿದ್ದೀರಾ? ಹಳ್ಳಿಗುಗ್ಗು ಅಂತೀರಲ್ಲ.. ಚಿತ್ತಾಪುರದಲ್ಲಿ ಹಳ್ಳಿಯವರು ಇಲ್ಲವಾ? ಬಡವರಿಲ್ವಾ.. ಎಲ್ಲರೂ ಸಿರಿವಂತರೇನಾ? ಅವರಿಂದ ವೋಟ್ ಪಡೆದು ಗೆದ್ದಿದ್ದೀರಾ? ಎಂದು ಕಿಡಿಕಾರಿದ್ದಾರೆ.

ಹಳ್ಳಿ ಗುಗ್ಗು ಅಂತ ಸಾಮಾನ್ಯ ಹಳ್ಳಿಯವರನ್ನ ತಾತ್ಸಾರಿಂದ ನೋಡುತ್ತೀರಲ್ಲ.. ಪ್ರಿಯಾಂಕ್ ಖರ್ಗೆ ಅವರೇ ಸದಾಶಿವನಗರದಂತಹ ಏಷಾರಾಮಿ ಬಂಗಲೆಗಳಲ್ಲಿ ಬರೀ ರಾಜಕೀಯ ವ್ಯಕ್ತಿಗಳೇ ಇರೋದು.. ಅಲ್ಲಿದ್ದುಕೊಂಡು ನೀವು ಹಳ್ಳಿಗರ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದಾರೆ.

ಇಲ್ಲಿ ಸರ್ಕಾರ ಬಡವಾಗುತ್ತಿದೆ. ಆದರೆ ಸರ್ಕಾರ ನಡೆಸುತ್ತಿರುವವರು ಮಾತ್ರ ಶ್ರೀಮಂತರಾಗುತ್ತಿದ್ದಾರೆ. ಸಿಎಂ ಡಿಕೆ ಶಿವಕುಮಾರ್ ಅವರ ಚುನಾವಣಾ ಅಫಿಡವಿಟ್ ನೋಡಿದ್ರೆ ಅವರು ಶ್ರೀಮಂತರಾಗುತ್ತಲೇ ಇದ್ದಾರೆ.

ಮಾತ್ರವಲ್ಲ ಕೆಜೆ ಜಾರ್ಜ್, ಬೈರತಿ ಸುರೇಶ್ ರಂತಹ ಹಲವು ಶ್ರೀಮಂತರು ನಿಮ್ಮ ಸರ್ಕಾರದಲ್ಲಿದ್ದಾರೆ. ನಿಮ್ಮ ಸಂಪುಟದಲ್ಲಿರುವವರೆಲ್ಲರೂ ಶ್ರೀಮಂತರೇ.. ಆದರೆ ಸರ್ಕಾರ ಮಾತ್ರ ಏಕೆ ಬಡವಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಮಾತ್ ಎತ್ತಿದ್ರೆ ಕೇಂದ್ರ ಸರ್ಕಾರದತ್ತ ಬೊಟ್ಟು ತೋರಿಸುತ್ತೀರಿ. ಬೇರೆ ರಾಜ್ಯದಲ್ಲಿ ದರಗಳ ಹೋಲಿಕೆ ಮಾಡ್ತೀರಾ.. ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ದರ ಎಷ್ಟಿದೆ? ಇಲ್ಲಿ ವ್ಯಾಟ್ ಶೇ.29ರಷ್ಟು ಸಂಗ್ರಹಿಸುತ್ತಿದ್ದೀರ. ಇದನ್ನು ರೂಪಾಯಿಗೆ ಪರಿವರ್ತಿಸಿದರೆ 22-23ರೂ ಆಗುತ್ತದೆ. ಮೊದಲು ಇದನ್ನು ಕಡಿಮೆ ಮಾಡಿ. ಎಲ್ಲದಕ್ಕೂ ಯಾಕೆ ಕೇಂದ್ರ ಸರ್ಕಾರವನ್ನ ದೂರುತ್ತೀರಿ. ಕರ್ನಾಟಕ ಸ್ಟೇಟ್ ಟ್ಯಾಕ್ಸ್ ಇದೆ. ಅದನ್ನು ಏಕೆ ಜಾಸ್ತಿ ಮಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ರಾಜ್ಯ ಗೃಹಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ, ‘ಪ್ರಿಯಾಂಕ್ ಅಣ್ಣ ನಿಮ್ ಅಪ್ಪನ್ನ ಗುರುಮಿಠ್ಕಲ್ ನಲ್ಲಿ ಗೆಲ್ಲಿಸಿದ್ದೇ ಹಳ್ಳಿಗುಗ್ಗುಗಳು.

ಇವತ್ತು ನಿಮ್ ಅಪ್ಪನ ಬಲದಿಂದ ಡಾಲರ್ಸ್ ಕಾಲನಿಯಲ್ಲಿ ಮನೆ ಮಾಡಿದ್ದೀರ. ನಿಮ್ ಅಪ್ಪ ಚಿತ್ತಾಪುರಕ್ಕೆ ಹಾರಿದ್ರು.. ಆ ಸೀಟ್ ಅನ್ನ ನೀನು ಕಿತ್ಕೊಂಡು, ನಿಮ್ ಅಪ್ಪನ್ನ ಪಾರ್ಲಿಮೆಂಟ್ ಗೆ ಕಳಿಸಿ ಈಗ ನೀನ್ ಬಂದು ಚಿತ್ತಾಪುರದಲ್ಲಿ ಮೂರು ಬಾರಿ ಗೆದ್ದಿದ್ದೀರಿ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post