ಕೇಂದ್ರ ಸಚಿವರು ರಾಜಕೀಯವಾಗಿ ತಾವು ಒಬ್ಬರೇ ಮುಳುಗಲು ಸಿದ್ಧರಿಲ್ಲ : ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ತನ್ನ ಹಾಗೂ ಸಚಿವ ಸಂಪುಟ ಸಹೋದ್ಯೋಗಿಗಳ ವಿರುದ್ಧ ಆದಾಯ ತೆರಿಗೆ ಇಲಾಖೆ (IT) ಮತ್ತು ಜಾರಿ ನಿರ್ದೇಶನಾಲಯವನ್ನು (ED) ಛೂಬಿಡಲು ಕೇಂದ್ರ ಸಚಿವರೊಬ್ಬರು ಪ್ರಧಾನಿ ಮೋದಿ( ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಕೆಪಿಎಸ್‌ಸಿ ನೇಮಕಾತಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ನನ್ನ ಹೆಸರನ್ನು ಸುಳ್ಳಾಗಿ ಸಿಲುಕಿಸಲು ಆರೋಪಿಗಳ ಮೇಲೆ ಇಡಿ ಮೂಲಕ ತೀವ್ರ ಒತ್ತಡ ಹೇರಲಾಗುತ್ತಿದೆ. ಆರ್‌ಎಸ್‌ಎಸ್‌ನ ಇತ್ತೀಚಿನ ‘ಗ್ರೂಪ್-ಡಿ’ ನೇಮಕಾತಿಯಂತಿರುವ ವ್ಯಕ್ತಿಯೊಬ್ಬರು ಈ ಹುನ್ನಾರದ ಹಿಂದೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ತಮ್ಮನ್ನು ತಾವು ‘ಅತ್ಯಂತ ಕಠಿಣ ಪರಿಶ್ರಮಿ’ ಎಂದು ಕರೆದುಕೊಳ್ಳುವ ಈ ಮಾನ್ಯ ಕೇಂದ್ರ ಸಚಿವರು ರಾಜಕೀಯವಾಗಿ ತಾವು ಒಬ್ಬರೇ ಮುಳುಗಲು ಸಿದ್ಧರಿಲ್ಲ. ತಮ್ಮ ಹತಾಶೆಯ ಪರಾಕಾಷ್ಠೆಯಲ್ಲಿ ಅವರು ತಮ್ಮ ಮೈತ್ರಿಕೂಟದ ಪಾಲುದಾರರನ್ನೂ ಜೊತೆಯಲ್ಲೇ ಮುಳುಗಿಸಲು ಹವಣಿಸುತ್ತಿದ್ದಾರೆ ಎಂದು ಪ್ರಿಯಾಂಕ್‌ ವ್ಯಂಗ್ಯವಾಡಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ದಾಳಿ ನಡೆಸಲು ಸಿದ್ಧತೆ ನಡೆಯುತ್ತಿರುವ ಬಗ್ಗೆ ದೆಹಲಿಯ ಅಧಿಕಾರದ ಕಾರಿಡಾರ್‌ನಲ್ಲಿ ಮಾತುಗಳು ಕೇಳಿಬರುತ್ತಿವೆ ಎಂದು ತಿಳಿಸಿದ್ದಾರೆ.

Share it :

Leave a Reply

Your email address will not be published. Required fields are marked *