ಹಯಗ್ರೀವ ಮೂರ್ತಿಗೆ ಭಕ್ತಿಪೂರ್ಣಸ್ವಾಗತ ಕೋರಿದ ಶ್ರೀರಂಗಪಟ್ಟಣದ ಜನತೆ

ಶ್ರೀರಂಗಪಟ್ಟಣ: ರಾಂಪುರ ಗ್ರಾಮದಲ್ಲಿ ಹಯಗ್ರೀವ ಮೂರ್ತಿ ಪ್ರತಿಷ್ಠಾಪನೆಗಾಗಿ ಶ್ರೀರಂಗ ಪಟ್ಟಣದ ಮುಖ್ಯ ಬೀದಿಯಲ್ಲಿ ಉತ್ಸವ ಆಯೋಜಿಸಿದ್ದ ರಾಂಪುರ ಗ್ರಾಮದ ಜನತೆಯಿಂದ ಇಡೀ ಪಟ್ಟಣದ ಜನತೆ ಉತ್ಸವದಲ್ಲಿ ಭಾಗವಹಿಸಿ ಧನ್ಯತೆ ಮೆರೆದರು. ಪುರಜನರೊಂದಿಗೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉತ್ಸವದಲ್ಲಿ ಪಾಲ್ಗೊಂಡು ಭಕ್ತಿಯಲ್ಲಿ ಮಿಂದರು.

ಮೈಸೂರು ಜಿಲ್ಲೆಯ ತಾಂಡವಪುರದಲ್ಲಿ ಈ ವಿಗ್ರಹವನ್ನು ಕೆತ್ತನೆ ಮಾಡಿದ ಶಿಲ್ಪಿ ಅರುಣಯೋಗಿ ಅವರೊಂದಿಗೆ ಅಲಂಕೃತಗೊಂಡ ಪಲ್ಲಕ್ಕಿ ಉತ್ಸವ ವಿಗ್ರಹವನ್ನು ಬೀಳ್ಕೊಡಲು ಮೈಸೂರಿನ ಪರಮಶಿವಮಠದಿಂದ ಹೊರಟ ಉತ್ಸವವು ಒಂಟಿಕೊಪ್ಪಲು ವೆಂಕಟರಮಣ ಸ್ವಾಮಿ ದೇಗುಲದ ಮಾರ್ಗವಾಗಿ ಪಂಪ ಹೌಸ್, ಪಾಲಹಳ್ಳಿ, ಡೊಳ್ಳು ಕುಣಿತ, ವೀರಗಾಸೆ, ನಾದಸ್ವರ, ಪುಷ್ಪಾಭಿಷೇಕದೊಂದಿಗೆ ಶ್ರೀರಂಗಪಟ್ಟಣದ ಜನತೆ ಭವ್ಯ ಮೂರ್ತಿಯನ್ನು ಸ್ವಾಗತಿಸಿ ಭಕ್ತಿಯಲ್ಲಿ ಮೈಮರೆತರು. ನಂತರ ಶ್ರೀರಂಗಪಟ್ಟಣದ ಬನ್ನಿಮಂಟಪ ಮಾರ್ಗವಾಗಿ ಕೆಂಗಾರ ಕೊಪ್ಪಲು, ರಾಂಪುರ ಗ್ರಾಮದ ರಾಮಲಿಂಗೇಶ್ವರ ದೇಗುಲ(ಮೂಲ ಗೌತಮಮುನಿ ಕ್ಷೇತ್ರ)ದ ಬಳಿ ತಂಗಿತು.

ರಾವ್ಪುರ ಗ್ರಾಮದ ಸಾವಯವ ಕೃಷಿ ಉದ್ಯಮಿ ಸತ್ಯವತಿ ಕೃಷ್ಣ ಪ್ರಸಾದ್ ಮಾತನಾಡಿ ಹಳೆಯದಾದ ಆಂಜನೇಯ ದೇಗುಲವನ್ನು ನವೀಕರಿಸಿ ಹಯಗ್ರೀವ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಕೈಗೊಂಡಿದೆ. ಹಯಗ್ರೀವ ಎಂದರೆ ವಿದ್ಯೆಗೆ ಅಧಿಪತಿ, ಕುದುರೆ ಮುಖದ ವಿಷ್ಣು ರೂಪ ದೇವಾಲಯದ ಎದುರು ಶಾಲೆಯು ಅದನ್ನು ಉನ್ನತೀಕರಿಸುತ್ತದೆ, ಭವಿಷ್ಯದ ಮಕ್ಕಳ ವಿದ್ಯಾ ಬುದ್ಧಿಗೆ ದೇವರ ಕೃಪೆ ಇರಲೆಂದು ಹೇಳುತ್ತಾರೆ.

ಉತ್ಸವದಲ್ಲಿ ರಾವ್ಪುರದ ದರಸಗುಪ್ಪೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುರುಳಿ, ಮಾಜಿ ಸದಸ್ಯ ಗುರುಪ್ರಸಾದ್, ಮುಖಂಡ ಸತೀಶ್ ,ಚಂದ್ರಶೇಖರ, ರಾಮಚಂದ್ರ ,ವೆಂಕಟೇಶ್ ಶ್ಯಾಮ್, ಪ್ರೀತಂ ,ರಾಜು, ಕೆ ಎಸ್,ಜಯಶಂಕರ್, ಕ್ಯಾತನಹಳ್ಳಿ ಅಮಿತ್ ಕೃಷ್ಣ, ಚಿತ್ರನಟ ಕೇಶವ್ ಮುಂತಾದ ಪ್ರಮುಖ ಕಂಪನಿಗಳು ಭಾಗವಹಿಸಿದ್ದರು.

Share it :

Leave a Reply

Your email address will not be published. Required fields are marked *